ಆದಾಯ ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ಏರಿಕೆ

it
Published on

ನವದೆಹಲಿ: ಈ ಬಾರಿ ವಾರ್ಷಿಕ ಬಜೆಟ್​ನಲ್ಲಿ ಆದಾಯ ತೆರಿಗೆಯ ಸ್ಲ್ಯಾಬ್​ಗಳನ್ನು ನವೀಕರಿಸಲಾಗಿದೆ. ಇನ್ನು ನಿಮ್ಮ ಆದಾಯ 7 ಲಕ್ಷ ರೂಪಾಯಿಯ ತನಕ ಇದ್ದಲ್ಲಿ ಇನ್ನು ಮುಂದೆ ಆದಾಯ ತೆರಿಗೆ ಸಲ್ಲಿಸುವಾಗ ನೀವು ಕಟ್ಟಿರುವ ತೆರಿಗೆಯನ್ನು ರಿಬೇಟ್​ ಅಥವಾ ವಾಪಸ್​ ಪಡೆದುಕೊಳ್ಳುವ ಅವಕಾಶ ಲಭ್ಯವಿರುತ್ತದೆ. ಇದು ಒಂದು ರೀತಿಯಲ್ಲಿ ತೆರಿಗೆಯಲ್ಲಿ ವಿನಾಯಿತಿಯೇ ಆಗಿದೆ. ಈ ಹಿಂದೆ 5 ಲಕ್ಷ ರೂ. ತನಕ ಆದಾಯ ಇದ್ದವರಿಗೆ ಈ ವಿನಾಯಿತಿ ನೀಡಲಾಗುತ್ತಿತ್ತು. ಈಗ ಈ ಅವಕಾಶವನ್ನು 7 ಲಕ್ಷ ರೂ. ಆದಾಯ ಇರುವವರಿಗೂ ವಿಸ್ತರಿಸಲಾಗಿದೆ. 

ಈ ಬಾರಿ ನವೀಕರಿಸಲಾದ ಟ್ಯಾಕ್ಸಸ ಸ್ಲ್ಯಾಬ್​ ಹೀಗಿದೆ:
1. 0-3 ಲಕ್ಷ ರೂ. ಇದ್ದಲ್ಲಿ ನೀವು ಯಾವುದೇ ಆದಾಯ ತೆರಿಗೆ ಕಟ್ಟಬೇಕಿಲ್ಲ.
2. 3-5 ಲಕ್ಷ ರೂ. ಇದ್ದರೆ 5% ಆದಾಯ ತೆರಿಗೆ ವಿಧಿಸಲಾಗುತ್ತದೆ.
3. 6-9 ರೂ. ಇದ್ದರೆ 10% ಆದಾಯ ತೆರಿಗೆ ವಿಧಿಸಲಾಗುತ್ತದೆ
4. 12-15 ಲಕ್ಷ ರೂ. ಇದ್ದಲ್ಲಿ 20% ತೆರಿಗೆ ವಿಧಿಸಲಾಗುತ್ತದೆ
5. 15 ಲಕ್ಷ ರೂ. ಮೇಲಿದ್ದಲ್ಲಿ 30% ತೆರಿಗೆ ವಿಧಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net