ವಿಜಯವಾಣಿ ಸುದ್ದಿಜಾಲ ಕೊಕ್ಕಡ

ಆಕರ್ಷಣೆಯಿಂದ ಗಳಿಸಿದ್ದು ತಾತ್ಕಾಲಿಕ. ಸಂಸ್ಕಾರ, ಧರ್ಮ ಮತ್ತು ಸಂಸ್ಕೃತಿಯ ಆಚರಣೆಯಿಂದ ಸರ್ವಕಾಲಕ್ಕೂ ಸುಖ, ನೆಮ್ಮದಿಯನ್ನು ಪಡೆಯಬಹುದು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ಟಾಮೀಜಿ ಹೇಳಿದರು.
ಹತ್ಕಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ‘ವನದುರ್ಗಾ’ ಸಭಾಭವನದ ನಾಮಫಲಕವನ್ನು ಶುಕ್ರವಾರ ಅನಾವರಣಗೊಳಿಸಿ ಆಶೀರ್ವಚನ ನೀಡಿದರು.
ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಜೋತಿಷಿ ಪ್ರಹ್ಲಾದ ತಾಮ್ಹನ್ಕರ್, ಬಿಜೆಪಿ ಮಂಡಲಾಧ್ಯಕ್ಷ ಶ್ರೀನಿವಾಸ ರಾವ್, ಅರಸಿನಮಕ್ಕಿ ಗ್ರಾಪಂ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್. ಶುಭಹಾರೈಸಿದರು.
ಸಭಾಭವನದ ಶ್ರಮದಾನಿಗಳಾದ ಸಂಜೀವ ಶೆಟ್ಟಿಗಾರ್, ತಮ್ಮಯ್ಯ ಶೆಟ್ಟಿಗಾರ್, ರಾಮಕೃಷ್ಣ ಶೆಟ್ಟಿಗಾರ್, ಸುರೇಶ್ ಶೆಟ್ಟಿಗಾರ್, ರೋಹಿತಾಶ್ವ ಶೆಟ್ಟಿಗಾರ್, ಗಣೇಶ್ ಶೆಟ್ಟಿಗಾರ್, ರಾಮಪ್ಪ ಶೆಟ್ಟಿಗಾರ್, ಹರಿಶ್ಚಂದ್ರ ಶೆಟ್ಟಿಗಾರ್, ನಾರಾಯಣ ಆಚಾರ್ಯ ಕಲ್ಲಕೋಟೆ, ಆನಂದ ಅಡಪ, ವಸಂತ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಅರ್ಚಕ ಉಲ್ಲಾಸ್ ಭಟ್ ಅಂತರ, ಉದ್ಯಮಿಗಳಾದ ಶ್ರೀರಂಗ ದಾಮ್ಲೆ ಉಪಸ್ಥಿತರಿದ್ದರು. ಅರಿಕೆಗುಡ್ಡೆ ಕ್ಷೇತ್ರದ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ ಸ್ವಾಗತಿಸಿದರು. ನೀತಾ, ಪ್ರಮೀಳಾ, ರೇಷ್ಮಾ, ಧನವತಿ ಪ್ರಾರ್ಥಿಸಿದರು. ವೃಷಾಂಕ್ ಖಾಡಿಲ್ಕರ್ ವಂದಿಸಿದರು.
ದೇವಸ್ಥಾನದ ಈ ಸಭಾಭವನದಲ್ಲಿ ಧರ್ಮ ಶಿಕ್ಷಣದ ಕೆಲಸಗಳು ನಡೆಯಬೇಕಿದೆ. ರಾಮಾಯಣ, ಮಹಾಭಾರತ, ಭಗವದ್ಗೀತೆ ಕಲಿಕೆ ಮೊದಲಾದ ಸಂಸ್ಕಾರದ ಶಿಕ್ಷಣ ನೀಡಬೇಕು. ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತಾಗಬೇಕು. ಈ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೆ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 50 ಲಕ್ಷ ರೂ. ಅನುದಾನ ನೀಡಿದ್ದು, ಈ ಬಾರಿ ಮತ್ತೆ 5 ಲಕ್ಷ ರೂ. ಅನುದಾನ ನೀಡುವೆ.
ಹರೀಶ್ ಪೂಂಜ ಶಾಸಕ