

ಮೂಡುಬಿದಿರೆ: ಪ್ರತಿಯೊಬ್ಬರು ಸ್ವಾಭಿಮಾನದಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಶ್ರಮಿಸಬೇಕು. ದೇಶದ ಸಂಪತ್ತನ್ನು ಸಮರ್ಪಕಾಗಿ ಬಳಸಿ ಹೆಚ್ಚು ದೇಶಿಯ ಉತ್ಪನ್ನ ಉತ್ಪಾದಿಸಿ, ಉಪಯೋಗಿಸಿ ಬೇರೆ ದೇಶದ ಹಂಗಿನಲ್ಲಿ ಬದುಕುವ ಸ್ಥಿತಿ ಭಾರತೀಯರಿಗಿಲ್ಲ ಎಂಬ ಸಂದೇಶ ಜಗತ್ತಿಗೆ ನೀಡುವ ಮೂಲಕ ಸ್ವಾವಲಂಬಿ, ದೇಶೀಯತೆ ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದಾಗಬೇಕು ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಪೂ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಗೈದು ಮಾತನಾಡಿದರು.
ಪ್ರಾಂಶುಪಾಲ, ಟ್ರಸ್ಟಿ ಡಾ.ಎಸ್.ಎನ್.ವೆಂಕಟೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶ್ರೀಪತಿ ಭಟ್, ವೈಬ್ರೆಂಟ್ ಎಜುಕೇಷನ್ ಮತ್ತು ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿಗಳಾದ ಮೆಹಬೂಬ್ ಬಾಷಾ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬೆಡೆಕರ್, ಸುಭಾಷ್ ಝಾ, ಶರತ್ ಗೋರೆ, ಕಾಲೇಜಿನ ಆಡಳಿತಾಧಿಕಾರಿ ಅರುಣ್ ಡಿಸಿಲ್ವ ಉಪಸ್ಥಿತರಿದ್ದರು.
ಉಪನ್ಯಾಸಕ ಅಜಿತ್ ಕುಮಾರ್ ಎಸ್.ಪಿ. ನಿರೂಪಿಸಿದರು. ಅಪರ್ಣಾ ವಂದಿಸಿದರು.