ವಯಸ್ಸಿಗೆ ಮೊದಲೇ ನಿಮಗೆ ಬಿಳಿ ಕೂದಲಾಗಿವೆಯೇ? ಅದನ್ನು ಮತ್ತೆ ಕಪ್ಪು ಮಾಡಲು 4 ಸುಲಭ ಮನೆಮದ್ದು ಇಲ್ಲಿವೆ!

gray-hair
Noooo. But you can blame Mom and Dad for that gray hair, at least some of the time.
Published on

ಬೆಂಗಳೂರು: ಎಲ್ಲರಿಗೂ ಚೆನ್ನಾಗಿ ಕಾಣಿಸಬೇಕು ಎಂಬ ಆಸೆ ಇರುತ್ತದೆ. ವಯಸ್ಸಾದವರ ಹಾಗೆ ಕಾಣಲು ಯಾರಿಗೂ ಇಷ್ಟವಿರುವುದಿಲ್ಲ. ವಯಸ್ಸಾಗುವ ಲಕ್ಷಣಗಳು ಕೂದಲು ಮತ್ತು ಚರ್ಮದ ಮೇಲೆ ಕಾಣುತ್ತವೆ. ಬಿಳಿ ಕೂದಲು ವಯಸ್ಸಾಗುವಿಕೆಯ ಒಂದು ಲಕ್ಷಣ. ಆದರೆ ವಯಸ್ಸಾಗುವ ಮೊದಲೇ ಕೂದಲು ಬಿಳಿಯಾಗುವುದು ಚಿಂತೆ ಹುಟ್ಟಿಸುವ ವಿಷಯ. ಇದು ಮನಸ್ಸಿನ ಮೇಲೆ ಪರಿಣಾಮ ಬೀರುವುದರ ಜತೆಗೆ ಆತ್ಮವಿಶ್ವಾಸವನ್ನು ಕೂಡ ಕುಗ್ಗಿಸುತ್ತದೆ. ಒತ್ತಡವನ್ನು ಕೂಡ ಹೆಚ್ಚಿಸುತ್ತದೆ. ಕೂದಲು 25 ವರ್ಷಕ್ಕಿಂತ ಮೊದಲು ಬಿಳಿಯಾದರೆ ಅಕಾಲಿಕವಾಗಿ ಕೂದಲು ಬಿಳಿಯಾಗುವುದು ಎಂದು ಕರೆಯುತ್ತಾರೆ. ವಿಟಮಿನ್ ಬಿ 12 ಅಥವಾ ತೀವ್ರ ಕಬ್ಬಿಣ ಅಂಶದ ಕೊರತೆ ಇದಕ್ಕೆ ಕಾರಣ. ಸಾಕಷ್ಟು ಪ್ರೋಟೀನ್ ಮತ್ತು ಇತರ ಅಗತ್ಯ ವಿಟಮಿನ್​​ಗಳ ಕೊರತೆಯಿರುವ ಆಹಾರವು ಅಕಾಲಿಕವಾಗಿ ಕೂದಲು ಬಿಳಿಯಾಗಲು ಕಾರಣವಾಗುತ್ತದೆ.

ಹೇಗೆ ತಡೆಯಬೇಕು?

ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಲು ಪೌಷ್ಟಿಕ ಆಹಾರದ ಅಗತ್ಯವಿದೆ. ಹಸಿರು ತರಕಾರಿಗಳು, ಮೊಸರು ಮತ್ತು ತಾಜಾ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರ ಜತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಬಹುದು ಮತ್ತು ಕೂದಲಿನ ಗುಣಮಟ್ಟವನ್ನು ಸುಧಾರಿಸಬಹುದು. ಆದರೆ, ಈಗಾಗಲೇ ಇರುವ ಬಿಳಿ ಕೂದಲನ್ನು ಏನು ಮಾಡಬೇಕು? ಬಿಳಿ ಕೂದಲನ್ನು ಕಪ್ಪು ಮಾಡಲು ಸಹಾಯ ಮಾಡುವ ಹಲವಾರು ಪರಿಹಾರಗಳಿವೆ. ಕೂದಲಿಗೆ ಬಣ್ಣ ಹಚ್ಚುವ ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಬಳಸುವ ಅಗತ್ಯವಿಲ್ಲ. ಮನೆಮದ್ದುಗಳು ಬಿಳಿ ಕೂದಲನ್ನು ಕಡಿಮೆ ಮಾಡುತ್ತವೆ ಮತ್ತು ಕಪ್ಪಾಗಿಸುತ್ತವೆ.

1. ನೆಲ್ಲಿಕಾಯಿ ಮತ್ತು ಮೆಂತ್ಯ ಬೀಜದ ಹೇರ್ ಮಾಸ್ಕ್

ಒಣಗಿದ ನೆಲ್ಲಿಕಾಯಿಗೆ ಸ್ವಲ್ಪ ಮೆಂತ್ಯ ಬೀಜಗಳನ್ನು ತೆಗೆದುಕೊಂಡು ಗ್ರೈಂಡರ್​​ನಲ್ಲಿ ಪುಡಿ ಮಾಡಬೇಕು. ಪೇಸ್ಟ್ ತರಹ ಮಾಡುವುದಕ್ಕಾಗಿ ನೀರನ್ನು ಸೇರಿಸಬೇಕು. ಕೂದಲಿಗೆ ಅದನ್ನು ಹಚ್ಚಿ ರಾತ್ರಿಯಿಡೀ ಬಿಡಬೇಕು. ಮರುದಿನ ಬೆಳಗ್ಗೆ ಶಾಂಪೂನಿಂದ ತೊಳೆಯಬೇಕು. ಆಮ್ಲಾವು ವಿಟಮಿನ್ ಸಿ ಸಮೃದ್ಧ ಮೂಲವಾಗಿದೆ. ಮೆಂತ್ಯ ಬೀಜಗಳು ಕೂದಲಿನ ಗುಣಮಟ್ಟವನ್ನು ಸುಧಾರಿಸಲು ಪ್ರಯೋಜನಕಾರಿ ಪೋಷಕಾಂಶಗಳಿಂದ ತುಂಬಿವೆ. ಇವೆರಡೂ ಒಟ್ಟಾಗಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದರ ಜತೆಗೆ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ.

2. ಕರಿಬೇವಿನ ಸೊಪ್ಪು ಮತ್ತು ಕೊಬ್ಬರಿ ಎಣ್ಣೆ

ತೆಂಗಿನ ಎಣ್ಣೆಯಲ್ಲಿ ಕರಿಬೇವಿನ ಎಲೆಗಳು ಕಪ್ಪಾಗುವವರೆಗೆ ಕುದಿಸಬೇಕು. ಮಿಶ್ರಣ ತಣ್ಣಗಾದ ಮೇಲೆ ಕೂದಲಿಗೆ ಮಸಾಜ್ ಮಾಡಿ ರಾತ್ರಿಯಿಡೀ ಬಿಡಬೇಕು. ಮರುದಿನ ಬೆಳಗ್ಗೆ ಕೂದಲನ್ನು ಶಾಂಪೂ ಬಳಸಿ ತೊಳೆಯಬೇಕು. ಪ್ರತಿ ಬಾರಿ ತಲೆ ತೊಳೆಯುವಾಗ, ಈ ಎಣ್ಣೆಯನ್ನು ಕೂದಲಿಗೆ ಹಚ್ಚುವುದನ್ನು ಮರೆಯಬಾರದು. ಕರಿಬೇವಿನ ಎಲೆಗಳಲ್ಲಿರುವ ಬಿ ವಿಟಮಿನ್‌ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.

3. ಕಪ್ಪು ಚಹಾದ ಔಷಧ

ಒಂದು ಲೋಟ ನೀರು ಮತ್ತು 2 ಟೀ ಚಮಚ ಕಪ್ಪು ಚಹಾ ಎಲೆಗಳಿಗೆ ಒಂದು ಚಮಚ ಉಪ್ಪು ಸೇರಿಸಿ ಕುದಿಸಬೇಕು. ತಣ್ಣಗಾದ ನಂತರ ಒದ್ದೆ ಕೂದಲಿಗೆ ಈ ಮಿಶ್ರಣವನ್ನು ಬಳಸಬೇಕು. ಕೂದಲಿಗೆ ಬಣ್ಣ ಹಚ್ಚುವ ನೈಸರ್ಗಿಕ ವಿಧಾನ ಇದು. ಕಪ್ಪು ಚಹಾವು ನಿಮ್ಮ ಕೂದಲನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

4. ಬಾದಾಮಿ ಎಣ್ಣೆ ಮತ್ತು ನಿಂಬೆ ರಸ

ಬಾದಾಮಿ ಎಣ್ಣೆ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಬೇಕು. ಮಿಶ್ರಣವನ್ನು ನೆತ್ತಿ ಮತ್ತು ಕೂದಲಿನ ಮೇಲೆ ಚೆನ್ನಾಗಿ ಮಸಾಜ್ ಮಾಡಬೇಕು. 30 ನಿಮಿಷಗಳ ಕಾಲ ನೆನೆಯಲು ಬಿಟ್ಟು ಶಾಂಪೂ ಬಳಸಿ ತೊಳೆಯಬೇಕು. ಬಾದಾಮಿ ಎಣ್ಣೆಯಲ್ಲಿರುವ ವಿಟಮಿನ್ ಇ ಕೂದಲಿನ ಬೇರುಗಳನ್ನು ಪೋಷಿಸುತ್ತದೆ ಮತ್ತು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ನಿಂಬೆ ರಸದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. (ಏಜಿನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net