ಆರಿ ಎಂಬ್ರೈಡರಿ ತರಬೇತಿ ಉದ್ಘಾಟನೆ

baikadi
ಆರಿ ಎಂಬ್ರೈಡರಿ ತರಬೇತಿ ಉದ್ಘಾಟನೆ ಜರುಗಿತು. ಪಂಚಾಯಿತಿ ಅಧ್ಯಕ್ಷೆ ಜಯಂತಿ, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು
Published on

ಬ್ರಹ್ಮಾವರ: ವಿಜಯ ಗ್ರಾಮೀಣ ಪ್ರತಿಷ್ಠಾನ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಎನ್‌ಆರ್‌ಎಲ್‌ಎಂ ಸಂಜೀವಿನಿ ಒಕ್ಕೂಟ, ಗ್ರಾಪಂ ಹಾರಾಡಿ ಬೈಕಾಡಿ ಸಹಯೋಗದಲ್ಲಿ 7 ದಿನಗಳ ಆರಿ ಎಂಬ್ರೈಡರಿ ತರಬೇತಿ ಉದ್ಘಾಟನೆ ಶುಕ್ರವಾರ ಬೈಕಾಡಿ ಅಂಬೇಡ್ಕರ್ ಭವನ ಸಭಾಂಗಣದಲ್ಲಿ ಜರುಗಿತು.
ಪಂಚಾಯಿತಿ ಅಧ್ಯಕ್ಷೆ ಜಯಂತಿ, ವಿಜಯ ಗ್ರಾಮೀಣ ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಶೆಟ್ಟಿ, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ತರಬೇತುದಾರೆ ನಿಶ್ಮಿತಾ ಉಪಸ್ಥಿತರಿದ್ದರು. ವಿಜಯ ಗ್ರಾಮೀಣ ಪ್ರತಿಷ್ಠಾನ ಸಿಬ್ಬಂದಿ ಕಾರ್ತಿಕ್ ಸಹಕರಿಸಿದ್ದರು. ಭಾರತೀಯ ವಿಕಾಸ ಟ್ರಸ್ಟ್ ತರಬೇತುದಾರ ರಾಘವೇಂದ್ರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾವತಿ ಪ್ರಾರ್ಥಿಸಿದರು. ಭವಿತಾ ಸ್ವಾಗತಿಸಿದರು. ಇಂದಿರಾ ವಂದಿಸಿದರು. ಎಂ.ಬಿ.ಕೆ.ಸೌಮ್ಯಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net