ಈ 4 ಶುಭ ಸೂಚನೆಗಳು ಗೋಚರವಾದ್ರೆ ಶೀಘ್ರವೇ ನಿಮ್ಮ ಲಕ್​ ಖುಲಾಯಿಸಿದಂತೆ! | Luck

Untitled design - 2025-08-07T112823.279
Published on

Luck: ಪ್ರತಿಯೊಬ್ಬರ ಜೀವನದಲ್ಲಿ ನಾವು ಸಾಮಾನ್ಯವಾಗಿ ಈ ಸಣ್ಣ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ, ಆದರೆ ಸತ್ಯವೆಂದರೆ ಕೆಲವು ಚಿಹ್ನೆಗಳು ನಮಗೆ ಪ್ರೇರಣೆ ನೀಡುತ್ತವೆ, ಅವು ನಮ್ಮ ಆಲೋಚನೆಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ತಿರುಗಿಸುತ್ತವೆ ಮತ್ತು ಕಷ್ಟದ ಸಮಯಗಳಲ್ಲಿಯೂ ಸಹ ನಮ್ಮನ್ನು ಆಶಾವಾದಿಗಳಾಗಿರಿಸುತ್ತವೆ ಅದೇಗೆ ಎನ್ನೋದು ತಿಳಿಯೋಣ.

ವಾಸ್ತವವಾಗಿ, ನಮ್ಮ ದೈನಂದಿನ ಜೀವನದಲ್ಲಿ ಕೆಲವು ವಿಷಯಗಳಿವೆ, ಅದನ್ನು ಎಚ್ಚರಿಕೆಯಿಂದ ನೋಡಿದರೆ, ಅದು ಕೆಲವು ದೊಡ್ಡ ಬದಲಾವಣೆ ಅಥವಾ ಒಳ್ಳೆಯ ಸಮಯದ ಕಡೆಗೆ ಸೂಚಿಸುತ್ತದೆ. ಇವುಗಳನ್ನು ಶುಭ ಸೂಚನೆ ಎಂದು ಕರೆಯಲಾಗುತ್ತದೆ, ಪರಿಸ್ಥಿತಿ ಈಗ ಸರಿಯಾಗಿಲ್ಲದಿದ್ದರೂ, ದೇವರು ಖಂಡಿತವಾಗಿಯೂ ಏನಾದರೂ ಒಳ್ಳೆಯದನ್ನು ಮಾಡಲಿದ್ದಾನೆ ಎಂದು ಈ ಸೂಚನೆ ನಮಗೆ ಭರವಸೆ ನೀಡುತ್ತವೆ. ನಿಮ್ಮ ಜೀವನದಲ್ಲೂ ಹೊಸ ತಿರುವು ತರಬಹುದಾದ ಕೆಲವು ಅಂತಹ ಸೂಚನೆಗಳು ತಿಳಿಯೋಣ..

1.ಇದಕ್ಕಿದಂತೆ ಮಳೆಯಲ್ಲಿ ನೆನೆಯೋದು

ನೀವು ಮನೆಯಿಂದ ಎಲ್ಲೋ ಹೊರ ಹೋಗುತ್ತೀರಿ. ಏಕಾಏಕಿ ಮಳೆ ಬಂದ್ರೆ ಅದರಿಂದ ತಪ್ಪಿಸಿಕೊಳ್ಳಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗದಿದ್ದಾಗ ಮಳೆಯಲ್ಲಿ ಸಂಪೂರ್ಣವಾಗಿ ನೆನೆಯುತ್ತೀರಿ. ಇದನ್ನು ನೀವು ಕೆಟ್ಟದಾಗಿ ಭಾವಿಸಬೇಡಿ. ನಂಬಿಕೆಗಳ ಪ್ರಕಾರ, ಇದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂಬ ಸಂಕೇತತವಾಗಿದ್ದು, ಇದು ನಿಮ್ಮ ಜೀವನದಲ್ಲಿ ಹಣದ ಆಗಮನದ ಸೂಚನೆಯನ್ನು ಸೂಚಿಸುತ್ತದೆ.

2.ಪೂರ್ವಕ್ಕೆ ಮುಖ ಮಾಡಿ ಸ್ನಾನ ಮಾಡೋದು

ಸ್ನಾನ ಮಾಡುವಾಗ ದಿಕ್ಕು ಬಹಳ ಮುಖ್ಯ. ಪೂರ್ವಕ್ಕೆ ಮುಖ ಮಾಡಿ ಸ್ನಾನ ಮಾಡುವುದು ತುಂಬಾ ಒಳ್ಳೆಯದು ಇದು ಶುಭ ಎಂಬ ನಂಬಿಕೆ ಇದೆ. ಮತ್ತು ದೇಹವನ್ನು ಉಲ್ಲಾಸಗೊಳಿಸುತ್ತದೆ, ಜೊತೆಗೆ ಅದೃಷ್ಟವೂ ನಿಮಗೆ ಅನುಕೂಲಕರವಾಗಲು ಪ್ರಾರಂಭಿಸುತ್ತದೆ. ಇತರ ದಿಕ್ಕುಗಳಿಗೆ ಮುಖ ಮಾಡಿ ಸ್ನಾನ ಮಾಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

3.ಹಣ ಬೀಳುವುದು ಒಳ್ಳೆಯ ಉದ್ದೇಶ

ಯಾರಿಗಾದ್ರೂ ಹಣ ನೀಡುವಾಗ ಕೈಯಿಂದ ಜಾರಿ ನೆಲಕ್ಕೆ ಬಿದ್ರೆ ಭಯಪಡಬೇಡಿ. ಅದು ಶುಭ ಸೂಚನೆ ಎಂದು ಪರಿಗಣಿಸಲಾಗುತ್ತದೆ. ನಂಬಿಕೆ ಪ್ರಕಾರ, ದರರ್ಥ ನಿಮ್ಮ ಹಣ ಸರಿಯಾದ ಸ್ಥಳಕ್ಕೆ ಹೋಗುತ್ತಿದೆ ಮತ್ತು ನೀವು ಖಂಡಿತವಾಗಿಯೂ ಅದಕ್ಕೆ ಪ್ರತಿಫಲವನ್ನು ಪಡೆಯುತ್ತೀರಿ ಎಂದರ್ಥ.

4.ದೇವಾಲಯದ ಘಂಟೆ ಶಬ್ಧ ಕೇಳುವುದು

ನೀವು ಬೆಳಿಗ್ಗೆ ಬೇಗನೆ ಯಾವುದಾದರೂ ಪ್ರಮುಖ ಕೆಲಸಕ್ಕಾಗಿ ಅಥವಾ ಹೊಸ ಆರಂಭಕ್ಕಾಗಿ ಹೊರಟಾಗ, ನಂತರ ನೀವು ದೇವಾಲಯದ ಗಂಟೆ, ಶಂಖ ಅಥವಾ ಯಾವುದೇ ಸುಮಧುರ ವಾದ್ಯದ ಶಬ್ದವನ್ನು ಕೇಳಿದಾಗ, ನಿಮ್ಮ ಕೆಲಸವು ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಎಂದು ಭಾವಿಸಿ. ಇದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.(ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net