ರಾಜಕೀಯ ಹೊರಗಿಟ್ಟು ಗ್ರಾಮದ ಏಳಿಗೆಗೆ ಶ್ರಮ : ರಮಾನಾಥ ರೈ ಹೇಳಿಕೆ

New Project (31)
Published on

ವಿಜಯವಾಣಿ ಸುದ್ದಿಜಾಲ ಗುರುಪುರ ಆರಂಭದಿಂದಲೂ ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ ನೀಡಿರುವ ಕಾಂಗ್ರೆಸ್, ನರೇಗಾದಂತಹ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೊಳಿಸಿತ್ತು. ಕರಿಯಂಗಳ ಗ್ರಾಮದಲ್ಲೂ ಕಾಂಗ್ರೆಸ್ ಸರ್ಕಾರ ರಸ್ತೆ, ಚರಂಡಿ, ವಿದ್ಯುತ್‌ನಂತಹ ಹಲವು ಮೂಲಸೌಕರ್ಯ ಒದಗಿಸುವ ಕೆಲಸ ಮಾಡಿದೆ. ಅಭಿವೃದ್ಧಿ ಕೆಲಸಗಳ ಸಂದರ್ಭದಲ್ಲಿ ರಾಜಕೀಯ ಹೊರಗಿಟ್ಟು, ಎಲ್ಲರೂ ಗ್ರಾಮದ ಏಳಿಗೆಗೆ ಶ್ರಮಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ, ದ.ಕ. ಜಿಪಂ ಹಾಗೂ ಕರಿಯಂಗಳ ಗ್ರಾಪಂ ಆಶ್ರಯದಲ್ಲಿ ಗುರುವಾರ ಪಂಚಾಯಿತಿ ವಠಾರದಲ್ಲಿ ಸಂಜೀವಿನಿ ಸೌಧ, ಸಂಜೀವಿನಿ ವಾಣಿಜ್ಯ ಸಂಕೀರ್ಣ(ಗ್ರಾಮ ಒನ್ ಸೇವಾ ಕೇಂದ್ರ ಮತ್ತು ಸಂಜೀವಿನಿ ಉತ್ಪನ್ನಗಳ ಮಾರಾಟ ಕೇಂದ್ರ), ವಿಶೇಷ ಚೇತನರ ಗ್ರಂಥಾಲಯ ಹಾಗೂ ಗ್ರಾಮ ಆಡಳಿತ ಅಧಿಕಾರಿ ಕಚೇರಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ, ಪೊಳಲಿ ಬಾಬಾ ಫಕ್ರುದ್ದೀನ್ ಜುಮಾ ಮಸೀದಿ ಖತೀಬರಾದ ಅಬ್ದುಲ್ ಅಝೀಝ್ ಮಾತನಾಡಿದರು. ಪಂಚಾಯಿತಿ ಅಧ್ಯಕ್ಷೆ ರಾಧಾ ಎಲ್. ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಪಂಚಾಯಿತಿ ಸದಸ್ಯರು, ಪಿಡಿಒ ವಸಂತಿ ಜೆ.ಪಿ., ಬಂಟ್ವಾಳ ಕಿರಿಯ ತಾಂತ್ರಿಕ ಇಂಜಿನಿಯರ್ ಜಗದೀಶ್ಚಂದ್ರ, ನರೇಗಾದ ಸಹಾಯಕ ನಿರ್ದೇಶಕ ಸುಶಾನ್ ಬಿ.ಕೆ., ನಿವೃತ್ತ ಪಿಡಿಒ ಮಾಲಿನಿ ಬಿ.ವಿ., ಶ್ರೀ ಕ್ಷೇತ್ರ ಪೊಳಲಿ ಅರ್ಚಕ ರಾಮ ಭಟ್, ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟೇಶ ನಾವಡ, ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಪುತ್ತೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾಲೂಕು ಕ್ಲಸ್ಟರ್ ಮೇಲ್ವಿಚಾರಕಿ ಕುಸುಮಾ, ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಕರಿಯಂಗಳ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಸುಧಾಕ್ಷಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯಿತಿಯ 6 ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ನಿಕಟಪೂರ್ವ ಅಧ್ಯಕ್ಷ, ಹಾಲಿ ಸದಸ್ಯ ಚಂದ್ರಹಾಸ ಪಲ್ಲಿಪಾಡಿ ಪ್ರಸ್ತಾವಿಸಿ, ಸ್ವಾಗತಿಸಿದರು. ಕಿಶೋರ್ ಪಲ್ಲಿಪಾಡಿ ಕಾರ್ಯಕ್ರಮ ನಿರೂಪಿಸಿದರು. ಪಂಚಾಯಿತಿ ಉಪಾಧ್ಯಕ್ಷ ರಾಜು ಕೋಟ್ಯಾನ್ ವಂದಿಸಿದರು.

ಸ್ವ-ಉದ್ಯೋಗ ಬಯಸುವ ಮಹಿಳೆಯರು ಕರಿಯಂಗಳ ಸಂಜೀವಿನಿ ವಾಣಿಜ್ಯ ಸಂಕೀರ್ಣದಿಂದ ಹೆಚ್ಚೆಚ್ಚು ಪ್ರಯೋಜನ ಪಡೆದುಕೊಳ್ಳಬೇಕು. ಕರಿಯಂಗಳ ಸ್ವಚ್ಛ ಮತ್ತು ವ್ಯಸನಮುಕ್ತ ಗ್ರಾಮವಾಗಬೇಕು. ಸ್ವಾಮಿ ವಿವೇಕಚೈತನ್ಯಾನಂದ ಪೊಳಲಿ ರಾಮಕೃಷ್ಣ ತಪೋವನ ನಾವು ಹೋಗುವ ದಾರಿ ಸ್ವಚ್ಛವಾಗಿರಬೇಕು. ಸ್ವಚ್ಛತೆ ಇದ್ದಲ್ಲಿ ಸಮಾಜ ಸುಂದರವಾಗಿರುತ್ತದೆ. ಯುವಜನಾಂಗಕ್ಕೆ ಮಾರಕವಾಗಿರುವ ಮಾದಕ ವ್ಯಸನದ ವಿರುದ್ಧ ಒಗ್ಗೂಡಿ ಹೋರಾಟ ನಡೆಸಿ, ಸೌಹಾರ್ದ ಸಮಾಜ ನಿರ್ಮಿಸೋಣ. ಅಬ್ದುಲ್ ಅಝೀಝ್ ಪೊಳಲಿ ಬಾಬಾ ಫಕ್ರುದ್ದೀನ್ ಜುಮಾ ಮಸೀದಿ ಖತೀಬರು https://www.vijayavani.net/house-handover-program-2 https://www.vijayavani.net/rice-farming-demonstration

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net