ರಸ್ತೆ, ಇಂಟರ್‌ಲಾಕ್ ಕಾಮಗಾರಿ ಉದ್ಘಾಟನೆ

New Project (13)
Published on

ಗುರುಪುರ: ಕುಲವೂರು ಕಂಗಿನಡಿ ಮರಕಡ ಪಂಜುರ್ಲಿ ದೈವಸ್ಥಾನ ರಸ್ತೆ ಹಾಗೂ ದೈವಸ್ಥಾನಕ್ಕೆ ಅಳವಡಿಸಲಾದ ಇಂಟರ್‌ಲಾಕ್ ಕಾಮಗಾರಿಯನ್ನು ಎಂಎಲ್‌ಸಿ ಐವನ್ ಡಿಸೋಜ ಮತ್ತು ಮಲ್ಲಿಕಾ ಪಕ್ಕಳ ಶನಿವಾರ ಉದ್ಘಾಟಿಸಿದರು.

ಐವನ್ ಡಿಸೋಜ ಮತ್ತು ಮಂಜುನಾಥ ಭಂಡಾರಿ ಅವರ 13 ಲಕ್ಷ ರೂ. ಅನುದಾನ ಮತ್ತು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಅವರ 3 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ನಡೆಸಲಾಗಿದೆ. ಈ ಸಂದರ್ಭ ದೈವಸ್ಥಾನದ ಆಡಳಿತ, ಕಂಗಿನಡಿ ಮನೆ ಮತ್ತು ಗ್ರಾಮಸ್ಥರ ಪರವಾಗಿ ಐವನ್ ಡಿಸೋಜ ಮತ್ತು ಮಲ್ಲಿಕಾ ಪಕ್ಕಳ ಅವರನ್ನು ಸನ್ಮಾನಿಸಲಾಯಿತು.

ಕೆಪಿಸಿಸಿ ಕಾರ್ಯದರ್ಶಿ ಪೃಥ್ವಿರಾಜ್ ಆರ್.ಕೆ., ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಗಿರೀಶ್ ಆಳ್ವ, ಮುತ್ತೂರು ವಲಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕುಪ್ಪೆಪದವು ವಲಯ ಕಾಂಗ್ರೆಸ್ ಅಧ್ಯಕ್ಷ ರಝಾಕ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net