ಸಾಸಿವೆಯಲ್ಲಿ ಚಿತ್ರ ರಚನೆ : ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ

New Project (6)
Published on

ಬೆಳ್ತಂಗಡಿ: ತಣ್ಣೀರುಪಂತದ ಗ್ರಾಮದ ಅಳಕ್ಕೆ ಮಡ್ಯೋಟ್ಟು ನಿವಾಸಿ ಎಂ.ಕೀರ್ತನ್ ರಚಿಸಿದ ಚಿತ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗೆ ಸೇರಿದೆ. ಸಾಸಿವೆಕಾಳನ್ನು ಬಳಸಿ ಹುತಾತ್ಮ, ಸ್ವಾಂತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಚಿತ್ರ ರಚಿಸಿದ್ದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಪದಾಕೀಯ ಮಂಡಳಿ ಅನುಮೋದಿಸಿ ದಾಖಲಿಸಿಕೊಂಡಿದೆ.

9 ನಿಮಿಷದಲ್ಲಿ 10 ಸೆಂ.ಮೀ ಉದ್ದ ಚಿತ್ರ: ತಣ್ಣೀರುಪಂತದ ರುದ್ರಗಿರಿ ಮೃತ್ಯುಂಜಯ ದೇವಸ್ಥಾನದ ಆವರಣದಲ್ಲಿ ಕೀರ್ತನ್ ಸಾಸಿವೆಯನ್ನು ಬಳಸಿ ಕೇವಲ 10 ಸೆಂ.ಮೀ. ವ್ಯಾಪ್ತಿಯೊಳಗೆ 9 ನಿಮಿಷ 12 ಸೆಕೆಂಡುಗಳಲ್ಲಿ ಚಿತ್ರವನ್ನು ಪೂರ್ಣಗೊಳಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ತಮ್ಮ ಹೆಸರು ದಾಖಲಿಸಿದ್ದಾರೆ.

ಕೀರ್ತನ್ ಧರ್ಣಪ್ಪ ಪೂಜಾರಿ ಮತ್ತು ಜಯಂತಿ ದಂಪತಿ ಪುತ್ರ. ಉಪ್ಪಿನಂಗಡಿಯಲ್ಲಿ ರಾತ್ರಿ ಅರೆಕಾಲಿಕ ಉದ್ಯೋಗ ಮಾಡಿ ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ 3ನೇ ವರ್ಷದ ಪದವಿ ವಿದ್ಯಾರ್ಜನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net