

ನವದೆಹಲಿ: ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಕೆಲ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಕಟ್ಟೆಚ್ಚರ ನೀಡಿದೆ.
ಶನಿವಾರ ಸಂಜೆಯೊಳಗೆ ಚಂಡಮಾರುತವಾಗಿ ಬದಲಾಗಲಿದ್ದು, ಭಾನುವಾರ ಸಂಜೆಯೊಳಗೆ ಒಡಿಶಾದಲ್ಲಿ ಭಾರೀ ಮಳೆಯಾಗಲಿದ್ದು, ಮೇ 10 ರ ಬಳಿಕ ಉತ್ತರ ಆಂದ್ರಪ್ರದೇಶ ಮತ್ತು ಒಡಿಶಾದ ಮೂಲಕ ಮಳೆ ಸಹಿತ ಬಿರುಗಾಳಿ 40-50 ಕಿ.ಮೀ. ವೇಗದವರೆಗೆ ಚಲಿಸಲಿದ್ದು, ವಾಯುವ್ಯ ಬಂಗಾಳ ಕೊಲ್ಲಿಯನ್ನು ತಲುಪಲಿದೆ ಎಂದು ಎಚ್ಚರಿಕೆ ನೀಡಿದೆ.
ಈ ನಡುವೆ ಉತ್ತರ ಭಾರತದಾದ್ಯಮತ ರಾಜಸ್ಥಾನ, ಹರಿಯಾಣ, ದಿಲ್ಲಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ವಿದರ್ಭ ಮಹಾರಾಷ್ಟ್ರದಲ್ಲಿ ಬಿಸಿಗಾಳಿ ಮಟ್ಟ ಮತ್ತಷ್ಟು ಏರಿಕೆಯಾಗಲಿದ್ದು, ಇದೂ ಕೂಡ ಮೇ 10 ರ ನಂತರ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಹೇಳಿದೆ.
ಶುಕ್ರವಾರ ಅಂಡಮಾನ್ ಸಮುದ್ರದಲ್ಲಿ ರೂಪಗೊಂಡಿರುವ ಕಡಿಮೆ ಒತ್ತಡದ ಬಿರುಗಾಳಿಯು ತೀವ್ರಗೊಂಡು ಮುಂದಿನ ವಾರದ ಆರಂಭದಲ್ಲಿ ಆಂದ್ರಪ್ರದೇಶ ಮತ್ತು ಒಡಿಶಾ ತೀರಗಳನ್ನು ತಲುಪುವ ಸಾಧ್ಯತೆ ಇದೆ,ಇದರಿಂದಾಗಿ ಪೂರ್ವ ಕರಾವಳಿ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಶುಕ್ರವಾರ ಹವಾಮಾಣ ಇಲಾಖೆ ತಿಳಿಸಿದೆ.