ಬೆಂಗಳೂರು: ಬೆಲ್​ ಮಾಡಿ ಬಾಗಿಲ ಬಳಿ ಪತ್ರವಿಟ್ಟು ಅಪರಿಚಿತ ಎಸ್ಕೇಪ್​; ಪತ್ರ ತೆರೆದ ಮಹಿಳೆಗೆ ಕಾದಿತ್ತು ಶಾಕ್​

Letter in Door
Published on

ಬೆಂಗಳೂರು: ಅಪರಿಚಿತನೊಬ್ಬ ಪತ್ರ ಬರೆದು ಲೈಂಗಿಕ ಕಿರುಕುಳಕ್ಕೆ ಯತ್ನಿಸಿರುವ ಘಟನೆ ನಗರದ ಕೋಣನಕುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಫ್ಲಾಟ್​ನ‌ ಬಾಗಿಲು ಬೆಲ್​ ಮಾಡಿ ಪತ್ರ ಇಟ್ಟು ಕಿರಾತಕ ಪರಾರಿಯಾಗಿದ್ದಾನೆ. ಮಹಿಳೆ ಬಾಗಿಲು ತೆರೆದು ನೋಡಿದಾಗ ಹೊರಗಡೆ ಪತ್ರ ಬಿಟ್ಟರೆ, ಬೇರೆ ಯಾರು ಇರಲಿಲ್ಲ. ಪತ್ರದಲ್ಲಿ ಏನಿರಬಹುದು ಅಂತಾ ತೆಗೆದು ನೋಡಿದರೆ, ಅದರಲ್ಲಿ ಅಸಭ್ಯವಾಗಿ ಬರೆಯಲಲಾಗಿದೆ.

ನನಗೆ ಸರ್ವೀಸ್ ಕೊಡ್ತೀರಾ? ಕೊಡುವುದಾದರೆ, ಬೇಸ್​ಮೆಂಟ್​ಗೆ ಬನ್ನಿ. ಒಂದು ದಿನಕ್ಕೆ‌ 50 ಸಾವಿರ ರೂಪಾಯಿ ಕೊಡುತ್ತೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಇದರಿಂದ ಗಾಬರಿಗೊಂಡ ಮಹಿಳೆ ಕೂಡಲೇ‌ ಅಪಾರ್ಟ್​ಮೆಂಟ್​ನ ಸಿಬ್ಬಂದಿಗೆ ವಿಚಾರವನ್ನು ಮುಟ್ಟಿಸಿ, ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಪತ್ರದ ಮೂಲಕ ಲೈಂಗಿಕ ಕಿರುಕುಳ ಎಂದು ಮಹಿಳೆ ದೂರು ದಾಖಲಿಸಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದು, ಅಪಾರ್ಟ್​ಮೆಂಟ್​ನಲ್ಲಿರುವವರ ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net