ನಿಮ್ಮ ಫೋನ್​ ನೀರಲ್ಲಿ ಬಿದ್ದು ಒದ್ದೆಯಾದ್ರೆ ಕೂಡಲೇ ಹೀಗೆ ಮಾಡಿ, ಹಾಳಾಗೋದು ತಡೆಯಿರಿ! ; ಇಲ್ಲಿದೆ ಉಪಯುಕ್ತ ಮಾಹಿತಿ | Damaged

blank

Damaged: ಇಂದಿನ ದೈನಂದಿನ ಜೀವನದಲ್ಲಿ ಮೊಬೈಲ್​ ಫೋನ್ ಒಂದು ಅಂಗವಾಗಿದೆ ಎಂದ್ರೆ ತಪ್ಪಾಗಲಾರದು. ಏಕೆಂದರೆ ಹೆಂಡ್ತಿಯನ್ನು ಬಿಟ್ರೂ ಮೊಬೈಲ್​ ಬಿಡಲ್ಲ ಎಂಬಾತಾಗಿದೆ ಜೀವನ. ಸಾಮಾನ್ಯವಾಗಿ ಎಲ್ಲೂ ಹೊದ್ರು ಮೊಬೈಲ್​ ನಮ್ಮ ಜತೆಯಲ್ಲಿರುತ್ತದೆ. ಹೀಗಾಗಿ, ಕೆಲ ಸಂರ್ಭಗಳಲ್ಲಿ ನಮಗೆ ತಿಳಿದೋ ಅಥವಾ ತಿಳಿಯೋದೆ ಮೊಬೈಲ್​ ಸಡನ್​ ಆಗಿ ನೀರಿಲ್ಲಿ ಬಿದ್ರೆ ಹಾಗೂ ಒದ್ದೆಯಾದ್ರೆ ಏನು ಮಾಡಬೇಕು ಅಂತಾನೇ ತಿಳಿಯದು. ಆಗಾಗಿ, ತಕ್ಷಣ ಎಚ್ಚೆತ್ತುಕೊಂಡು ಕೆಲ ಹಂತಗಳನ್ನು ಪಾಲಿಸಿದ್ರೆ ಕೂಡಲೇ ನಮ್ಮ ಮೊಬೈಲ್​ ಹಾಳಗೋದು ತಡೆಯಬಹುದು.

ನಿಮ್ಮ ಫೋನ್​ ನೀರಲ್ಲಿ ಬಿದ್ದು ಒದ್ದೆಯಾದ್ರೆ ಕೂಡಲೇ ಹೀಗೆ ಮಾಡಿ, ಹಾಳಾಗೋದು ತಡೆಯಿರಿ! ; ಇಲ್ಲಿದೆ ಉಪಯುಕ್ತ ಮಾಹಿತಿ | Damaged

ಹೋಳಿ ಹಬ್ಬದಂದು ಕೂಡ ಹುಷಾರ್​!

ಹೋಳಿಗೆ ಹೋಗುವುದೆಂದರೆ ನೀರು ಮತ್ತು ಬಣ್ಣಗಳಲ್ಲಿ ಮುಳುಗಿ ಹೋಗುವುದಂತೆ.ಹೀಗಾಗಿ ಫೋನ್​ ಕೂಡ ಹುಷಾರಾಗಿ ಇಟ್ಟುಕೊಳ್ಳಿ. ಅಲ್ಲದೆ, ಹಬ್ಬದಲ್ಲಿ ಫೋಟೋ ತೆಗೆಯುವಾಗ ಅಥವಾ ವೀಡಿಯೊ ತೆಗೆಯುವಾಗ ನೀರು ಫೋನ್‌ ಒಳಗೆ ಸೇರಿಕೊಳ್ಳುವ ಸಂಭವವಿರುತ್ತದೆ. ಫೋನ್ ಅನ್ನು ಜಲನಿರೋಧಕ(ವಾಟರ್​ ಫ್ರೂಪ್​) ಪೌಚ್ ಅಥವಾ ಕೇಸ್‌ನಲ್ಲಿ ಇಡುವ ಮೂಲಕ ನೀರಿನಲ್ಲಿ ಒದ್ದೆಯಾಗದಂತೆ ರಕ್ಷಿಸಬಹುದು, ಆದರೆ ಫೋಟೋ ತೆಗೆಯುವಾಗ ಅಥವಾ ವೀಡಿಯೊ ತೆಗೆಯುವಾಗ ನೀರು ಫೋನ್‌ಗೆ ಬಂದರೆ, ಭಯಪಡುವ ಅಗತ್ಯವಿಲ್ಲ. ಕೆಲವು ಹಂತಗಳನ್ನು ಪಾಲಿಸುವ ಮೂಲಕ ನಿಮ್ಮ ಫೋನ್ ನೀರಿನಲ್ಲಿ ಒದ್ದೆಯಾದರೆ ದೊಡ್ಡ ಹಾನಿಯಾಗದಂತೆ ನೀವು ಉಳಿಸಬಹುದು.

ನಿಮ್ಮ ಫೋನ್​ ನೀರಲ್ಲಿ ಬಿದ್ದು ಒದ್ದೆಯಾದ್ರೆ ಕೂಡಲೇ ಹೀಗೆ ಮಾಡಿ, ಹಾಳಾಗೋದು ತಡೆಯಿರಿ! ; ಇಲ್ಲಿದೆ ಉಪಯುಕ್ತ ಮಾಹಿತಿ | Damaged

ಒದ್ದೆಯಾದ್ರೆ ಕೂಡಲೇ ಈ ಹಂತಗಳು ಪಾಲಿಸಿ

1. ಸ್ಮಾರ್ಟ್‌ಫೋನ್ ಸ್ವೀಚ್​ ಆಫ್ ಮಾಡಿ
ಫೋನ್ ಒಳಗೆ ನೀರು ಬಂದಿದೆ ಎಂದು ನಿಮಗೆ ಅನಿಸಿದರೆ ತಕ್ಷಣ ಅದನ್ನು ಆಫ್ ಮಾಡಿ. ಫೋನ್ ಆಫ್ ಮಾಡುವುದರಿಂದ ಶಾರ್ಟ್ ಸರ್ಕ್ಯೂಟ್ ಅಪಾಯವನ್ನು ತಪ್ಪಿಸಬಹುದು. ಈ ರೀತಿಯಾಗಿ ಫೋನ್ ಅನ್ನು ದೊಡ್ಡ ಹಾನಿಯಿಂದ ರಕ್ಷಿಸಬಹುದು.

2.ಸಿಮ್ ಕಾರ್ಡ್ ಹೊರತೆಗೆಯಿರಿ
ಫೋನ್‌ಗೆ ನೀರು ಬಂದಿದ್ದರೆ, ಸಿಮ್ ಕಾರ್ಡ್ ತೆಗೆದುಹಾಕಿ. ನೀವು ಮೆಮೊರಿ ಕಾರ್ಡ್ ಬಳಸುತ್ತಿದ್ದರೆ ಅದನ್ನು ಸಿಮ್ ಕಾರ್ಡ್ ಜೊತೆಗೆ ಹೊರತೆಗೆಯಿರಿ. ನೀರು ನಿಲ್ಲುವುದರಿಂದ ಅವು ಹಾನಿಗೊಳಗಾಗುವ ಅಪಾಯವೂ ಇದೆ.

ನಿಮ್ಮ ಫೋನ್​ ನೀರಲ್ಲಿ ಬಿದ್ದು ಒದ್ದೆಯಾದ್ರೆ ಕೂಡಲೇ ಹೀಗೆ ಮಾಡಿ, ಹಾಳಾಗೋದು ತಡೆಯಿರಿ! ; ಇಲ್ಲಿದೆ ಉಪಯುಕ್ತ ಮಾಹಿತಿ | Damaged

3. ಫೋನ್ ಒಣಗಿಸಿ
ನೀರಿನಲ್ಲಿ ನೆನೆಸಿದ ಫೋನ್ ಅನ್ನು ಒಣಗಿಸಲು ಗಾಳಿಯಾಡುವ ಸ್ಥಳದಲ್ಲಿ ಇರಿಸಿ. ಅಗತ್ಯವಿದ್ದರೆ, ನೀವು ಅದನ್ನು ಫ್ಯಾನ್ ಮುಂದೆಯೂ ಇಡಬಹುದು. ಫೋನ್ ಅನ್ನು ಅಲುಗಾಡಿಸುವ ಮೂಲಕ ಚಾರ್ಜಿಂಗ್ ಪೋರ್ಟ್ ಮತ್ತು ಇತರ ಸ್ಥಳಗಳಿಂದ ನೀರನ್ನು ಒಣಗಿಸಬಹುದು. ಆದರೆ ಒಳಭಾಗಗಳಿಂದ ನೀರನ್ನು ಒಣಗಿಸಲು ಡ್ರೈಯರ್ ಇತ್ಯಾದಿಗಳನ್ನು ಬಳಸಬೇಡಿ.

4.ಸೇವಾ ಕೇಂದ್ರದಲ್ಲಿ ಸರಿಪಡಿಸಿಕೊಳ್ಳಿ
ಮೇಲಿನ ವಿಧಾನಗಳನ್ನು ಪ್ರಯತ್ನಿಸಿದ ನಂತರವೂ ಫೋನ್ ಕಾರ್ಯನಿರ್ವಹಿಸದಿದ್ದರೆ, ಅದನ್ನು ಸೇವಾ ಕೇಂದ್ರಕ್ಕೆ(ಮೊಬೈಲ್​ ರಿಪೇರಿ ಅಥವಾ ಕಸ್ಟಮರ್​ ಕೇರ್​ ಆಫಿಸ್​) ಕೊಂಡೊಯ್ಯಿರಿ.(ಏಜೆನ್ಸೀಸ್​)

ನಂಬರ್​ ಸೇವ್​ ಮಾಡದೇ Whatsapp ನಲ್ಲಿ ಇದೀಗ ಕರೆ ಮಾಡಬಹುದು; ಹೇಗಂತಿರಾ? ಈ ವಿಧಾನ ತಿಳಿಯಿರಿ

Status ಹಾಕೋರು ಇದನ್ನು ತಿಳಿದುಕೊಳ್ಳಲೇಬೇಕು; Whatsapp ನಲ್ಲಿ ಶೇರ್​ ಮಾಡಿದ ಫೋಟೋ ಫೇಸ್​​ಬುಕ್​​, ಇನ್​ಸ್ಟಾಗ್ರಾಮ್​ಗೂ ಹೋಗುತ್ತೆ!

 

Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…