

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಸಿ.ಬಿ.ಎಸ್.ಇ. ಶಾಲೆಯಲ್ಲಿ ನೂತನ ಗಿಗ್‌ಲ್ ಆ್ಯಂಡ್ ಗ್ರೋ ಮಕ್ಕಳ ಆಟದ ಮನೆಯನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ಮಂಜುಳಾ ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿದ್ದರು. ಎಕ್ಸಲೆಂಟ್ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಶ್ಮಿತಾ ಜೈನ್, ಸಂಸ್ಥೆ ಆಡಳಿತ ನಿರ್ದೇಶಕ ಡಾ.ಸಂಪತ್ ಕುವಾರ್, ಪ್ರಾಂಶುಪಾಲ ಸುರೇಶ್, ಶೈಕ್ಷಣಿಕ ಸಂಯೋಜಕ ಪುಷ್ಪರಾಜ್ ಮೊದಲಾದವರಿದ್ದರು.
ಸಾಧಕರಾದ ಮೀನಾಕ್ಷಿ ನಾರಾಯಣ, ಮುನಾವರ, ಪ್ರಕಾಶಿನಿ ಹೆಗ್ಡೆ, ವೈಲೆಟ್ ಡಿಸೋಜ, ಅಪೇಕ್ಷಾ ಪೂರ್ಣಚಂದ್ರ, ಬಿಂಧ್ಯಾ ಶರತ್ ಶೆಟ್ಟಿ, ರವ್ಯಾ ವಿಕಾಸ್, ಸರಿತಾ ಆಶೀರ್ವಾದ್, ಸಾರಿಕಾ ಬಂಗೇರ ಅವರನ್ನು ಗೌರವಿಸಲಾಯಿತು. ಶಿಕ್ಷಕಿ ಅಕ್ಷತಾ ನಿರೂಪಿಸಿದರು.