

Joe Root: ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಬ್ಯಾಟರ್ ಜೋ ರೂಟ್ ಶತಕ ಪ್ರದರ್ಶನ ತೋರಿದ್ದಾರೆ.
ಮೊದಲ ದಿನಾಂತ್ಯಕ್ಕೆ ಅಜೇಯ 99 ರನ್ ಬಾರಿಸಿದ್ದ ರೂಟ್, ಎರಡನೇ ದಿನದಾಟ ಆರಂಭವಾದ ಮೊದಲ ಬಾಲ್ಗೆ ಬೌಂಡರಿ ಬಾರಿಸಿ ಸೆಂಚುರಿ ಸಿಡಿಸಿದರು. ಈ ಮೂಲಕ ತಮ್ಮ ಶತಕ ಪೂರೈಸಿದರು. ಟೆಸ್ಟ್ ಫಾರ್ಮೆಟ್ನಲ್ಲಿ ಇದು ಅವರ 37ನೇ ಶತಕವಾಗಿದೆ ಎಂಬುದು ಗಮನಾರ್ಹ. ರೂಟ್ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಐದನೇ ಆಟಗಾರರಾಗಿ ಹೊರಹೊಮ್ಮಿದ್ದಾರೆ.
ಶತಕ ದಾಖಲಿಸುವ ಮೂಲಕ ಟೀಮ್ ಇಂಡಿಯಾ ದಂತಕಥೆ ರಾಹುಲ್ ದ್ರಾವಿಡ್ ಮತ್ತು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ದಾಖಲೆಯನ್ನು ರೂಟ್ ಹಿಂದಿಕ್ಕಿದ್ದಾರೆ. ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ದಾಖಲೆ ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಸಚಿನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 51 ಶತಕಗಳನ್ನು ಗಳಿಸಿದ್ದಾರೆ. ಅವರ ನಂತರದಲ್ಲಿ ದಕ್ಷಿಣ ಆಫ್ರಿಕಾದ ಜ್ಯಾಕ್ ಕಾಲಿಸ್ ಮತ್ತು ರಿಕಿ ಪಾಂಟಿಂಗ್ ಇದ್ದಾರೆ.
ಸಚಿನ್ ತೆಂಡೂಲ್ಕರ್ (ಭಾರತ) – 51 ಶತಕ
ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ) – 45 ಶತಕ
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) – 41 ಶತಕ
ಕುಮಾರ್ ಸಂಗಕ್ಕಾರ (ಶ್ರೀಲಂಕಾ) – 38 ಶತಕ
ಜೋ ರೂಟ್ (ಇಂಗ್ಲೆಂಡ್) – 37 ಶತಕ
ರಾಹುಲ್ ದ್ರಾವಿಡ್ (ಭಾರತ) – 36 ಶತಕಗಳು
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) – 36 ಶತಕಗಳು