54ನೇ ವಸಂತಕ್ಕೆ ರಾಹುಲ್​ ಗಾಂಧಿ..ಕಾರ್ಯಕರ್ತರು ದಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದ ಖರ್ಗೆ!

1 Min Read
54ನೇ ವಸಂತಕ್ಕೆ ರಾಹುಲ್​ ಗಾಂಧಿ..ಕಾರ್ಯಕರ್ತರು ದಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದ ಖರ್ಗೆ!

ನವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಬುಧವಾರ(ಜೂ.19) 54ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರಿಗೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ‘ಇಂಡಿಯಾ’ ಕುಟದ ಹಲವು ನಾಯಕರು ಶುಭ ಕೋರಿದ್ದಾರೆ.

ಇದನ್ನೂ ಓದಿ: ಬಿಹಾರ: ಉದ್ಘಾಟನೆಗೆ ಮುನ್ನವೇ ಕುಸಿದು ಬಿದ್ದ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಬೃಹತ್​ ಸೇತುವೆ

ರಾಹುಲ್​ ಜನ್ಮದಿನಕ್ಕೆ ಯಾವುದೇ ಅದ್ಧೂರಿ ಆಚರಣೆ ಬೇಡ. ಸಂದರ್ಭವನ್ನು ಮಾನವೀಯ ಪ್ರಯತ್ನಗಳು ಮತ್ತು ದಾನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆಚರಿಸಲು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚನೆ ನೀಡಿರುವುದಾಗಿ ಎಕ್ಸ್‌ನಲ್ಲಿನ ಪೋಸ್ಟ್​ ಹಾಕಿ ಖರ್ಗೆ ತಿಳಿಸಿದ್ದಾರೆ.

“ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ನಿಮ್ಮ ಅಚಲವಾದ ಬದ್ಧತೆ ಮತ್ತು ಧ್ವನಿಯಿಲ್ಲದವರ ಪರ ನಿಮ್ಮ ದೃಢವಾದ ಸಹಾನುಭೂತಿ, ನಿಮ್ಮನ್ನು ಪ್ರತ್ಯೇಕಿಸುವ ಗುಣಗಳು ಎಂದು ಖರ್ಗೆ ಬರೆದಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ “ಜನ್ಮದಿನದ ಶುಭಾಶಯಗಳು ಆತ್ಮೀಯ ಸಹೋದರ ರಾಹುಲ್ ಗಾಂಧಿ..ನಮ್ಮ ದೇಶದ ಜನರಿಗೆ ನಿಮ್ಮ ಸಮರ್ಪಣೆಯು ನಿಮ್ಮನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತದೆ. ನಿಮಗೆ ನಿರಂತರ ಪ್ರಗತಿ ಮತ್ತು ಯಶಸ್ಸಿನ ವರ್ಷವನ್ನು ಹಾರೈಸುತ್ತೇನೆ” ಎಂದು ಎಕ್ಸ್ ನಲ್ಲಿ ಹೇಳಿದ್ದಾರೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ,ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಶುಭ ಹಾರೈಸಿದ್ದಾರೆ.

ರಾಜನ ಬರ್ತ್ ಡೇಗೆ ಕಾವಲಿದ್ದಾಗಲೇ ಚುಂಬಿಸಿ ಮದುವೆ​..ಬಕಿಂಗ್​ಹ್ಯಾಂ ಪ್ಯಾಲೇಸ್​ನಲ್ಲಿ ವಿಚಿತ್ರ ವಿವಾಹ!

See also  ಶ್ರೀಶೈಲಕ್ಕೆ ಬಿಹಾರ ಕಾಂಗ್ರೆಸ್​ ಶಾಸಕರ ಸ್ಥಳಾಂತರ!
Share This Article