

IND vs ENG Test: ಪ್ರಸಕ್ತ ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಶುಕ್ರವಾರ (ಜೂ.20) ಲೀಡ್ಸ್ನ ಹೆಡಿಂಗ್ಲಿನಲ್ಲಿ ಆರಂಭಗೊಂಡಿದ್ದು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯಿತು. ತಂಡದ ಪರ ನಾಯಕ ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಶತಕದಾಟ ಪ್ರದರ್ಶಿಸಿದರೆ, ಉಪನಾಯಕ ರಿಷಭ್ ಪಂತ್ ಆಕರ್ಷಕ ಅರ್ಧ ಶತಕ ದಾಖಲಿಸಿದರು. ಇದು ಟೀಮ್ ಇಂಡಿಯಾ ಸಹ ಆಟಗಾರರು ಸೇರಿದಂತೆ ಕ್ರಿಕೆಟ್ ಪ್ರೇಮಿಗಳ ಸಂತಸಕ್ಕೆ ಕಾರಣವಾಯಿತು.
ಮೊದಲ ದಿನವೇ ಅದ್ಭುತ ಪ್ರದರ್ಶನ ತೋರಿದ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಮೊದಲ ಟೆಸ್ಟ್ನ ಮೂರನೇ ಸೆಷನ್ನಲ್ಲಿ ಮೂರು ವಿಕೆಟ್ಗಳ ನಷ್ಟಕ್ಕೆ 359 ರನ್ಗಳೊಂದಿಗೆ ಭಾರತ ಮುಂಚೂಣಿಯಲ್ಲಿದೆ. ಆದಾಗ್ಯೂ, ಪಂದ್ಯದ ಬಳಿಕ ನಗುಮುಖದಲ್ಲಿ ಡ್ರೆಸ್ಸಿಂಗ್ ರೂಮ್ನತ್ತ ಸಾಗಿದ ಶುಭಮನ್ ಗಿಲ್ ಮತ್ತು ರಿಷಭ್ ಪಂತ್ಗೆ ತಂಡದ ಸಹ ಆಟಗಾರರು ಮತ್ತು ಹೆಡ್ ಕೋಚ್ ಅವರಿಂದ ಭವ್ಯ ಸ್ವಾಗತ ಸಿಕ್ಕಿತು. ಹೆಡ್ ಕೋಚ್ ಗೌತಮ್ ಗಂಭೀರ್ ಇಬ್ಬರ ಪ್ರದರ್ಶನಕ್ಕೆ ಮನಸೋತು, ಪ್ರೀತಿಯಿಂದ ಅಪ್ಪಿಕೊಂಡು ಅಭಿನಂದಿಸಿದರು. ಈ ದೃಶ್ಯ ಜಾಲತಾಣದಲ್ಲಿ ಹರಿದಾಡಿದ್ದು, ಬಿಸಿಸಿಐ ತನ್ನ ಅಧಿಕೃತ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಇಂಗ್ಲಿಷ್ ಬೌಲರ್ಗಳ ಬೆವರಿಳಿಸಿದ ಕ್ಯಾಪ್ಟನ್ ಶುಭಮನ್ ಗಿಲ್ (ಅಜೇಯ 127), ಆರಂಭಿಕರಾದ ಯಶಸ್ವಿ ಜೈಸ್ವಾಲ್ (159 ಎಸೆತಗಳಲ್ಲಿ 101 ರನ್), ಕೆ.ಎಲ್. ರಾಹುಲ್ (78 ಎಸೆತಗಳಲ್ಲಿ 42 ರನ್), ಮತ್ತು ಉಪನಾಯಕ ರಿಷಭ್ ಪಂತ್ (65 ರನ್ ಅಜೇಯ) ಉತ್ತಮ ಪ್ರದರ್ಶನ ನೀಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಆದಾಗ್ಯೂ, ಸಾಯಿ ಸುದರ್ಶನ್ ಒಂದೇ ಒಂದು ರನ್ ಗಳಿಸದೆ, ಡಕ್ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದದ್ದು ಹಲವರ ಬೇಸರಕ್ಕೆ ಕಾರಣವಾಯಿತು. ಕೊನೆಯ ದಿನದಾಟದ ಅಂತ್ಯದಲ್ಲಿ ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಕ್ರೀಸ್ನಲ್ಲಿದ್ದರು. ಗಿಲ್-ಪಂತ್ ಜೋಡಿ ನಾಲ್ಕನೇ ವಿಕೆಟ್ಗೆ 138 ರನ್ಗಳ ಜೊತೆಯಾಟ ನೀಡಿತು,(ಏಜೆನ್ಸೀಸ್).