
ಕಾರ್ಕಳ: ಗ್ರಾಮದ ಜನರ ಸಹಭಾಗಿತ್ವ, ಸಹಕಾರವಿದ್ದಾಗ ಜನಸ್ನೇಹಿ ಕೆಲಸ, ಅಭಿವೃದ್ಧ್ದಿ ಕೆಲಸ ಮತ್ತಷ್ಟು ಮಾಡಲು ಪಂಚಾಯಿತಿ ಆಡಳಿತಕ್ಕೆ ಸಾಧ್ಯವಾಗುತ್ತದೆ ಎಂದು ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.
ನೀರೆ ಗ್ರಾಪಂ ವ್ಯಾಪ್ತಿಯ ಕಣಜಾರು ಗ್ರಾಮದಲ್ಲಿ ಹೊಸದಾಗಿ ತೆರೆಯಲಾದ ಪಡಿತರ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಗುತ್ತಿಗೆದಾರ ಪ್ರದೀಪ್, ಪಡಿತರ ಕೇಂದ್ರದ ವ್ಯವಸ್ಥೆ ಅಚ್ಚುಕಟ್ಟಾಗಿ ಕಲ್ಪಿಸಿದ ಆಹಾರ ಇಲಾಖೆ ಡಿ.ಟಿ.ಶನವಾಜ್, ಆಹಾರ ನಿರೀಕ್ಷಕಿ ಸುಮತಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಕಳ ತಾಪಂ ಮಾಜಿ ಅಧ್ಯಕ್ಷ ವಿಕ್ರಂ ಹೆಗ್ಡೆ, ನೀರೆ ಗ್ರಾಪಂ ಅಧ್ಯಕ್ಷ ಸಚ್ಚಿದಾನಂದ ಪ್ರಭು, ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ, ಕಾರ್ಕಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಾನಂದ, ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಮಾಜಿ ತಾಪಂ ಅಧ್ಯಕ್ಷೆ ಮಾಲಿನಿ ಶೆಟ್ಟಿ, ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘ ನಿರ್ದೇಶಕರು, ವ್ಯವಸ್ಥಾಪಕ ಸಂತೋಷ್, ಸಿಬ್ಬಂದಿ, ನೀರೆ ಪಂಚಾಯಿತಿ ಸದಸ್ಯರು, ಗ್ರಾಣಕರಣಿಕೆ ಸುಚಿತ್ರಾ ಇದ್ದರು. ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸೇವಾ ಸಂಘ ಅಧ್ಯಕ್ಷ ರವೀಂದ್ರ ನಾಯಕ್ ಪ್ರಾಸ್ತಾವಿಕ ಮಾತನಾಡಿದರು. ಪಿಡಿಒ ಅಂಕಿತ ನಾಯಕ್ ಸ್ವಾಗತಿಸಿದರು. ಮಾಜಿ ಗ್ರಾಪಂ ಅಧ್ಯಕ್ಷ ರಮೇಶ್ ಕಲ್ಲೊಟ್ಟೆ ನಿರೂಪಿಸಿದರು. ಶಿವಪ್ರಸಾದ ರಾವ್ ವಂದಿಸಿದರು.
ಗ್ರಾಮೀಣ ಭಾಗದ ಜನರ ಬೇಡಿಕೆಗೆ ಸ್ಪಂದಿಸುವ ಕೆಲಸ ನೀರೆ ಗ್ರಾಮ ಪಂಚಾಯಿತಿ ಮಾಡಿದೆ. ಪಡಿತರ ವ್ಯವಸ್ಥೆ ಪಡೆಯುವಲ್ಲಿ ಗ್ರಾಮಸ್ಥರಿಗೆ ಅನುಕೂಲಕರವಾಗಿದೆ. ಜನರ ಭಾವನೆಗೆ ಸ್ಪಂದಿಸಿದ ಗ್ರಾಪಂ ಕಾರ್ಯ ಶ್ಲಾಘನೀಯ.
-ಡಾ.ಪ್ರತಿಭಾ ಆರ್. ತಹಸೀಲ್ದಾರ್