ಗ್ರೀನ್ ಟೀ ಕುಡಿಯುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…

Green Tea
Published on

ನೀವು ಸಹ ಗ್ರೀನ್ ಟೀ ಕುಡಿಯುತ್ತಿದ್ದರೆ, ಅದರ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದ್ದರೆ ಈ ವಿಷಯಗಳತ್ತಲೂ ಗಮನಹರಿಸಲೇಬೇಕು.

ಖಾಲಿ ಹೊಟ್ಟೆಯಲ್ಲಿ ಕುಡಿಯಬೇಡಿ

ನೀವು ದಿನದ ಆರಂಭದಲ್ಲಿ ಗ್ರೀನ್ ಟೀ ಕುಡಿಯುತ್ತಿದ್ದರೆ ಅದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಏಕೆಂದರೆ ಗ್ರೀನ್ ಟೀಯಲ್ಲಿ ಟ್ಯಾನಿನ್ ಇದ್ದು, ಇದು ಹೊಟ್ಟೆಯಲ್ಲಿ ಆಸಿಡ್ ಹೆಚ್ಚಿಸುವ ಕೆಲಸ ಮಾಡುತ್ತದೆ. ಆದ್ದರಿಂದ ನೀವು ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಸೇವಿಸುವುದನ್ನು ತಪ್ಪಿಸಬೇಕು.

ತಿಂದ ತಕ್ಷಣ ಕುಡಿಯಬೇಡಿ

ಹಾಗೆಯೇ ನೀವು ಆಹಾರ ಸೇವಿಸಿದ ತಕ್ಷಣ ಗ್ರೀನ್ ಟೀ ಕುಡಿಯಬಾರದು ಎಂಬುದನ್ನು ಸಹ ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಊಟ ಮಾಡಿದ ತಕ್ಷಣ ಗ್ರೀನ್ ಟೀ ಕುಡಿದರೆ ಆಹಾರದಿಂದ ಸಿಗುವ ಪೋಷಕಾಂಶಗಳು ಸಿಗುವುದಿಲ್ಲ.

ಯಕೃತ್ತಿಗೆ ಹಾನಿ

ಇತ್ತೀಚಿನ ಅಧ್ಯಯನವು ದೀರ್ಘಾವಧಿ ಹೆಚ್ಚಿನ ಪ್ರಮಾಣದ ಗ್ರೀನ್ ಟೀ ಸೇವನೆಯು ಯಕೃತ್ತಿನ ಹಾನಿಗೆ ಕಾರಣವಾಗಬಹುದು ಎಂದು ತೋರಿಸಿದೆ. ಆದರೂ ಇದು ಕ್ಯಾನ್ಸರ್, ಹೃದಯರಕ್ತನಾಳದ ಕಾಯಿಲೆ, ಬೊಜ್ಜು ಮತ್ತು ಟೈಪ್ 2 ಡಯಾಬಿಟಿಸ್ ವಿರುದ್ಧ ರಕ್ಷಣೆ ನೀಡುತ್ತದೆ.

ರಕ್ತ ಹೀನತೆ ಸಮಸ್ಯೆ

ಅತಿಯಾದ ಗ್ರೀನ್ ಟೀ ಸೇವನೆಯು ದೇಹವು ಆಹಾರದಿಂದ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ರಕ್ತ ಹೀನತೆ ಸಮಸ್ಯೆಗೂ ಕಾರಣವಾಗುತ್ತದೆ.

ತಲೆ ನೋವಿನ ಸಮಸ್ಯೆ

ಹೆಚ್ಚಿನವರಲ್ಲಿ ಅತಿಯಾದ ಗ್ರೀನ್ ಟೀ ಸೇವನೆಯು ತಲೆ ನೋವಿನ ಸಮಸ್ಯೆಗೂ ಕಾರಣವಾಗಬಹುದು.

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳ ಕುರಿತು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net