

ಮೂಲ್ಕಿ: ಮೂಲ್ಕಿ ತಾಲೂಕು ಅಭಿವೃದ್ಧಿಗೆ ಮಾಡಲಾದ ಪ್ರಾಮಾಣಿಕ ಪ್ರಯತ್ನದಿಂದ ಶೀಘ್ರದಲ್ಲಿ ತಾಲೂಕು ವ್ಯಾಪ್ತಿಯ ಎಲ್ಲ ಕಚೇರಿಗಳನ್ನು ಒಂದೇ ಸೂರಿನಡಿ ಕಲ್ಪಿಸುವ ನೂತನವಾಗಿ ನಿರ್ಮಾಣಗೊಂಡ ಬಹುಕೋಟಿ ವೆಚ್ಚದ ಪ್ರಜಾಸೌಧ, ನೂತನ ಪ್ರವಾಸಿ ಮಂದಿರ ಲೋಕಾರ್ಪಣೆ ನಡೆಯಲಿದೆ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಕಾರ್ನಾಡು ಗಾಂಧಿ ಮೈದಾನದಲ್ಲಿ ಮೂಲ್ಕಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿದರು.
ಮೂಲ್ಕಿ ತಾಲೂಕು ತಹಸೀಲ್ದಾರ್ ಶ್ರೀಧರ ಮುಂದಲಮನಿ ಧ್ವಜಾರೋಹಣ ನೆರವೇರಿಸಿದರು. ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಮಾಜಿ ಅಧ್ಯಕ್ಷ ಸುನೀಲ್ ಆಳ್ವ, ಉಪಾಧ್ಯಕ್ಷೆ ಲಕ್ಷ್ಮೀ, ಮುಖ್ಯಾಧಿಕಾರಿ ಮಧುಕರ್, ಸದಸ್ಯರಾದ ವಿಮಲಾ ಪೂಜಾರಿ, ಪುತ್ತು ಬಾವ, ಹರ್ಷರಾಜ ಶೆಟ್ಟಿ, ದಯಾವತಿ ಅಂಚನ್, ಶೈಲೇಶ್ ಕುಮಾರ್, ರಾಧಿಕಾ ಕೋಟ್ಯಾನ್, ಸುಭಾಷ್ ಶೆಟ್ಟಿ, ಉಪತಹಸೀಲ್ದಾರ್ ದಿಲೀಪ್ ರೋಡ್ಕರ್, ವಿಲ್ಮಾ ರಸ್ಕಿನ, ಮೂಲ್ಕಿ ಪೊಲೀಸ್ ನಿರೀಕ್ಷಕ ಮಂಜುನಾಥ್ ಬಿ.ಎಸ್., ಉಪ ನಿರೀಕ್ಷಕ ಉಮೇಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ವೇದಾವತಿ, ಪಶುವೈದ್ಯಾಧಿಕಾರಿ ಡಾ.ವಿಶ್ವರಾಧ್ಯ, ವಿಜಯ ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್, ಹೋಮ್ ಗಾರ್ಡ್ ನಿವೃತ್ತ ಘಟಕಾಧಿಕಾರಿ ಮನ್ಸೂರ್, ವೈದ್ಯಾಧಿಕಾರಿ ಡಾ.ಸುನೀಲ್ ಜತ್ತನ್ನ, ನಿವೃತ್ತ ಯೋಧ ಎಂ.ಬಿ.ಖಾನ್ ಉಪಸ್ಥಿತರಿದ್ದರು.
ಸಾಧಕ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಮೂಲ್ಕಿ ಸರ್ಕಾರಿ ಜೂನಿಯರ್ ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್ ವಂದಿಸಿದರು. ವಕೀಲ ಭಾಸ್ಕರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 258 ಕೋಟಿ ರೂ.ವೆಚ್ಚದ ಮೂಲ್ಕಿ-ಮೂಡುಬಿದಿರೆ ಕ್ಷೇತ್ರದಲ್ಲಿ ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮಗಳಲ್ಲಿ ಜಲಜೀವನ್ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮೂಲ್ಕಿಗೆ ಮಂಜೂರಾದ ಅಗ್ನಿಶಾಮಕ ದಳದ ಘಟಕವನ್ನು ಸರ್ಕಾರ ಏಕಾಏಕಿ ಉಳ್ಳಾಲ ಕ್ಷೇತ್ರಕ್ಕೆ ವರ್ಗಾಯಿಸಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೋತ್ತರದಲ್ಲಿ ರಾಜ್ಯ ಗೃಹ ಸಚಿವರ ಬಳಿ ಧ್ವನಿ ಎತ್ತಿದ್ದು ಮೂಲ್ಕಿಗೆ ನೂತನ ಅಗ್ನಿಶಾಮಕ ದಳದ ಘಟಕ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. ಉಮಾನಾಥ ಕೋಟ್ಯಾನ್, ಶಾಸಕ