

ಪೆರ್ಲ: ಕಲೆಗೆ ಜಾತಿ,ವರ್ಗ ಭೇದವನ್ನು ತೊಡೆದು ಹಾಕುವ ಶಕ್ತಿಯಿರುವುದರಿಂದ ಏಕತೆಯ ಉತ್ಸವವಾಗಿದೆ. ಶೇಣಿಯ ಜನತೆ ಇದನ್ನು ನಾಡಿನ ಉತ್ಸವವಾಗಿ ಆಚರಿಸುತ್ತಿರುವುದು ವಾದರಿಯಾಗಿದೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಹೇಳಿದರು.
ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸೋಮವಾರ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ 63ನೇ ಕೇರಳ ಶಾಲಾ ಕಲೋತ್ಸವ ಉದ್ಘಾಟಿಸಿ ವಾತನಾಡಿದರು.
ಕಲೋತ್ಸವ ಸಮಿತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉದುಮ ಶಾಸಕ ಸಿ.ಎಚ್.ಕುಂಞಂಬು, ಸಿಬಿಐಯ ಸಿನಿಯರ್ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸವಾಜ ಸೇವಕ ಅಬ್ದುಲ್ಲ ವಾದುಮೂಲೆ, ಸುಧೀರ್ ಕುವಾರ್ ಶೆಟ್ಟಿ ಎಣ್ಮಕಜೆ, ಪುತ್ತಿಗೆ ಗ್ರಾ.ಪಂ. ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚಿನ ಧರ್ಮಗುರು ನೇಲ್ಸನ್ ಡಿ ಆಲ್ಮೇಡಾ, ನವಜೀವನ ವಿಶೇಷ ಶಾಲಾ ಪ್ರಬಂಧಕ ಜೋಸ್ ಚೆಂಬಟ್ಟಿಕ್ಕಲ್, ಕರ್ನಾಟಕ ರಾಜ್ಯ ದತ್ತಿ ಇಲಾಖೆ ಸದಸ್ಯೆ ಮಲ್ಲಿಕಾ ಪಕ್ಕಳ ವಾತನಾಡಿದರು.
ಎಣ್ಮಕಜೆ ಗ್ರಾ.ಪಂ. ಉಪಾಧ್ಯಕ್ಷೆ ರಮ್ಲಾ, ಜಿ.ಪಂ.ಸದಸ್ಯ ನಾರಾಯಣ ನಾಯ್ಕ, ಬ್ಲಾಕ್ ಪಂಚಾಯಿತಿ ಸದಸ್ಯ ಬಟ್ಟು ಶೆಟ್ಟಿ, ಕೆ.ಪಿ.ಅನಿಲ್ ಕುವಾರ್, ಎಣ್ಮಕಜೆ ಗ್ರಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಸೌದಾಭಿ ಹನೀಫ್, ಪುತ್ತಿಗೆ ಗ್ರಾ.ಪಂ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್, ಶೇಣಿ ಯು.ಪಿ. ಶಾಲಾ ಮುಖ್ಯಶಿಕ್ಷಕ ರಾಧಾಕೃಷ್ಣ ನಾಯಕ್ ಜೆ.ಎಸ್., ಕುಸುವಾವತಿ, ರಾಮಚಂದ್ರ ಎಂ., ಪುತ್ತಿಗೆ ಗ್ರಾಪಂ ಸದಸ್ಯ ಆಸೀಫ್ ಆಲಿ, ಶೇಣಿ ವಿದ್ಯಾ ಸಂಸ್ಥೆಗಳ ಪ್ರಬಂಧಕಿ ಶಾರದಾ ವೈ., ಹೈಸ್ಕೂಲ್ ಮುಖ್ಯಶಿಕ್ಷಕ ಶ್ರೀಶ ಕುವಾರ್ ಎಂ.ಪಿ., ನಿವೃತ್ತ ಮುಖ್ಯಶಿಕ್ಷಕ ರವೀಂದ್ರನಾಥ ನಾಯಕ್, ಪಿಟಿಎ ಅಧ್ಯಕ್ಷ ವಿಲ್ಸನ್ ಡಿಸೋಜ, ಅಬೂಬಕ್ಕರ್ ಪೆರ್ದನೆ, ಹಳೇ ವಿದ್ಯಾರ್ಥಿ ಸಂದ ಅಧ್ಯಕ್ಷ ಯೂಸುಫ್ ಶೇಣಿ ಮೊದಲಾದವರಿದ್ದರು.
ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ ಸ್ವಾಗತಿಸಿದರು. ಉಪನ್ಯಾಸಕ ಆಶ್ರಫ್ ಮರ್ತ್ಯ ನಿರೂಪಿಸಿದರು. ಶಾಸ್ತಾ ಕುವಾರ್ ಎ ವಂದಿಸಿದರು.