More

    ಭಾರತ-ಅಮೆರಿಕ ಆಯುರ್ವೇದ ವೈದ್ಯರಿಂದ ಜಂಟಿಯಾಗಿ ಕೋವಿಡ್​-19 ಔಷಧ ಪರೀಕ್ಷೆ

    ವಾಷಿಂಗ್ಟನ್​: ಕೋವಿಡ್​-19 ವಿಶ್ವವ್ಯಾಪಿಯಾಗಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಅಯುರ್ವೇದ ಔಷಧ ಅಭಿವೃದ್ಧಿಪಡಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ, ಇದಕ್ಕೆ ಕ್ಲಿನಿಕಲ್​ ಟ್ರಯಲ್​ ಅವಶ್ಯವಾಗಿರುವ ಕಾರಣ ಭಾರತ ಮತ್ತು ಅಮೆರಿಕದಲ್ಲಿ ನೆಲೆಸಿರುವ ಆಯುರ್ವೇದ ತಜ್ಞರು ಜಂಟಿಯಾಗಿ ಕೋವಿಡ್​-19 ಆಯುರ್ವೇದ ಔಷಧದ ಕ್ಲಿನಿಕಲ್​ ಟ್ರಯಲ್​ ಮಾಡಲು ನಿರ್ಧರಿಸಿದ್ದಾರೆ.

    ಭಾರತ ಮತ್ತು ಅಮೆರಿಕದ ವಿಜ್ಞಾನಿಗಳು, ಶಿಕ್ಷಣ ತಜ್ಞರು ಮತ್ತು ವೈದ್ಯರು ಬುಧವಾರದಂದು ಈ ಕುರಿತು ವರ್ಚುಯಲ್​ ಸಂವಾದ ನಡೆಸಿdರು ಎನ್ನಲಾಗಿದೆ.
    ಇದನ್ನು ಖಚಿತಪಡಿಸಿರುವ ಅಮೆರಿಕದಲ್ಲಿನ ಭಾರತದ ರಾಯಭಾರಿ ತರಣ್​ಜಿತ್​ ಸಿಂಗ್​ ಸಂಧು, ಸಾಂಸ್ಥಿಕ ಸಹಕಾರದ ಜಾಲ ಕೋವಿಡ್​-19ರ ವಿರುದ್ಧದ ಹೋರಾಟಕ್ಕೆ ಉಭಯ ರಾಷ್ಟ್ರಗಳ ವೈಜ್ಞಾನಿಕ ಸಮುದಾಯವನ್ನು ಮತ್ತಷ್ಟು ಹತ್ತಿರಾಗಿಸಿದೆ ಎಂದರು.

    ನಮ್ಮ ಸಂಸ್ಥೆಗಳು ಕೂಡ ಜಂಟಿ ಸಂಶೋಧನೆ, ಬೋಧನೆ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಾರತೀಯ ಸಂಸ್ಥೆಗಳು ಆಯುರ್ವೇದಕ್ಕೆ ಹೆಚ್ಚಿನ ಪ್ರಚಾರ ನೀಡಲು ನಿರಂತರವಾಗಿ ಪ್ರಯತ್ನಿಸುತ್ತವೆ. ಈ ವೇದಿಕೆಯನ್ನು ಬಳಸಿಕೊಂಡು ನಮ್ಮ ವಿಜ್ಞಾನಿಗಳು ತಮ್ಮ ಸಂಶೋಧನೆಯ ಪರಿಣತಿ ಮತ್ತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

    ಸಲಿಂಗಕಾಮಿ ವೈದ್ಯನಿಂದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ಹಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts