

Anushka Shetty : ನಟಿ ಅನುಷ್ಕಾ ಶೆಟ್ಟಿ. ಈ ಹೆಸರು ಕೇಳಿದಾಗ ತಕ್ಷಣ ನೆನಪಿಗೆ ಬರುವುದು ಅರುಂಧತಿ ಮತ್ತು ಬಾಹುಬಲಿ ಚಿತ್ರಗಳು. ಈ ಮಂಗಳೂರಿನ ಬ್ಯೂಟಿ ಈ ಹಿಂದೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ಗ್ಲಾಮರಸ್ ಪಾತ್ರಗಳನ್ನು ನಿರ್ವಹಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅದರಲ್ಲೂ ವಿಶೇಷವಾಗಿ 'ಬಿಲ್ಲಾ' ಸಿನಿಮಾದಲ್ಲಿನ ಸ್ವಿಮ್ಮಿಂಪೂಲ್ ದೃಶ್ಯದಲ್ಲಿ, ತಮ್ಮ ಸೌಂದರ್ಯದಿಂದಲೇ ಅನುಷ್ಕಾ ಜನಪ್ರಿಯರಾದರು.
ಆದಾಗ್ಯೂ, ಪರದೆಯ ಮೇಲೆ ಅನುಷ್ಕಾ ಅವರ ನಟನಾ ಕೌಶಲ್ಯವನ್ನು ಬಹಿರಂಗಪಡಿಸಿದ ಮೊದಲ ಚಿತ್ರವೆಂದರೆ ಅದು ಅರುಂಧತಿ. ಅದರ ನಂತರ, ಅನುಷ್ಕಾ ಅವರ ಸಿನಿಮಾ ಪ್ರಯಾಣವೇ ತುಂಬಾ ಬದಲಾಯಿತು. ಅವರೀಗ ಎಷ್ಟು ಎತ್ತರಕ್ಕೆ ತಲುಪಿದ್ದಾರೆಂದರೆ, ನೀವು ಯಾವುದೇ ಚಿತ್ರದಲ್ಲಿ ನಾಯಕಿ ಪಾತ್ರವನ್ನು ನೋಡಿದರೆ, ಅನುಷ್ಕಾ ಅವರು ಆ ಪಾತ್ರದಲ್ಲಿ ಇದ್ದರೆ ಇನ್ನೂ ಉತ್ತಮವಾಗಿ ನಟಿಸುತ್ತಿದ್ದರು ಎಂದು ನೀವು ಭಾವಿಸುತ್ತೀರಿ. ಅಷ್ಟರ ಮಟ್ಟಿಗೆ ಅನುಷ್ಕಾ ನಟನೆ ವೀಕ್ಷಕರಲ್ಲಿ ಬೇರೂರಿದೆ.
ಒಂದು ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡ ನಟಿ ಇದ್ದರೆ ಅದು ಅನುಷ್ಕಾ. ಅಂತಹ ಅದ್ಭುತ ನಟಿಗೆ ಈಗ 43 ವರ್ಷ. ಆದಾಗ್ಯೂ, ಅವರು ಅವಿವಾಹಿತರಾಗಿಯೇ ಉಳಿದಿದ್ದಾರೆ. ಅವರ ಪ್ರೇಮ ಜೀವನದ ಬಗ್ಗೆ ಅನೇಕ ವದಂತಿಗಳಿವೆ. ಆದರೆ, ಅದ್ಯಾವುದರ ಬಗ್ಗೆಯೂ ಅನುಷ್ಕಾ ಮಾತನಾಡಿಲ್ಲ. ಆದರೆ, ಇದೀಗ ತಮ್ಮ ಒಂದು ಲವ್ ಸ್ಟೋರಿಯ ಬಗ್ಗೆ ಅನುಷ್ಕಾ ಮಾತನಾಡಿದ್ದಾರೆ.
ಅನೇಕ ಜನರು ತಮ್ಮ ಬಾಲ್ಯದಲ್ಲಿ ಒಂದಲ್ಲ ಒಂದು ಲವ್ ಸ್ಟೋರಿಯನ್ನು ಹೊಂದಿರುತ್ತಾರೆ. ಅದೇ ರೀತಿ ಅನುಷ್ಕಾ ಕೂಡ ತಮ್ಮ ಬಾಲ್ಯದಲ್ಲಿ ಒಂದು ಪ್ರೇಮಕಥೆಯನ್ನು ಹೊಂದಿದ್ದಾರೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಇದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.
ನಾನು ಆರನೇ ತರಗತಿಯಲ್ಲಿ ಓದುತ್ತಿದ್ದಾಗ, ಅದೇ ತರಗತಿಯ ಸಹಪಾಠಿಯೊಬ್ಬ ನನ್ನ ಬಳಿಗೆ ಬಂದು, ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದನು. ಆ ವಯಸ್ಸಿನಲ್ಲಿ ಐ ಲವ್ ಯೂ ಎಂದರೆ ಏನು ಎಂದು ನನಗೆ ತಿಳಿದಿರಲಿಲ್ಲ. ಆದರೆ ನಾನು ಅವನಿಗೆ ಓಕೆ ಎಂದು ಹೇಳಿದೆ. ಅದನ್ನು ನೆನಪಿಸಿಕೊಂಡಾಗ ಅದು ಇನ್ನೂ ಆತನಿಗೆ ಒಂದು ಸಿಹಿ ಅನುಭವವನ್ನು ನೀಡುತ್ತದೆಯಂತೆ ಎಂದು ಅನುಷ್ಕಾ ಹೇಳಿದರು.
ಅನುಷ್ಕಾ ಶರ್ಮಾರ ಸಿನಿಮಾ ವಿಚಾರಕ್ಕೆ ಬರುವುದಾದರೆ, ಅವರು ನಾಯಕಿಯಾಗಿ ನಟಿಸಿರುವ ಘಾಟಿ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ಅದೇ ರೀತಿ, ಅನುಷ್ಕಾ ಅವರ ಮೊದಲ ಮಲಯಾಳಂ ಚಿತ್ರ ಸದ್ಯ ಚಿತ್ರೀಕರಣದ ಹಂತದಲ್ಲಿದೆ. (ಏಜೆನ್ಸೀಸ್)