ಭಾರತ-ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಹಿಂದಿನ ಪಂದ್ಯಗಳ ಮೆಲುಕು...

india and pak match stats for web
Published on

ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಹೈವೋಲ್ಟೆಜ್ ಕದನವಿದ್ದಂತೆ. ಎರಡು ತಂಡಗಳ ಕದನ ವೀಕ್ಷಿಸಲು ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿರುತ್ತದೆ. ಏಕದಿನ, ಟಿ20 ವಿಶ್ವಕಪ್ ಟೂರ್ನಿಗಳ ಬಗ್ಗೆ ಹೇಳುವುದೇ ಬೇಡ. ಟಿ20 ವಿಶ್ವಕಪ್ ಹುಟ್ಟಿನಿಂದಲೂ ಭಾರತ ತಂಡವೇ ಪಾರಮ್ಯ ಸಾಧಿಸುತ್ತಾ ಬಂದಿದೆ. ಇದುವರೆಗೂ ನಡೆದಿರುವ 6 ಟೂರ್ನಿಗಳಲ್ಲಿ ಭಾರತ - ಪಾಕ್ 5 ಬಾರಿ ಎದುರಾಗಿವೆ. ಈ ಹಣಾಹಣಿಯಲ್ಲೂ ಭಾರತವೇ ಗೆಲುವು ಸಾಧಿಸಿದ್ದು, ಆ ಪಂದ್ಯಗಳ ಮೆಲುಕು ಇಲ್ಲಿದೆ...

* 2007: ಲೀಗ್ ಹಂತದಲ್ಲಿ ಮುಖಾಮುಖಿ

ಫಲಿತಾಂಶ: ಪಂದ್ಯ ಟೈ: ಬೌಲ್ಡ್ ಔಟ್ ಮೂಲಕ ಭಾರತಕ್ಕೆ ಜಯ

ಪಂದ್ಯದ ವಿವರ: ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಪಾಕ್ ನಾಯಕ ಶೋಯಿಬ್ ಮಲಿಕ್ ಭಾರತ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಕನ್ನಡಿಗ ರಾಬಿನ್ ಉತ್ತಪ್ಪ (50ರನ್, 39 ಎಸೆತ, 4 ಬೌಂಡರಿ, 2 ಸಿಕ್ಸರ್) ಮಿಂಚಿದರು. ಪಂದ್ಯ ಟೈಗೊಂಡ ಹಿನ್ನೆಲೆಯಲ್ಲಿ ಫಲಿತಾಂಶ ನಿರ್ಣಾಯಕ್ಕೆ ಬೌಲ್ಡ್ ಔಟ್ ಮೊರೆ ಹೋಗಬೇಕಾಯಿತು.

ಭಾರತ: 9 ವಿಕೆಟ್‌ಗೆ 141 (ರಾಬಿನ್ ಉತ್ತಪ್ಪ 50, ಧೋನಿ 33, ರ್ಇಾನ್ ಪಠಾಣ್ 20, ಮೊಹಮದ್ ಆಸಿಫ್ 18ಕ್ಕೆ 4, ಶಾಹಿದ್ ಆಫ್ರಿದಿ 37ಕ್ಕೆ 2), ಪಾಕಿಸ್ತಾನ: 7 ವಿಕೆಟ್‌ಗೆ 141 (ಮಿಸ್ಬಾ ಉಲ್ ಹಕ್ 53, ಶೋಯಿಬ್ ಮಲಿಕ್ 20, ಇರ್ಫ್ರಾನ್ ಪಠಾಣ್ 20ಕ್ಕೆ 2).

* 2007: ಫೈನಲ್ ಹಣಾಹಣಿ

ಫಲಿತಾಂಶ: ಭಾರತಕ್ಕೆ 5 ರನ್ ಜಯ

ಉಭಯ ತಂಡಗಳು ಫೈನಲ್‌ನಲ್ಲಿ ಮತ್ತೊಮ್ಮೆ ಎದುರಾದವು. ರೋಚಕ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಭಾರತ 5 ರನ್‌ಗಳಿಂದ ಪಾಕ್ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ (75ರನ್, 54 ಎಸೆತ, 8 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರೆ, ಬೌಲಿಂಗ್‌ನಲ್ಲಿ ಇರ್ಫಾನ್ ಪಠಾಣ್ (16ಕ್ಕೆ 3) ಪಾಕ್ ತಂಡಕ್ಕೆ ಕಡಿವಾಣ ಹೇರಿದರು.

ಭಾರತ: 5 ವಿಕೆಟ್‌ಗೆ 157 (ಗೌತಮ್ ಗಂಭೀರ್ 75, ರೋಹಿತ್ ಶರ್ಮ 30*, ಉಮರ್ ಗುಲ್ 28ಕ್ಕೆ 3), ಪಾಕಿಸ್ತಾನ: 19.3 ಓವರ್‌ಗಳಲ್ಲಿ 152 (ಇಮ್ರಾನ್ ನಜೀರ್ 33, ಮಿಸ್ಬಾ ಉಲ್ ಹಕ್ 43, ಯೂನಿಸ್ ಖಾನ್ 24, ಆರ್‌ಪಿ ಸಿಂಗ್ 26ಕ್ಕೆ3, ಇರ್ಫ್ರಾನ್ ಪಠಾಣ್ 16ಕ್ಕೆ 3, ಜೋಗಿಂದರ್ ಶರ್ಮ 20ಕ್ಕೆ 2).

------------

* 2012: ಲೀಗ್ ಹಂತದಲ್ಲಿ ಮುಖಾಮುಖಿ

ಫಲಿತಾಂಶ: ಭಾರತ ತಂಡಕ್ಕೆ 8 ವಿಕೆಟ್ ಜಯ

ಶ್ರೀಲಂಕಾದಲ್ಲಿ ನಡೆದ 4ನೇ ಆವೃತ್ತಿಯ ಟೂರ್ನಿಯಲ್ಲಿ ಉಭಯ ತಂಡಗಳು ಲೀಗ್ ಹಂತದಲ್ಲೇ ಮುಖಾಮುಖಿಯಾದವು. ಪಾಕ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಭಾರತ, ವಿರಾಟ್ ಕೊಹ್ಲಿ (78) ಅಜೇಯ ಬ್ಯಾಟಿಂಗ್ ನೆರವಿನಿಂದ ಸುಲಭ ಗೆಲುವು ದಾಖಲಿಸಿತ್ತು.

ಪಾಕಿಸ್ತಾನ: 19.4 ಓವರ್‌ಗಳಲ್ಲಿ 128 (ಮೊಹಮದ್ ಹಫೀಜ್ 15, ಶೋಯಿಬ್ ಮಲಿಕ್ 28, ಉಮರ್ ಅಕ್ಮಲ್ 21, ಎಲ್.ಬಾಲಾಜಿ 22ಕ್ಕೆ 3, ಆರ್.ಅಶ್ವಿನ್ 16ಕ್ಕೆ 2, ಯುವರಾಜ್ ಸಿಂಗ್ 16ಕ್ಕೆ 2). ಭಾರತ: 17 ಓವರ್‌ಗಳಲ್ಲಿ 2 ವಿಕೆಟ್‌ಗೆ 129 (ವೀರೇಂದ್ರ ಸೆಹ್ವಾಗ್ 29, ವಿರಾಟ್ ಕೊಹ್ಲಿ 78*, ಯುವರಾಜ್ ಸಿಂಗ್ 19*, ರಾಜಾ ಹಸನ್ 22ಕ್ಕೆ 1, ಶಾಹಿದ್ ಆಫ್ರಿದಿ 34ಕ್ಕೆ 1).

* 2014: ಲೀಗ್ ಹಂತದಲ್ಲಿ ಹೋರಾಟ

ಫಲಿತಾಂಶ: ಭಾರತಕ್ಕೆ 7 ವಿಕೆಟ್ ಜಯ

ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಟೂರ್ನಿಯಲ್ಲೂ ಭಾರತ ತಂಡ ಪಾರಮ್ಯ ಮುಂದುವರಿಸಿತು. ಸಂಘಟಿತ ಬೌಲಿಂಗ್ ನಿರ್ವಹಣೆಯಿಂದ ಮೊಹಮದ್ ಹಫೀಜ್ ಪಡೆಗೆ ಕಡಿವಾಣ ಹಾಕಿದ ಭಾರತ, ಸುಲಭವಾಗಿ ಗೆಲುವಿನ ದಡ ಸೇರಿತು.

ಪಾಕಿಸ್ತಾನ: 7 ವಿಕೆಟ್‌ಗೆ 130 (ಅಹಮದ್ ಶೆಜಾದ್ 22, ಉಮರ್ ಅಕ್ಮಲ್ 33, ಶೋಯಿಬ್ ಮಲಿಕ್ 18, ಶೋಯಿಬ್ ಮಕ್ಸೂದ್ 21, ಅಮಿತ್ ಮಿಶ್ರಾ 22ಕ್ಕೆ 2, ಮೊಹಮದ್ ಶಮಿ 31ಕ್ಕೆ 1, ಭುವನೇಶ್ವರ್ ಕುಮಾರ್ 21ಕ್ಕೆ 1), ಭಾರತ : 18.3 ಓವರ್‌ಗಳಲ್ಲಿ 3 ವಿಕೆಟ್‌ಗೆ 131 (ರೋಹಿತ್ ಶರ್ಮ 24, ಶಿಖರ್ ಧವನ್ 39, ವಿರಾಟ್ ಕೊಹ್ಲಿ 36*, ಸುರೇಶ್ ರೈನಾ 35*)

* 2016: ಲೀಗ್ ಹಂತದಲ್ಲಿ ಹೋರಾಟ

ಫಲಿತಾಂಶ: ಭಾರತಕ್ಕೆ 6 ವಿಕೆಟ್ ಜಯ

ಭಾರತದ ಕ್ರಿಕೆಟ್ ಕಾಶಿ ಎನಿಸಿಕೊಂಡಿರುವ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಸತತ 5ನೇ ಬಾರಿಗೆ ವಿಶ್ವಕಪ್‌ನಲ್ಲಿ ಪಾಕ್ ತಂಡವನ್ನು ಸೋಲಿಸಿತು. ಭಾರತದ ಬೌಲರ್‌ಗಳ ಮಾರಕ ದಾಳಿಗೆ ಪಾಕ್ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. ಬ್ಯಾಟರ್‌ಗಳು ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ಯಶಸ್ವಿಯಾದರು. ಮಳೆಯಿಂದಾಗಿ ಪಂದ್ಯವನ್ನು ತಲಾ 18 ಓವರ್‌ಗಳಿಗೆ ಇಳಿಸಲಾಗಿತ್ತು.

ಪಾಕಿಸ್ತಾನ: 18 ಓವರ್‌ಗಳಲ್ಲಿ 5 ವಿಕೆಟ್‌ಗೆ 118 (ಶೋಯಿಬ್ ಮಲಿಕ್ 26, ಉಮರ್ ಅಕ್ಮಲ್ 22, ಅಹಮದ್ ಶೆಜಾದ್ 25, ಆಶಿಶ್ ನೆಹ್ರಾ 20ಕ್ಕೆ 1, ಜಸ್‌ಪ್ರೀತ್ ಬುಮ್ರಾ 32ಕ್ಕೆ 1, ರವೀಂದ್ರ ಜಡೇಜಾ 20ಕ್ಕೆ 1), ಭಾರತ: 15.5 ಓವರ್‌ಗಳಲ್ಲಿ 4 ವಿಕೆಟ್‌ಗೆ 119 (ವಿರಾಟ್ ಕೊಹ್ಲಿ 55*, ಯುವರಾಜ್ ಸಿಂಗ್ 24, ಮೊಹಮದ್ ಶಮಿ 17ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net