ಜನರೇ ಬೀದಿಗಿಳಿಯಿರಿ ಎಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟ ಪ್ರಧಾನಿ ಇಮ್ರಾನ್​ ಖಾನ್​!

imran khan
Published on

ಇಸ್ಲಾಮಾಬಾದ್​: ತಮ್ಮ ರಾಜಕೀಯ ಭವಿಷ್ಯ ಅತಂತ್ರಕ್ಕೀಡಾಗಿರುವ ನಡುವೆ ತೀವ್ರ ಇಕ್ಕಟ್ಟು ಹಾಗೂ ಮುಜುಗರದ ಪರಿಸ್ಥಿತಿಗೆ ಒಳಗಾಗಿರುವ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್​ ಖಾನ್​ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಅವಿಶ್ವಾನ ನಿರ್ಣಯವನ್ನು ಎದುರಿಸುತ್ತಿರುವ ಪ್ರಧಾನಮಂತ್ರಿ ಇಮ್ರಾನ್​ ಖಾನ್​ ಭವಿಷ್ಯ ಅಯೋಮಯವಾಗಿದ್ದು, ಶನಿವಾರ ನಡೆದ ಸಾರ್ವಜನಿಕ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಅವಿಶ್ವಾಸ ಮಂಡನೆ ಮಾಡಿದ ವಿರೋಧಿಗಳನ್ನು ದೇಶದ್ರೋಹಿ ಎಂದು ಕರೆದರು.

ಅಷ್ಟೇ ಅಲ್ಲ, ಅಂಥವರ ವಿರುದ್ಧ ದೇಶದ ಇಂದು ಮತ್ತು ನಾಳೆ ಬೀದಿಗಿಳಿದು ಪ್ರತಿಭಟನೆ ಮಾಡುವ ಮೂಲಕ ಅವಿಶ್ವಾಸ ನಿರ್ಣಯವನ್ನು ವಿರೋಧಿಸಬೇಕು ಎಂದರು. ಬೇರೆ ದೇಶಗಳಲ್ಲಿ ಇಂಥದ್ದು ನಡೆದಿದ್ದರೆ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರು. ಇಲ್ಲಿ ನಾನೇ ನಿಮಗೆ ಇಂದು-ನಾಳೆ ಬೀದಿಗಿಳಿದು ಪ್ರತಿಭಟನೆ ಮಾಡುವಂತೆ ಕರೆ ನೀಡುತ್ತಿದ್ದೇನೆ ಎಂದರು. ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯ ವಿಚಾರ ಅಲ್ಲಿನ ಅಧಿವೇಶನದಲ್ಲಿ ಏ. 3ರಂದು ಚರ್ಚೆಗೆ ಬರಲಿರುವ ಹಿನ್ನೆಲೆಯಲ್ಲಿ ಅವರು ಈ ಕರೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net