ಮದ್ಯ ಅಕ್ರಮ ಮಾರಾಟ ಅಡ್ಡೆಗೆ ದಾಳಿ

Liquor Mart
Published on

ಬೆಳ್ತಂಗಡಿ: ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮನೆಯ ತೋಟದಲ್ಲಿ ಶೇಖರಿಟ್ಟು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಡ್ಡೆ ಮೇಲೆ ಧರ್ಮಸ್ಥಳ ಪೊಲೀಸರು ದಾಳಿ ಮಾಡಿ ಮದ್ಯ ವಶಪಡಿಸಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಬೆಳ್ಮನಾರು ನಿವಾಸಿ ಪುರುಷೋತ್ತಮ(40) ಎಂಬಾತನ ಮನೆಯ ತೋಟದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಮದ್ಯ ಸಂಗ್ರಹಿಸಿಟ್ಟ ಮಾಹಿತಿ ಮೇರೆಗೆ ಜೂನ್ 16ರಂದು ಸಂಜೆ 6 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣಾ ಸಬ್‌ಇನ್‌ಸ್ಪೆಕ್ಟರ್ ಸಮರ್ಥ ಆರ್.ಗಾಣಿಗೇರ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಮನೆ ಹಾಗೂ ತೋಟದ ಮೇಲೆ ದಾಳಿ ನಡೆಸಿದ ಪೊಲೀಸರು 4.860 ಲೀಟರ್ 54 ಸ್ಯಾಚೆಟ್ 90 ಎಂ.ಎಲ್. ಮೈಸೂರು ಲ್ಯಾನ್ಸರ್ ವಿಸ್ಕಿ ಮದ್ಯ ವಶಪಡಿಸಿಕೊಂಡಿದ್ದಾರೆ. ಇದರ ಅಂದಾಜು ಮೌಲ್ಯ 2,700 ರೂ. ಆಗಿದ್ದು, ಆರೋಪಿ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net