ಇಂಗ್ಲೆಂಡ್​ ಓಪನರ್​ಗಳಿಗೆ ನಿತೀಶ್ ರೆಡ್ಡಿ ಶಾಕ್​! ಕೀಪಿಂಗ್ ಬಿಟ್ಟು ಪೆವಿಲಿಯನ್​ ಸೇರಿದ ಪಂತ್​ | IND vs ENG

ವಿಜಯವಾಣಿ (26)
Published on

IND vs ENG: ಇಂದು ಲಾರ್ಡ್ಸ್​​ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್​ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಅಂತೆಯೇ ಬ್ಯಾಟ್ ಮಾಡಲು ಕಣಕ್ಕಿಳಿದ ಆರಂಭಿಕರಾದ ಜ್ಯಾಕ್ ಕ್ರಾಲಿ ಮತ್ತು ಬೆನ್​ ಡಕೆಟ್​, ಟೀಮ್ ಇಂಡಿಯಾ ವೇಗಿ ನಿತೀಶ್ ಕುಮಾರ್ ರೆಡ್ಡಿ ಬೌಲಿಂಗ್ ದಾಳಿಗೆ ವಿಕೆಟ್​ ಒಪ್ಪಿಸಿದ್ದಾರೆ. ಇದೇ ಸಮಯದಲ್ಲಿ ಗಾಯದ ನೋವಿನಿಂದ ಉಪನಾಯಕ ರಿಷಭ್ ಪಂತ್ ಪೆವಿಲಿಯನ್ ಸೇರಿದ್ದಾರೆ.

ಸ್ಟಾರ್​ ವೇಗಿಗಳಾದ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್​ ಸಿರಾಜ್ ಮತ್ತು ಆಕಾಶ್ ದೀಪ್​ ಇಂಗ್ಲೆಂಡ್​ ಓಪನರ್​ಗಳ ವಿಕೆಟ್​ ಕಬಳಿಸಲು ವಿಫಲರಾದರೆ, ತೆಲುಗು ಹುಡುಗ ನಿತೀಶ್ ರೆಡ್ಡಿ ಆರಂಭದಲ್ಲೇ ಇಬ್ಬರು ಆರಂಭಿಕ ಬ್ಯಾಟರ್​ಗಳ ವಿಕೆಟ್​ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಕ್ರಿಕೆಟ್​ ಪ್ರಿಯರ ಉತ್ಸಾಹವನ್ನು ದುಪ್ಪಟ್ಟು ಮಾಡಿದೆ. ಇದೇ ವೇಳೆ ಕೈಬೆರಳಿಗೆ ಗಾಯ ಮಾಡಿಕೊಂಡ ಪಂತ್​, ತಾತ್ಕಾಲಿಕ ರಿಲೀಫ್​ಗಾಗಿ ಸ್ಪ್ರೇ ಹಾಕಿಸಿಕೊಂಡಿದ್ದೇ ಆದರೂ ಕೀಪಿಂಗ್ ಮಾಡಲು ಸಾಧ್ಯವಾಗ್ತಿಲ್ಲ ಎಂದು ಪೆವಿಲಿಯನ್​ಗೆ ಮರಳಿದರು.

ಸ್ಪ್ರೇ ಹಾಕಿಸಿಕೊಂಡ ಬಳಿಕವು ನೋವು ಹೆಚ್ಚಿದೆ ಎಂದು ವಿಕೆಟ್​ ಕೀಪಿಂಗ್​ನಿಂದ ರಿಷಭ್ ಹೊರನಡೆಯುತ್ತಿದ್ದಂತೆ, ಅವರ ಸ್ಥಾನಕ್ಕೆ ಧ್ರುವ್​ ಜ್ಯುರೆಲ್​ರನ್ನು ಕರೆತರಲಾಗಿದೆ. ಪ್ರಸ್ತುತ ಕ್ರೀಸ್​ನಲ್ಲಿ ಜೋ ರೂಟ್​ ಮತ್ತು ಓಲಿ ಪೋಪ್​ ಇದ್ದು, ಮಂದಗತಿಯ ಆಟವನ್ನು ಮುಂದುವರಿಸಿಕೊಂಡು ಹೋಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net