ಅನುಷ್ಠಾನ ಎಂಬುದು ದೈವತ್ವದ ಪಥ

blank

ಶಿಕಾರಿಪುರ: ಮಾನವತ್ವದಿಂದ ದೈವತ್ವದ ಕಡೆಗೆ ಸಾಗುವ ಪಥವೇ ಅನುಷ್ಠಾನ. ಅಲ್ಲಿ ಭಾವ-ಅನುಭಾವಗಳ ಸಂಗಮವಿರುತ್ತದೆ. ಅನುಷ್ಠಾನ ಎಂಬುದು ಸಾಧನೆ. ಅದು ನಮ್ಮನ್ನು ಪರಮಾತ್ಮನನ್ನಾಗಿಸುತ್ತದೆ ಎಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಕಾಳೇನಹಳ್ಳಿಯಲ್ಲಿ ಗುರುವಾರ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಅನುಷ್ಠಾನಕ್ಕೆ ತೆರಳುವ ಮುನ್ನ ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮೌನ ಮನಸನ್ನು ಹದ ಮಾಡುತ್ತದೆ. ಸಾಧನೆಗೆ ಪ್ರೇರಣೆ ನೀಡುತ್ತದೆ. ದೋಷಗಳು ನಾಶವಾಗಿ ಪುಣ್ಯದ ಮಾರ್ಗದೆಡೆಗೆ ಸಾಗುವಂತೆ ಮಾಡುತ್ತದೆ ಎಂದರು.
ಕಾಳೇನಹಳ್ಳಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವರಪ್ರಸಾದಿಗಳು. ಅವರಲ್ಲಿರುವ ಸಂಕಲ್ಪ ಶಕ್ತಿ ಅನಂತ ಮತ್ತು ಅದ್ಭುತ. ಅವರು ಪ್ರತಿ ಸಲ ಅನುಷ್ಠಾನ ಮುಗಿಸಿ ಬಂದಾಗಲೂ ದೈವತ್ವದ ಸಂಪತ್ತು ಹೊತ್ತು ತರುತ್ತಾರೆ. ಅದನ್ನು ಸಂಕಷ್ಟದಲ್ಲಿರುವ ಭಕ್ತರಿಗೆ ಹಂಚುತ್ತಾರೆ. ಅವರ ಸಾಮೀಪ್ಯವೇ ಭಕ್ತರಿಗೆ ಆನಂದ ಉಂಟು ಮಾಡುತ್ತದೆ ಎಂದು ತಿಳಿಸಿದರು.
ಆಗಮ-ನಿರ್ಗಮನಗಳ ನಡುವೆ ನಮಗೆ ಭಗವಂತನ ಮತ್ತು ಗುರುವಿನ ಅನುಗ್ರಹವಾಗಬೇಕು. ಮನಸ್ಸಿನ ನಿಗ್ರಹದಿಂದ ಸಾಧನೆ ಸಾಧ್ಯ. ಸಂಯಮ, ಸಹಬಾಳ್ವೆ ನಮ್ಮ ಮೂಲಮಂತ್ರವಾಗಬೇಕು. ಆಗ ನಮಗೆ ಗುರುಗಳ ಅಭಯ, ಅನುಗ್ರಹ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ, ಇಲ್ಲಿನ ಮೃತ್ತಿಕೆಗೆ ಪುಣ್ಯದ ಲೇಪನ ಮಾಡಿದವರು ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು. ನಮ್ಮೆಲ್ಲರ ಪುಣ್ಯದ ಫಲವೆಂಬಂತೆ ಅವರನ್ನು ಹಿರಿಯ ಶ್ರೀಗಳು ಇಲ್ಲಿಗೆ ಕರೆತಂದು ಪಟ್ಟಾಧಿಕಾರ ಮಾಡಿದ್ದಾರೆ ಎಂದರು.
ಕಾಳೇನಹಳ್ಳಿಯ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ತಿಪ್ಪಾಯಿಕೊಪ್ಪದ ಶ್ರೀ ಮಹಂತ ಸ್ವಾಮೀಜಿ , ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ರಾಜ್ಯ ವೀರಶೈವ ಮಹಾಸಭಾ ನಿರ್ದೇಶಕ ಎನ್.ವಿ.ಈರೇಶ್, ತಾಲೂಕು ಅಧ್ಯಕ್ಷ ಸುಧೀರ್, ಸಂತೋಷ್, ಕೆ.ಜಿ.ಶಿವಪ್ಪಯ್ಯ, ರುದ್ರಪ್ಪಯ್ಯ, ಕುಮಾರಸ್ವಾಮಿ ಹಿರೇಮಠ ಇತರರಿದ್ದರು

Share This Article

ಬ್ರೆಡ್​​ ಇಲ್ಲದೆ ಮನೆಯಲ್ಲೇ ಮಾಡಿ ಸ್ಯಾಂಡ್ವಿಚ್​; ಇಲ್ಲಿದೆ ಸಿಂಪಲ್​ ವಿಧಾನ | Recipe

ತ್ವರಿತ ಉಪಹಾರಕ್ಕಾಗಿ ಸ್ಯಾಂಡ್ವಿಚ್ ಮಾಡುವುದು ಜನರ ಮೊದಲ ಆಯ್ಕೆಯಾಗಿದೆ. ಮಕ್ಕಳು ಟಿಫಿನ್ ಮುಗಿಸಿ ಅದೇ ಟಿಫಿನ್…

ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe

ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…

ಬಹಳ ಇಷ್ಟಪಟ್ಟು ಪನೀರ್​ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips

ನಾನ್​ವೆಜ್​​​​​​ ಇಷ್ಟಪಡದವರು ಪ್ರೋಟೀನ್​ಗಾಗಿ ಪನೀರ್​​​​ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…