ಅತ್ಯಂತ ಕಡಿಮೆ ಖರ್ಚಿನಲ್ಲಿ ಆಧುನಿಕ ಚಿಕಿತ್ಸೆ : ಡಾ.ರೇಣುಕಾಪ್ರಸಾದ್ ಕೆ.ವಿ. ಮಾಹಿತಿ

New Project (5)
Published on

ಸುಳ್ಯ: ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ಎಲ್ಲ ರೀತಿಯ ಆಧುನಿಕ ದಂತ ಚಿಕಿತ್ಸೆ ಕಡಿಮೆ ಖರ್ಚಿನಲ್ಲಿ ಲಭ್ಯವಿದ್ದು, ಹಲ್ಲು ಜೋಡಣೆ ಸೌಲಭ್ಯದ ಇಂಪ್ಲಾಂಟ್ ಡಿಪಾರ್ಟ್‌ಮೆಂಟ್ ಆರಂಭದೊಂದಿಗೆ ಕಾಲೇಜಿನ ಚಿಕಿತ್ಸೆ, ಅಧ್ಯಯನಕ್ಕೆ ಇನ್ನಷ್ಟು ಆಧುನಿಕ ಸ್ಪರ್ಶ ಬಂದಿದೆ ಎಂದು ಎಒಎಲ್‌ಇ ಕಮಿಟಿ ಬಿ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಹೇಳಿದ್ದಾರೆ.

ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ಇಂಪ್ಲಾಂಟ್ ಡಿಪಾರ್ಟ್‌ಮೆಂಟ್ ಉದ್ಘಾಟಿಸಿ ಮಾತನಾಡಿದರು.

ಎಒಎಲ್‌ಇ ಕಮಿಟಿ ಬಿ ಕಾರ್ಯದರ್ಶಿ ಡಾ.ಜ್ಯೋತಿ ಆರ್. ಪ್ರಸಾದ್, ನಿರ್ದೇಶಕಿ ಡಾ.ಅಭಿಜ್ಞಾ, ಡೆಂಟಲ್ ಕಾಲೇಜು ಎಕ್ಸಿಕ್ಯೂಟಿವ್ ಡೈರೆಕ್ಟರ್ ಮೌರ್ಯ ಆರ್. ಕುರುಂಜಿ, ಮಂಗಳೂರು ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಉಪನ್ಯಾಸಕ ಡಾ.ರಕ್ಷಿತ್ ಹೆಗ್ಡೆ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಎಂ.ಎಂ.ದಯಾಕರ್, ಡಾ.ಶೈಲಾ ಪೈ ಡಾ.ಕೃಷ್ಣಪ್ರಸಾದ, ಡಾ.ಸುಹಾಸ್ ರಾವ್, ಡಾ.ಜಯಪ್ರಸಾದ್ ಆನೆಕಾರ್, ಡಾ.ಪ್ರಸನ್ನ ಕುಮಾರ್, ಎಒಎಲ್‌ಇ ಕಮಿಟಿ ಬಿ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಕಾಲೇಜು ಆಡಳಿತಾಧಿಕಾರಿ ಮಾಧವ ಬಿ ಟಿ, ಕೆವಿಜಿ ಐಟಿಐ ಪ್ರಾಂಶುಪಾಲ ದಿನೇಶ್ ಮಡ್ತಿಲ, ಕೆವಿಜಿ ಡೆಂಟಲ್ ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಡಾ.ಮೋಕ್ಷಾ ನಾಯಕ್ ಸ್ವಾಗತಿಸಿದರು. ಡಾ.ವಜಿದಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net