ನನ್ನ ಎದೆ ಬಗೆದು ನೋಡಿ, ಅಲ್ಲಿ ಮೋದಿ ಮಾತ್ರ ಕಾಣಿಸುತ್ತಾರೆ: ಚಿರಾಗ್​ ಪಾಸ್ವಾನ್​..!

Chirag Paswan
Published on

ಪಾಟ್ನಾ: ಆಂಜನೇಯ ತನ್ನ ಎದೆಯನ್ನೇ ಬಗೆದು ಅಲ್ಲಿ ರಾಮನನ್ನು ತೋರಿಸಿ ಸ್ವಾಮಿನಿಷ್ಠೆ ಮೆರೆದಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ. ಇದೀಗ ಆಧುನಿಕ ಯುಗದಲ್ಲಿ ಒಬ್ಬ ಅಭಿನವ ಆಂಜನೇಯ ಹುಟ್ಟಿಕೊಂಡಿದ್ದಾನೆ. ಅದು ಮತ್ಯಾರೂ ಅಲ್ಲ, ಇತ್ತೀಚೆಗಷ್ಟೇ ಅಗಲಿದ ಎಲ್​ಜೆಪಿ ನಾಯಕ ರಾಮ್​ ವಿಲಾಸ್ ಪಾಸ್ವಾನ್​ ಅವರ ಪುತ್ರ ಚಿರಾಗ್ ಪಾಸ್ವಾನ್​.

ಬಿಹಾರ್ ಸಿಎಂ ನಿತೀಶ್​ ಕುಮಾರ್ ಅವರನ್ನು ಟೀಕಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲವು ನಾಯಕರು ಚಿರಾಗ್​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಾತ್ರವಲ್ಲ ತಮ್ಮ ಲೋಕಜನಶಕ್ತಿ ಪಕ್ಷದ ಅಭಿಯಾನದಲ್ಲಿ ಮೋದಿ ಭಾವಚಿತ್ರ ಬಳಸಿದ್ದಕ್ಕೆ ಚಿರಾಗ್​ ತೀವ್ರ ವಿರೋಧವನ್ನು ಎದುರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಚಿರಾಗ್​, ನನಗೆ ಪ್ರಧಾನಿ ಮೋದಿ ಅವರ ಫೋಟೋ ಬೇಕಾಗಿಲ್ಲ. ಅವರು ನನ್ನ ಹೃದಯದಲ್ಲೇ ಇದ್ದಾರೆ. ರಾಮನೆಡೆಗಿನ ಹನುಮನ ನಿಷ್ಠೆಯಂತೆ ನನ್ನದು. ನೀವು ನನ್ನ ಎದೆ ಬಗೆದು ನೋಡಿದರೆ ಅಲ್ಲಿ ನಿಮಗೆ ಮೋದಿ ಮಾತ್ರ ಕಾಣಿಸುತ್ತಾರೆ ಎಂಬುದಾಗಿ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net