ಪಾಲ್ತಾಡು ಕಾಪುತಕಾಡು ಸಂಪರ್ಕ ರಸ್ತೆ ಉದ್ಘಾಟನೆ

33
Published on

ಕಡಬ: ಪೆರುವಾಜೆ, ಪಾಲ್ತಾಡಿ, ಕೊಳ್ತಿಗೆ ಗ್ರಾಮಗಳಿಗೆ ಸಂಬಂಧಪಟ್ಟಿರುವ ಪಾಲ್ತಾಡು ಕಾಪುತಕಾಡು ಶ್ರೀ ರಾಜಗುಳಿಗ ಸಾನ್ನಿಧ್ಯದ ಸಂಪರ್ಕ ರಸ್ತೆ ಉದ್ಘಾಟಿಸಲಾಯಿತು.

ಸುಳ್ಯ ವಿಧಾನಸಭಾ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸುಳ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ., ಸವಣೂರು ಸಿಎ ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಗ್ರಾ.ಪಂ. ಸದಸ್ಯರಾದ ಸತೀಶ್ ಅಂಗಡಿಮೂಲೆ, ವಿನೋದಾ ರೈ, ಕೊಳ್ತಿಗೆ ಗ್ರಾ.ಪಂ. ಮಾಜಿ ಸದಸ್ಯ ಸುನೀಲ್ ರೈ ಪಾಲ್ತಾಡು, ಸವಣೂರು ಗ್ರಾ.ಪಂ. ಮಾಜಿ ಸದಸ್ಯ ಸುಧಾಮ ಮಣಿಯಾಣಿ, ಬೆಳ್ಳಾರೆ ಸಿಎ ಬ್ಯಾಂಕ್ ನಿರ್ದೇಶಕ ನಾರಾಯಣ ಕೊಂಡೆಪ್ಪಾಡಿ, ಬೂತ್ ಅಧ್ಯಕ್ಷ ಮಧುಸೂದನ್ ಬಜತ್ತನೆ, ಕಾರ್ಯದರ್ಶಿ ಶಶಿಕುಮಾರ್, ರಾಜಗುಳಿಗ ಸೇವಾ ಸಮಿತಿಯ ಗೌರವಾಧ್ಯಕ್ಷ ಪಿ.ಮಂಜಪ್ಪ ರೈ, ಅಧ್ಯಕ್ಷ ಡಾ.ಹರಿಕೃಷ್ಣ ರೈ ಜಿ.ಎನ್, ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಉಪಾಧ್ಯಕ್ಷ ಸುಂದರ ನಾಯ್ಕ ನಾಗನಮಜಲು, ಜತೆ ಕಾರ್ಯದರ್ಶಿ ದಿನೇಶ್ ಶಾಂತಿಮೂಲೆ, ಕೋಶಾಧಿಕಾರಿ ಬಾಬು ಶಾಂತಿಮೂಲೆ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net