ಇನ್ನೊಂದು ಪ್ರಕರಣದಲ್ಲಿ ಬೈಂದೂರು ಠಾಣಾ ವ್ಯಾಪ್ತಿಯ ಕಾಲ್ತೋಡು ಗ್ರಾಮದ ಕಪ್ಪಡಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ತೆಗೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು, ಸ್ಥಳದಲ್ಲಿದ್ದ ವಿಜಯ ಶೆಟ್ಟಿ (38) ಎಂಬವರನ್ನು ವಿಚಾರಣೆ ನಡೆಸಿದರು. ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದು, ಪಂಚರ ಸಮಕ್ಷಮದಲ್ಲಿ ಸ್ಥಳ ಪರಿಶೀಲಿಸಿ ವ್ಯಕ್ತಿಯನ್ನು ಬಂಧಿಸಿದರು. ಸ್ಥಳದಲ್ಲಿ ಸುಮಾರು 200 ಕೆಂಪುಕಲ್ಲು, ಕಲ್ಲು ಎಬ್ಬಿಸುವ ಟ್ರಾಲಿ ಯಂತ್ರ, ಕಲ್ಲುಗಳನ್ನು ಕಟ್ಟಿಂಗ್ ಮಾಡುವ ಟಿಲ್ಲರ್ ವಶಕ್ಕೆ ಪಡೆದಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.