ಇಮ್ರಾನ್ ಖಾನ್ ನಟನೆ ಸಲ್ಮಾನ್, ಶಾರುಖ್ ಅವರನ್ನು ಮೀರಿಸುವಂತಿದೆ; ವ್ಯಂಗ್ಯವಾಡಿದ ಪಾಕಿಸ್ತಾನಿ ನಾಯಕ

Imrhan Khan
Published on

ಪಾಕಿಸ್ತಾನ: ಹಕೀಕಿ ಆಝಾದಿ ಯಾತ್ರೆಯ ವೇಳೆ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಇಮ್ರಾನ್ ಖಾನ್ ಬಲಗಾಲಿಗೆ ಗಾಯವಾಗಿತ್ತು. ಇದರಿಂದ ಆಸ್ಪತ್ರೆ ಸೇರಿದ್ದ ಇಮ್ರಾನ್, ಇದೀಗ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಪಾಕಿಸ್ತಾನದ ಪ್ರಜಾಸತ್ತಾತ್ಮಕ ಚಳವಳಿಯ(PDM) ಮುಖ್ಯಸ್ಥ ಮೌಲಾನಾ ಫಝ್ಲುರ್ ರೆಹಮಾನ್, ಇಮ್ರನಾ ಖಾನ್ ಅವರನ್ನು ವ್ಯಂಗ್ಯವಾಡಿದ್ದಾರೆ.

ಫಝ್ಲುರ್ ರೆಹಮಾನ್ ಖಾಸಗಿ ಸಂದರ್ಶನದಲ್ಲಿ ಮಾತನಾಡುತ್ತಾ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗುಂಡಿನ ದಾಳಿಯಾಗಿರುವುದು ಘಟನೆ ಇದೊಂದು ನಾಟಕ. ಇಮ್ರಾನ್ ಖಾನ್ ನಟನೆ ಶಾರುಖ್ ಖಾನ್, ಸಲ್ಮಾನ್ ಖಾನ್ ಅವರನ್ನು ಮೀರಿಸುವಂತಿದೆ ಎಂದು ಹೇಳಿದ್ದಾರೆ.

ಅಲ್ಲದೇ, ಈ ಘಟನೆಯ ಮೂಲಕ ಇಮ್ರಾನ್ ಖಾನ್ ತಾನೊಬ್ಬ ಒಳ್ಳೆಯ ನಟ ಎಂಬುವುದನ್ನು ಜಗತ್ತಿಗೆ ತಿಳಿಸಿದ್ದಾರೆ. ಇಮ್ರಾನ್ ಮೇಲೆ ಗುಂಡಿನ ದಾಳಿಯಾದಾಗ ನಾನು ಮೊದಲು ಸಹಾನುಭೂತಿ ಹೊಂದಿದ್ದೆ. ಆದರೆ ಈಗ ನನಗಿದು ನಾಟಕ ಎಂದೆನಿಸುತ್ತಿದೆ. ಖಾನ್ ಅವರ ಕಾಲಿಗೆ ಆದ ಗಾಯ ನನ್ನಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net