

ಕಮತಗಿ: ಕಮತಗಿ ಹೊಳೆ ಹುಚ್ಚೇಶ್ವರಮಠದ 8,9,11ನೇ ಪೀಠಾಧಿಕಾರಿ ಗದ್ದುಗೆಗಳ ನೂತನ ಶಿಲಾಮಂಟಪ ಲೋಕಾರ್ಪಣೆ ಹಾಗೂ ಹುಚ್ಚೇಶ್ವರ ಪೀಠಪರಂಪರೆಯ ಸಮಗ್ರ ದರ್ಶನದ ಮಹಾಪ್ರಸಾದಿ ಗ್ರಂಥ ಬಿಡುಗಡೆ ಸಮಾರಂಭ ಆ.24ರಂದು ಬೆಳಗ್ಗೆ 10ಗಂಟೆಗೆ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದಲ್ಲಿ ನಡೆಯಲಿದೆ ಎಂದು ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಪೀಠಾಧಿಪತಿ ಹೊಳೆ ಹುಚ್ಚೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿರುವ ಮೈಸೂರು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೂತನ ಶಿಲಾಮಂಟಪ ಉದ್ಘಾಟಿಸಲಿದ್ದಾರೆ.
ಇದನ್ನು ಓದಿ: ಮೀಸಲಾತಿ ನಿರೀಕ್ಷೆಯಲ್ಲಿ ಸದಸ್ಯರು
ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರು ಮಹಾಪ್ರಸಾದಿ ಗ್ರಂಥ ಬಿಡುಗಡೆ ಮಾಡುವರು.
ನಾಡಿನ ವಿವಿಧ ಶ್ರೀಗಳು ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜ್ಯೋತಿ ಬೆಳಗಿಸುವರು. ಶಾಸಕ ಎಚ್. ವೈ. ಮೇಟಿ ಅಧ್ಯಕ್ಷತೆ ವಹಿಸುವರು. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ ಸೇರಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಗಣ್ಯರು, ಉದ್ಯಮಿಗಳು ಭಾಗವಹಿಸುವರು.
ಆ.21ರಂದು ಬೆಳಗ್ಗೆ ನಾಗಠಾಣ ಬೃಹನ್ಮಠದ ಚನ್ನಮಲ್ಲ ಶಿವಾಚಾರ್ಯರಿಂದ ಗದ್ದುಗೆ ಪ್ರಾಣ ಪ್ರತಿಷ್ಠಾಪನೆ ಮತ್ತು ಬಸವರಾಜ ಶಾಸ್ರ್ತ್ರ್ತಿಗಳಿಂದ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನೆರವೇರಲಿವೆ. ಆ. 24ರಂದು ಬೆಳಗ್ಗೆ 10ಗಂಟೆಗೆ ಕಮತಪುರದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.