

ಕಡಬ: ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ಒಂದೇ ಗ್ರಾಮದ ಐದರಿಂದ ಆರು ಮಹಿಳಾ ಸ್ವಸಹಾಯ ಸಂಗಳ ಸದಸ್ಯರನ್ನು ಒಟ್ಟುಗೂಡಿಸಿ ಜ್ಞಾನವಿಕಾಸ ಕೇಂದ್ರವಾಗಿ ರಚಿಸಿ ಪ್ರತಿ ತಿಂಗಳಿಗೆ ಒಂದು ಬಾರಿ ಸದಸ್ಯರ ಸಭೆ ನಡೆಸಿ ಯೋಜನೆಯ ಸೌಲಭ್ಶಗಳೊಂದಿಗೆ ಸರ್ಕಾರದ ಸೌಲಭ್ಯಗಳ, ಇಲಾಖೆಗಳ ವಾಹಿತಿ ಸದಸ್ಯರ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಪ್ರತಿಯೊಬ್ಬ ಮಹಿಳೆ ಸವಾಜದ ಮುಖ್ಯವಾಹಿನಿಗೆ ಬರುವಂತೆ ವಾಡಲಾಗುವುದು ಎಂದು ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಹೇಳಿದರು.
ಕೆಂಜಾಳ ಶ್ರೀ ಪಂಚಲಿಂಗೇಶ್ವರ ಯುವಕ ಮಂಡಲದಲ್ಲಿ ಇತ್ತೀಚೆಗೆ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಬಿಳಿನೆಲೆ ವಲಯ ಕೆಂಜಾಳ ಕೊಂಬಾರು ಕಾರ್ಯಕ್ಷೇತ್ರದ ಪಂಚಮಿ ಜ್ಞಾನವಿಕಾಸ ಕೇಂದ್ರದ ಉದ್ಘಾಟನೆಯ ವೇಳೆ ಕೇಂದ್ರದ ನೂತನ ಸಂಯೋಜಕಿ ರೇಖಾ ಅವರಿಗೆ ಕೇಂದ್ರ ನಿರ್ವಹಣೆ ದಾಖಲಾತಿ ಹಸ್ತಾಂತರಿಸಿ ವಾತನಾಡಿದರು.
ಕೊಂಬಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕಾಯರ್ತಡ್ಕ ಉದ್ಘಾಟಿಸಿದರು. ಕೊಂಬಾರು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಗೌಡ ಕೋಲ್ಪೆ ಅಧ್ಯಕ್ಷತೆ ವಹಿಸಿದ್ದರು.
ಕೆಂಜಾಳ ಶ್ರೀ ಪಂಚಲಿಂಗೇಶ್ವರ ಯುವಕ ಮಂಡಲದ ಅಧ್ಯಕ್ಷ ವಿನೋದ್ ಹೊಲ್ಲರ್, ಸಿರಿಬಾಗಿಲು ಒಕ್ಕೂಟದ ಕೋಶಾಧಿಕಾರಿ ಚಿದಾನಂದ ದೇವುಪಾಲ್ ಮತ್ತು ಬಿಳಿನೆಲೆ ವಲಯ ಸಂರಕ್ಷಣಾ ವೇದಿಕೆಯ ಜತೆ ಕಾರ್ಯದರ್ಶಿ ಲೋಕೇಶ್ವರಿ ಪೋರ್ದೆಲ್ ಉಪಸ್ಥಿತರಿದ್ದರು.
ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ ಸ್ವಾಗತಿಸಿದರು. ಕೊಂಬಾರು ಸಿರಿಬಾಗಿಲು ವಿಭಾಗದ ಸೇವಾಪ್ರತಿನಿಧಿ ವಿನೋದ್ ಕೆ.ಸಿ. ನಿರೂಪಿಸಿದರು. ಕೆಂಜಾಳ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಗಣೇಶ್ ಎ.ವಂದಿಸಿದರು.