ಗಾಡಿಗದ್ದೆ ರಸ್ತೆಗೆ 40 ಲಕ್ಷ ರೂ. ಅನುದಾನ ಬಿಡುಗಡೆ: ಪಾವೂರಿನಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಉದ್ಘಾಟಿಸಿ ಯು.ಟಿ.ಖಾದರ್ ಹೇಳಿಕೆ

New Project (58)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಹರೇಕಳದಿಂದ ಗಾಡಿಗದ್ದೆವರೆಗೆ ರಸ್ತೆ ನಿರ್ಮಾಣಕ್ಕೆ ಈಗಾಗಲೇ 10 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಮತ್ತೆ 40 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಗಾಡಿಗದ್ದೆ ಪ್ರದೇಶ ನಗರವಾಗಿ ಮಾರ್ಪಡಲಿದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಪಾವೂರು ಗ್ರಾಮದ ಗಾಡಿಗದ್ದೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡ ಎಲ್‌ಕೆಜಿ, ಯುಕೆಜಿ ತರಗತಿ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಪಾವೂರು ಗ್ರಾಪಂ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಗ್ರಾಪಂ ಸದಸ್ಯರಾದ ರಿಯಾಝ್ ಅಹ್ಮದ್ ಪಾವೂರು, ರವಿಕಲಾ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಿಯಾಝ್ ಡಿ.ಅರಸ್ತಾನ, ಉಪಾಧ್ಯಕ್ಷೆ ಮೋಹಿನಿ, ಇನೋಳಿ ಶ್ರೀ ಸೋಮನಾಥ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಪಜೀರ್ ಗ್ರಾಪಂ ಮಾಜಿ ಅಧ್ಯಕ್ಷ ಭರತ್ ರಾಜ್ ಶೆಟ್ಟಿ ಪಜೀರುಗುತ್ತು, ತಾಪಂ ಮಾಜಿ ಸದಸ್ಯ ಬಶೀರ್ ಜೋಕಟ್ಟೆ, ಉದ್ಯಮಿ ಝಕರಿಯಾ ಮಲಾರ್, ಪಾವೂರು ಪಿಡಿಒ ಕೃಷ್ಣ ಕುಮಾರ್, ಮಾಜಿ ಸದಸ್ಯ ಯೋಗೀಶ್ ಭಂಡಾರಮನೆ, ಹಸಿರುದಳದ ವ್ಯವಸ್ಥಾಪಕ ನಾಗರಾಜ್, ಗುತ್ತಿಗೆದಾರ ಬಶೀರ್, ಮಾಜಿ ಸೈನಿಕ ಪಾರ್ಶ್ವನಾಥ ಪಾವೂರುಗುತ್ತು, ಹಳೇ ವಿದ್ಯಾರ್ಥಿ ಸಂಘದ ಪ್ರಮುಖರಾದ ಮೋಕ್ಷಾ, ಮಹಮ್ಮದ್ ಬಶೀರ್, ಶಿವಶಂಕರ್ ಪಾವೂರುಗುತ್ತು, ವಿಜಯಕುಮಾರ್ ಪಾವೂರು ಭಂಡಾರಮನೆ, ನಿಶಾಂತ್ ಪಾವೂರು, ನೌಷಾದ್ ಎಂ.ಆರ್., ನವೀನ್ ಭಂಡಾರಮನೆ, ಸುರೇಶ್ ಪೂಜಾರಿ ಭಂಡಾರಮನೆ, ನೌಫಲ್ ಪಾವೂರು ಮೊದಲಾದವರು ಉಪಸ್ಥಿತರಿದ್ದರು. ಫಿರೋಜ್ ಮಲಾರ್ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಲವಿನಾ ಡಿಸೋಜ ವಂದಿಸಿದರು. ಶಿಕ್ಷಕಿ ಭವ್ಯ ಕಾರ್ಯ ನಿರ್ವಹಿಸಿದರು.

ಪಾವೂರು ಗ್ರಾಮಕ್ಕೆ ಗಾಡಿಗದ್ದೆ ಶಾಲೆ ಹಿರಿಯಣ್ಣ ಇದ್ದಂತೆ. ಪ್ರಸ್ತುತ ದಿನಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು, ಶಾಲೆ ಉಳಿಸುವ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಸೇರಿ ಎಲ್‌ಕೆಜಿ, ಯುಕೆಜಿ ಆರಂಭಿಸಿದ್ದಾರೆ. ಪಾವೂರು ಗ್ರಾಮದ ಶಾಲೆ ಅಭಿವೃದ್ಧಿಗೆ ಎಂಆರ್‌ಪಿಎಲ್‌ನಿಂದ 40 ಲಕ್ಷ ರೂ. ಅನುದಾನ ಸ್ಪೀಕರ್ ಯು.ಟಿ.ಖಾದರ್ ಒದಗಿಸಿಕೊಟ್ಟಿದ್ದಾರೆ. ಮಹಮ್ಮದ್ ಮೋನು ಮಲಾರ್ ಮಂಗಳೂರು ತಾಪಂ ಮಾಜಿ ಸದಸ್ಯ https://www.vijayavani.net/massive-protest-by-bjp-committee https://www.vijayavani.net/free-travel-arrangement-for-children

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net