ಜನರ ಬೇಡಿಕೆಗೆ ಅನುಗುಣ ತಂಗುದಾಣ ನಿರ್ಮಾಣ : ಮಾಜಿ ಸಚಿವ ಬಿ.ರಮಾನಾಥ ರೈ ಅಭಿಮತ

New Project (24)
Published on

ಬಂಟ್ವಾಳ: ಜನರ ಬೇಡಿಕೆಗೆ ಅನುಗುಣವಾಗಿ ಇಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣಗೊಂಡಿದೆ. ಮುಂದಿನ ದಿನಗಳಲ್ಲಿ ಬಸ್ ನಿಲುಗಡೆಗೆ ಅನುಕೂಲವಾಗುವಂತೆ ಡಾಂಬರೀಕರಣ ಹಾಗೂ ಹೈಮಾಸ್ಕ್ ದೀಪದ ಅಳವಡಿಕೆ ಸಂಬಂಧಪಟ್ಟವರು ಮಾಡಲಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಲಯನ್ಸ್ ಕ್ಲಬ್ ಬಂಟ್ವಾಳದ 2025-26ನೇ ಸಾಲಿನ ಶಾಶ್ವತ ಯೋಜನೆಯಾಗಿ ಬಿ.ಸಿ.ರೋಡಿನ ಸೋಮಾಯಜಿ ಹೌಸ್ ಕಟ್ಟಡದ ಬಳಿ ನಿರ್ಮಾಣಗೊಂಡ ಲಯನ್ಸ್ ಆಶ್ರಯ ಪ್ರಯಾಣಿಕರ ತಂಗುದಾಣವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಲಯನ್ಸ್ ಕ್ಲಬ್ ಬಂಟ್ವಾಳದ ಸ್ಥಾಪಕಾಧ್ಯಕ್ಷ ಡಾ.ವಸಂತ ಬಾಳಿಗ ವಿದ್ಯುತ್ ವ್ಯವಸ್ಥೆ ಉದ್ಘಾಟಿಸಿದರು. ಪುರಸಭಾಧ್ಯಕ್ಷ ವಾಸು ಪೂಜಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್ ಶುಭಹಾರೈಸಿದರು. ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯರಾದ ವಿದ್ಯಾವತಿ ಪ್ರಮೋದ್ ಕುಮಾರ್, ಲೋಲಾಕ್ಷ ಶೆಟ್ಟಿ, ನಾಮನಿರ್ದೇಶಿತ ಸದಸ್ಯ ಜಗದೀಶ್ ಕುಂದರ್, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಇಸ್ಮಾಯಿಲ್, ಲಯನ್ಸ್ ಕ್ಲಬ್ ಬಂಟ್ವಾಳದ ನಿಯೋಜಿತ ಅಧ್ಯಕ್ಷ ರೋಹಿತಾಶ್ವ ಬಂಗ, ಮಾಜಿ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಮತ್ತಿತರರಿದ್ದರು. ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಸಹಕರಿಸಿದ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ದಿನೇಶ್ ಸಂಚಾಲಕ ಶ್ರೀಧರ ಅಮೀನ್, ಕಾರ್ಯಾಧ್ಯಕ್ಷ ಹರೀಶ್ ಅಂಚನ್, ಗುತ್ತಿಗೆದಾರ ಯತೀಶ್ ಕರ್ಕೇರ, ಸುನೀಲ್ ಬಿ., ರಾಜೇಶ್ ಸುವರ್ಣ, ಸುಧಾಕರ ಆಚಾರ್ಯ ಅವರನ್ನು ಗೌರವಿಸಲಾಯಿತು. ಲಯನ್ಸ್ ಸದಸ್ಯರಾದ ಮಧ್ವರಾಜ್ ಕಲ್ಮಾಡಿ, ಪ್ರಶಾಂತ್ ಕೋಟ್ಯಾನ್, ರಾಮಕೃಷ್ಣ ರಾವ್, ಪುಷ್ಪರಾಜ್ ಶೆಟ್ಟಿ, ಶ್ರೀನಿವಾಸ ಪೂಜಾರಿ, ದೇವಪ್ಪ ಪೂಜಾರಿ, ಡೋನಾಲ್ಡ್ ಬಂಟ್ವಾಳ ಮತ್ತಿತರರಿದ್ದರು. ಲಯನ್ಸ್ ಕ್ಲಬ್ ಬಂಟ್ವಾಳದ ನಿಯೋಜಿತ ಅಧ್ಯಕ್ಷ ರೋಹಿತಾಶ್ವ ಬಂಗ ಸ್ವಾಗತಿಸಿದರು. ನಾಗರಿಕ ಸೇವಾ ಸಮಿತಿ ಸಂಚಾಲಕ ಶ್ರೀಧರ ಅಮೀನ್ ಪ್ರಸ್ತಾವಿಸಿದರು. ಸುನೀಲ್ ಬಿ. ನಿರೂಪಿಸಿದರು. ನಿಯೋಜಿತ ಕಾರ್ಯದರ್ಶಿ ಡಾ.ದಿವ್ಯಾ ವಿ.ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net