

ಬಂಟ್ವಾಳ: ಮನಸ್ಸು ಮತ್ತು ಆರೋಗ್ಯ ವೃದ್ಧಿಗೆ ಕ್ರೀಡೆ ಅತ್ಯುತ್ತಮ ಸಾಧನ. ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಮೈಗೂಡಿಸಿಕೊಂಡು ಮನೆ ಹಾಗೂ ಸವಾಜಕ್ಕೆ ವಾದರಿಯಾಗಬೇಕು ಎಂದು ವಕೀಲೆ ಶೈಲಜಾ ರಾಜೇಶ್ ಹೇಳಿದರು.
ಗುರುವಾರ ಕಲ್ಲಡ್ಕ ಸರಕಾರಿ ವಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟದ ಧ್ವಜಾರೋಹಣ ವಾಡಿ ವಾತನಾಡಿದರು.
ಗೊಳ್ತಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಮ್ಯೂಸಿಯಂ ವಾಲೀಕ ಮಹಮ್ಮದ್ ಯಾಸಿರ್ ಮಕ್ಕಳ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿದರು. ತಾಲೂಕು ಪಂಚಾಯಿತಿ ವಾಜಿ ಅಧ್ಯಕ್ಷ ಪದ್ಮನಾಭ ರೈ ಶುಭ ಹಾರೈಸಿದರು. ಮಕ್ಕಳಿಂದ ಪಥಸಂಚಲನ, ವಿವಿಧ ಕ್ರೀಡಾ ಸಾಂಸ್ಕೃತಿಕ, ಶಾರೀರಿಕ ಪ್ರದರ್ಶನ ಕಾರ್ಯಕ್ರಮ ಜರುಗಿತು.
ರಾಜ್ಯ, ಜಿಲ್ಲಾ ಹಾಗೂ ತಾಲೂಕುಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ವಾಡಿದ ವಿದ್ಯಾರ್ಥಿಗಳಾದ ಯಶ್ವಿತ್, ರಿಶಾಂತ್, ಮೊಹಮ್ಮದ್ ನಿಪಾಲ್, ಶಮ್ರಿಬ್, ದೀಕ್ಷಾ ಪ್ರಭು, ಧೃತಿ, ಮನ್ವಿ ಅವರನ್ನು ಅಭಿನಂದಿಸಲಾಯಿತು.
ವಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕಲ್ಲಡ್ಕ ಶಾಲಾ ಶತವಾನೋತ್ಸವ ಬೆಳ್ಳಿಹಬ್ಬ ಸಮಿತಿ ವಾಜಿ ಅಧ್ಯಕ್ಷ ನಾಗೇಶ್ ಕೆ., ಗೊಳ್ತಮಜಲ್ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೇಶ್ ಕೊಟ್ಟಾರಿ, ಅಬ್ದುಲ್ ಹಮೀದ್, ಯೂಸುಫ್ ಹೈದರ್, ಶಾಲಾ ಹಿರಿಯ ವಿದ್ಯಾರ್ಥಿ ಸಂದ ಅಧ್ಯಕ್ಷ ಯತಿನ್ ಕುವಾರ್, ನಿವೃತ್ತ ದೈಹಿಕ ಶಿಕ್ಷಕ ಶಂಕರ್ ವಿ.ಜೆ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಧುಸೂದನ್ ಐತಾಳ್, ಉಪಾಧ್ಯಕ್ಷ ಚಂದನ್ ಜೈನ್, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಅಬೂಬಕರ್ ಅಶ್ರಫ್ ಸ್ವಾಗತಿಸಿದರು. ಶಿಕ್ಷಕಿ ಪವಿತ್ರ ಸನ್ಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕಿ ಸೌಮ್ಯಾ ಎ. ನಿರೂಪಿಸಿದರು. ಶಿಕ್ಷಕಿ ಸಿಂಥಿಯಾ ಮಾರ್ಟಿಸ್ ವಂದಿಸಿದರು.