ಅಕ್ರಮ ಮರಳು ಸಾಗಾಟ

10MDG2
Published on

ಮುಂಡರಗಿ: ಐದು ಬೊಲೆರೋ ಹಾಗೂ ಒಂದು ಟ್ರ್ಯಾಕ್ಟರ್​ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 6 ಆರೋಪಿಗಳನ್ನು ಮುಂಡರಗಿ ಠಾಣೆ ಪೊಲೀಸರು ಕೊರ್ಲಹಳ್ಳಿ-ಶಿಂಗಟಾಲೂರ ಮಧ್ಯದಲ್ಲಿ ಭಾನುವಾರ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೇಶಪ್ಪ ಹನುಮಂತಪ್ಪ ಹಟ್ಟಿ, ಬಸವರಾಜ ಹುಚ್ಚೀರಪ್ಪ ಹುಯಿಲಗೋಳ, ಕೃಷ್ಣಾ ದುರಗಪ್ಪ ಲಮಾಣಿ, ಶಾಂತಪ್ಪ ಹಾಲಪ್ಪ ಕಮತರ, ಶಿವರಾಜ ದೇವಪ್ಪ ಡೋಣಿ, ಯಲ್ಲಪ್ಪ ಯಂಕಪ್ಪ ಹುಳಕಣ್ಣವರ ಬಂಧಿತ ಆರೋಪಿಗಳು. ಅವರಿಂದ ಅಂದಾಜು 20 ಸಾವಿರ ರೂ.ವೆಚ್ಚದ ಮರಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net