

ದೆಹಲಿ: ಖ್ಯಾತ ನಟಿ ಇಲಿಯಾನಾ ಡಿಕ್ರೂಜ್ ತಾಯ್ತನದ ಸಂಭ್ರಮದಲ್ಲಿದ್ದು, ಮೊದಲ ಬಾರಿಗೆ ತಮ್ಮ ಬೇಬಿ ಬಂಪ್ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಆಶ್ಚರ್ಯಕರ ವಿಷಯವೆಂದರೆ ಇಲಿಯಾನಾ ಡಿಕ್ರೂಜ್ ಅವರಿಗೆ ಇನ್ನೂ ಮದುವೆ ಆಗಿಲ್ಲ.
‘ಬಂಪ್ ಅಲರ್ಟ್’ ಎಂಬ ಅಡಿಬರಹದ ಜತೆಗೆ ನಟಿಯು ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಸಹ ಪ್ರತಿಕ್ರಿಯೆ ನೀಡಿದ್ದು, ‘ಎಲ್ಲಿಯತನಕ ಈ ವಿಚಾರ ಮುಚ್ಚಿಡುತ್ತೀರಿ? ನೀವು ಆತನ ಹೆಸರು ಬಹಿರಂಗಪಡಿಸಲು ಇದು ಸೂಕ್ತ ಸಮಯ’ ಎಂದು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.
ಚಿತ್ರರಂಗದಲ್ಲಿನ ನಟ-ನಟಿಯರು ಸಾಮಾನ್ಯ ಜನರಿಗಿಂತ ಭಿನ್ನವಾಗಿದ್ದು, ಯಾವಗಲೂ ಡಿಫರೆಂಟ್ ನಿರ್ಧಾರಗಳನ್ನು ತೆಗೆದು ಕೊಳ್ಳುತ್ತಾರೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ. ಮತ್ತೊಂದು ಅಚ್ಚರಿ ಸಂಗತಿ ಎಂದರೆ ನಟಿ ಇಲಿಯಾನಾ ಮದುವೆಯಾಗದೆ, ಮಗುವಿನ ತಂದೆ ಯಾರೆಂದು ರಿವೀಲ್ ಮಾಡದೆ ಇತ್ತೀಚಿಗಷ್ಟೇ ತಾಯಿ ಆಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. (ಏಜೆನ್ಸೀಸ್)