

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ವಿದ್ಯಾಸಂಸ್ಥೆಯ ಉದ್ಘಾಟನೆ ದೇವಾಲಯವೊಂದರ ಉದ್ಘಾಟನೆಯಾದಂತೆ. ವಿದ್ಯೆಯಿಂದ ಉತ್ತಮ ಬದುಕು, ಸಾಮಾಜಿಕ ಸ್ಥಾನಮಾನ, ಗೌರವದ ಬದುಕು ಪ್ರಾಪ್ತವಾಗುತ್ತದೆ. ಇಂದಿನ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭಾ ಸಂಪತ್ತಿದ್ದು ಅದನ್ನು ವಿದ್ಯಾಸಂಸ್ಥೆಯೊಂದು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಮಾಡಬೇಕು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ಮದ್ಜಗದ್ಗುರು ವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು.
ವಾಣಿ ವಿದ್ಯಾಸಂಸ್ಥೆಗಳ ಆವರಣದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಹಾಗೂ ವಾಣಿ ವಿದ್ಯಾಸಂಸ್ಥೆಗಳ ನೂತನ ಕಟ್ಟಡ ಹಾಗೂ ಸಭಾಭವನದ ಲೋಕಾರ್ಪಣೆಗೊಳಿಸಿ ಭಾನುವಾರ ಆಶೀರ್ವಚನ ನೀಡಿದರು.
ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಶೃಂಗೇರಿ ಶ್ರೀ ಶಾರದಾ ಪೀಠದಿಂದ ವಾಣಿ ವಿದ್ಯಾಸಂಸ್ಥೆಗೆ ಶಾರದೆಯ ಮೂರ್ತಿಯನ್ನು ಸ್ವಾಮೀಜಿಗಳು ಹಸ್ತಾಂತರಿಸಿದರು. ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಕಿಶೋರ್‌ಕುಮಾರ್ ಬೊಟ್ಯಾಡಿ, ಮಾಜಿ ಸದಸ್ಯರಾದ ಕೆ.ಹರೀಶ್ ಕುಮಾರ್, ಜಯಾನಂದ ರೆಡ್ಡಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ವಕೀಲ ಶೇಖರ ಗೌಡ ದೇವಸ, ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ, ಗೌಡರ ಯಾನೆ ಒಕ್ಕಲಿಗರ ಮಾತೃ ಸಂಘ ಜಿಲ್ಲಾಧ್ಯಕ್ಷ ಲೋಕಯ್ಯ ಗೌಡ, ತಾಲೂಕು ಸಂಘ ಗೌರವಾಧ್ಯಕ್ಷ ಎಚ್.ಪದ್ಮಗೌಡ, ಉದ್ಯಮಿ ಕಿರಣ್‌ಚಂದ್ರ ಡಿ.ಪುಷ್ಪಗಿರಿ, ಬೆಂಗಳೂರಿನ ಬೇಗೂರು ಶ್ರೀ ನಾಗನಾಥೇಶ್ವರ ಕ್ಷೇತ್ರದ ಧರ್ಮದರ್ಶಿ ನಾರಾಯಣ ಬೇಗೂರು, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಗೌಡರ ಯಾನೆ ಒಕ್ಕಲಿಗರ ತಾಲೂಕು ಸಂಘ ಉಪಾಧ್ಯಕ್ಷ ನಾರಾಯಣ ಗೌಡ ದೇವಸ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ, ಸ್ಪಂದನಾ ಸೇವಾ ಸಂಘ ಸಂಚಾಲಕ ಸೀತಾರಾಮ ಕೆ. ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕ ಯುವರಾಜ ಅನಾರು ಸ್ವಾಗತಿಸಿದರು. ಸಂಘ ಮಾಜಿ ಕಾರ್ಯದರ್ಶಿ ಮೋಹನ ಗೌಡ ಪ್ರಸ್ತಾವಿಸಿದರು. ಧರ್ಮೇಂದ್ರ ಕುಮಾರ್, ಮೀನಾಕ್ಷಿ ಎನ್. ನಿರೂಪಿಸಿದರು. ಸಂಘಕಾರ್ಯದರ್ಶಿ ಗಣೇಶ್ ಗೌಡ ವಂದಿಸಿದರು.
ದೇವರು ವರಶಾಪ ಎರಡನ್ನೂ ಕೊಡುವುದಿಲ್ಲ. ಕೇವಲ ಅವಕಾಶಗಳನ್ನು ಮಾತ್ರ ಕೊಡುತ್ತಾನೆ. ಆ ಅವಕಾಶಗಳನ್ನು ಶ್ರಮದ ಮೂಲಕ ನಮ್ಮದಾಗಿಸಬೇಕು. ಆ ಶ್ರಮಕ್ಕೆ ಬೇಕಾದ ಶಕ್ತಿಯನ್ನು ಇಂತಹ ವಿದ್ಯಾಸಂಸ್ಥೆಗಳು ನೀಡುವ ವಿದ್ಯೆಯ ಮೂಲಕ ಪಡೆದುಕೊಳ್ಳಬೇಕು. ವಿದ್ಯಾ ಸಂಸ್ಥೆಯನ್ನು ಬೆಳೆಸುವ ಹೃದಯ ಶ್ರೀಮಂತಿಕೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ https://www.vijayavani.net/no-maitanence-in-garden https://www.vijayavani.net/tempo-driver-sentenced-for-causing-womans-death