ಸವಣೂರು ಬೇರಿಕೆಯಲ್ಲಿ ವಿದ್ಯುತ್ ಪರಿವರ್ತಕ ಉದ್ಘಾಟನೆ

mescom
Published on

ಕಡಬ: ಸವಣೂರು ಗ್ರಾಮದ ಬೇರಿಕೆ ಎಂಬಲ್ಲಿ ನೂತನ ವಿದ್ಯುತ್ ಪರಿವರ್ತಕದ ಉದ್ಘಾಟನೆ ನಡೆಯಿತು.

ಸವಣೂರು ಮೆಸ್ಕಾಂನ ಜೆ.ಇ.ರಾಜೇಶ್ ಚಾಲನೆ ನೀಡಿದರು. ಸವಣೂರು ಗ್ರಾ.ಪಂ. ಪಂಚಾಯಿತಿ ಸದಸ್ಯೆ ಇಂದಿರಾ ಬೇರಿಕೆ, ಮಾಜಿ ಸದಸ್ಯರಾದ ಸತೀಶ್ ಬಲ್ಯಾಯ, ಗಾಯತ್ರಿ ಬರಮೇಲು, ಸವಣೂರು ಸಿಎ ಬ್ಯಾಂಕ್ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಮೆಸ್ಕಾಂನ ಪವರ್‌ಮನ್‌ಗಳಾದ ರಂಜಿತ್, ಮೌನೇಶ್, ಮಹಾದೇವ್, ಸವಣೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವಸಂತ್ ಶೆಟ್ಟಿ, ಸಿಬ್ಬಂದಿ ಪ್ರಮೋದ್, ಬಾಲಚಂದ್ರ ಕೆ, ಪ್ರಮುಖರಾದ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ರಾಮಕೃಷ್ಣ ಪ್ರಭು, ವೇದಾವತಿ ಬೇರಿಕೆ, ರಘು ಬೇರಿಕೆ, ಉಮೇಶ್ ಗೌಡ ಬೇರಿಕೆ, ಜಯಂತಿ ಬೇರಿಕೆ, ಖಾದ್ರಿ ಬೇರಿಕೆ, ಕುಮಾರ್ ಬೇರಿಕೆ, ಹರೀಶ್ ಸುಣ್ಣಾಜೆ ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಕೀರ್ತನ್ ಕೊಡಿಬೈಲು ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net