

ಚಿಕ್ಕೋಡಿ: ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಗುರುವಿನ ಸ್ಥಾನ ಪ್ರಮುಖ ಎಂದು ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎ.ಎಸ್. ಪಾಶ್ಚಾಪುರೆ ಹೇಳಿದರು.
ಪಟ್ಟಣದ ಕೇಶವ ಕಲಾಭವನದಲ್ಲಿ ಟಾಂಗ್ಯಾನಕೋಡಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಅರಬಾವಿ ಅವರ ಸೇವಾ ನಿವೃತ್ತ ಅಭಿನಂದನಾ ಸಮಾರಂಭಕ್ಕೆ ಈಚೆಗೆ ಚಾಲನೆ ನೀಡಿ ಮಾತನಾಡಿದರು.
ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ಚಂದ್ರಶೇಖರ ಅರಬಾವಿ ಸೇವೆ ಶ್ಲಾಘನೀಯ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ.ಮೇಕನಮರಡಿ ಮಾತನಾಡಿ, ಅರಬಾವಿ ಅವರ ಸಮಾಜಮುಖಿಯಾಗಿ ಕಾರ್ಯ ಇತರರಿಗೆ ಮಾದರಿ ಎಂದರು.
ನಿವೃತ್ತ ಶಿಕ್ಷಕ ಚಂದ್ರಶೇಖರ ಅರಬಾವಿ ಮಾತನಾಡಿ, ಎಲ್ಲರ ಸಹಕಾರ, ಪ್ರೀತಿಗೆ ಋಣಿ ಎಂದರು.ತಾಲೂಕಿನ ಶಿಕ್ಷಕರ ಸಂಘಟನೆ ಪದಾಧಿಕಾರಿಗಳು, ಅಭಿಮಾನಿಗಳು ಸತ್ಕರಿಸಿ, ಗೌರವಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎ.ಕುಂಬಾರ, ಅಪ್ಪಾಸಾಗೌಡ ಪಾಟೀಲ, ಗೌರಮ್ಮ ಅರಬಾವಿ, ಡಿ.ಎಸ್.ವಂಟಗೋಡಿ, ಎಂ.ಟಿ.ಜನಗೌಡರ, ಸುರೇಶ ಚೌಗಲಾ, ಎಸ್.ಎ.ಖಡ್ಡ, ಆರ್.ಕೆ.ಕಾಂಬಳೆ, ಎಸ್.ಎಸ್. ಧುಪದಾಳ, ಎಸ್.ಎಸ್. ಬೆಳಗಾವಿ, ಡಿ.ಆರ್.ಚಲವಾದಿ, ಸಿದ್ದಣ್ಣ ಮಗದುಮ್ಮ ಇತರರಿದ್ದರು. ವೈ.ಎಸ್.ಬುಡ್ಡಗೋಳ, ಜೆ.ಪಿ.ತಂಗಡಿ, ಎಸ್.ಡ.ಖಡ್ಡ ಪರಿಚಯಿಸಿದರು. ಎನ್.ಜಿ.ಪಾಟೀಲ ಸ್ವಾಗತಿಸಿದರು. ಪಿ.ಸಿ.ಪಾಯನ್ನವರ ನಿರೂಪಿಸಿದರು. ಉಮೇಶ ತೋಟದ ವಂದಿಸಿದರು.