

IMDb List: ವರ್ಷದ ಮೊದಲಾರ್ಧ ಮುಗಿದು ಇದೀಗ ದ್ವಿತೀಯಾರ್ಧ ಶುರುವಾಗಿದ್ದು, ಮೊದಲ ಆರು ತಿಂಗಳಲ್ಲಿ ಚಿತ್ರಪ್ರೇಮಿಗಳ ಎದುರಿಗೆ ಬಂದ ಹಲವಾರು ಭಾರತೀಯ ಸಿನಿಮಾಗಳ ಪೈಕಿ ಗೆಲುವು ಸಾಧಿಸಿದ್ದು ಕೆಲವೇ ಕೆಲವು. ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ತೆರೆಕಂಡ ಬಹುತೇಕ ಮಾಲಿವುಡ್, ಸ್ಯಾಂಡಲ್ವುಡ್, ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ್ದು ಕಡಿಮೆಯೇ. ಹೀಗಿರುವಾಗಲೇ ಐಎಂಡಿಬಿ ಅಗ್ರ 10 ಭಾರತೀಯ ಅತ್ಯಂತ ಜನಪ್ರಿಯ ಚಿತ್ರಗಳ ಪಟ್ಟಿಯನ್ನು ಪ್ರಕಟಿಸಿದೆ.
ಚಲನಚಿತ್ರ ರೇಟಿಂಗ್‌ಗಳು ಮತ್ತು ವಿಮರ್ಶೆಗಳಿಂದಲೇ ಹೆಚ್ಚಾಗಿ ಗುರುತಿಸಲ್ಪಟ್ಟ ಪ್ಲಾಟ್ಫಾರ್ಮ್ IMDb, ಇದೀಗ 2025ರ ಜನವರಿ 1ರಿಂದ ಜುಲೈ 1, 2025ರ ಅವಧಿಯಲ್ಲಿ ಭಾರತೀಯ ಯಾವೆಲ್ಲ ಚಿತ್ರಗಳು ಸಿನಿಮಾ ಪ್ರೇಕ್ಷಕರನ್ನು ಮೆಚ್ಚಿಸಿ, ಬಾಕ್ಸ್ ಆಫೀಸ್ ಗಳಿಕೆಯ ಜೊತೆಗೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ ಎಂಬುದರ ಶ್ರೇಯಾಂಕಗಳನ್ನು ತನ್ನ ಪಟ್ಟಿಯ ಮೂಲಕ ಬಿಡುಗಡೆಗೊಳಿಸಿದೆ. ದುರದೃಷ್ಟವಶಾತ್, ಈ ಪಟ್ಟಿಯಲ್ಲಿ ಟಾಲಿವುಡ್ ಮತ್ತು ಸ್ಯಾಂಡಲ್ವುಡ್ನ ಒಂದೇ ಒಂದು ಸಿನಿಮಾ ಕೂಡ ಸ್ಥಾನ ಪಡೆದಿಲ್ಲ.
1. ಛಾವಾ (ಹಿಂದಿ)
2. ಡ್ರ್ಯಾಗನ್ (ತಮಿಳು)
3. ದೇವ (ಹಿಂದಿ)
4. ರೈಡ್ 2 (ಹಿಂದಿ)
5. ರೆಟ್ರೋ (ತಮಿಳು)
6. ದಿ ಡಿಪ್ಲೊಮ್ಯಾಟ್ (ಹಿಂದಿ)
7. ಎಲ್ 2: ಎಂಪುರಾನ್ (ಮಲಯಾಳಂ)
8. ಸೀತಾರೆ ಜಮೀನ್ ಪರ್ (ಹಿಂದಿ)
9. ಕೇಸರಿ 2 (ಹಿಂದಿ)
10. ವಿದಾಮುಯಾರ್ಚಿ (ತಮಿಳು)