ರಂಗಭೂಮಿಗೆ ಪ್ರೋತ್ಸಾಹ ದೊರೆತರೆ ಕಲಾವಿದನ ಬದುಕು ಹಸನು, ರಂಗಕರ್ಮಿ ಚಿದಾನಂದಕುಲುಕರ್ಣಿ ಅಭಿಮತ, ನಾಟಕ ನೋಡುವ ಹವ್ಯಾಸ ಬೆಳೆಸಿಕೊಳ್ಳಿ

01 Nela ph 2 Silver Jublee Abhinanadane
Published on

ನೆಲಮಂಗಲ: ರಾಜ್ಯದ ರಂಗಭೂಮಿ ಸುಧಾರಣೆಯಾಗದ ಹೊರತು ಕಲೆ ಕಲಾವಿದರ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ ಎಂದು ರಂಗಕರ್ಮಿ ಚಿದಾನಂದಕುಲುಕರ್ಣಿ ಅಭಿಪ್ರಾಯಪಟ್ಟರು.

ನಗರದ ಹರ್ಷ ಆಡಿಟೋರಿಯಂನಲ್ಲಿ ರಂಗಶಿಕ್ಷಣ ಕೇಂದ್ರದ ಬೆಳ್ಳಿ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ರಂಗಸಂವಾದದಲ್ಲಿ ಮಾತನಾಡಿದರು.

ಮರಾಠಿ ಹಾಗೂ ಬಂಗಾಳಿ ರಂಗಭೂಮಿಯಲ್ಲಿನ ಸದೃಢತೆ ರಾಜ್ಯದಲ್ಲಿ ಇಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಕಲಾವಿದರ ನರೆವಿಗೆ ಯಾರೊಬ್ಬರೂ ಬಾರದಿರುವುದು ಬೇಸರದ ಸಂಗತಿ. ಆನ್‌ಲೈನ್‌ನಲ್ಲಿ ರಂಗಕಾರ್ಯಾಗಾರ ಆಯೋಜಿಸಿದರೆ ನೋಂದಣಿಯಾಗಿದ್ದು 10 ಮಂದಿ ಮಾತ್ರ. ನಾಟಕ ನೋಡುವ ಹವ್ಯಾಸ ಬೆಳೆಸಿಕೊಂಡರೆ ಕಲೆ ಮತ್ತು ಕಲಾವಿದರ ಉಳಿವು ಸಾಧ್ಯ ಎಂದರು.

ಬದುಕಿನೊಂದಿಗೆ ಹಾಸುಹೊಕ್ಕಾಗಿರುವ ಕಲೆ, ಕಲಾ ಪ್ರಕಾರಗಳನ್ನು ಕೆಲವೇ ಮಂದಿ ಆಶ್ರಯಿಸಿದ್ದಾರೆ. ಕಲಾಕ್ಷೇತ್ರ ವಾಣಿಜ್ಯಗೊಳಿಸಿ ಕಲಾವಿದರನ್ನು ಸದೃಢಗೊಳಿಸುವ ಕೆಲಸವಾಗಬೇಕಿದೆ ಎಂದು ರಂಗನಿರ್ದೇಶಕ ಮಲ್ಲಿಕಾರ್ಜುನ ಮಹಾಮನಿ ಅಭಿಪ್ರಾಯಪಟ್ಟರು.

ನಾಟಕಗಳ ಪ್ರದರ್ಶನ: ತಾಲೂಕಿನ ಬೈರನಹಳ್ಳಿ ಬಿ.ಪ್ರಕಾಶ್‌ಮೂರ್ತಿ ರಚಿಸಿ ನಿರ್ದೇಶಿಸಿದ್ದ ಪಕ್ಕದೂರಿನ ಪದ್ಮ ಹಾಗೂ ಕವಿಕಾಳಿದಾಸ ರಚಿಸಿದ್ದ ದಿನೇಶ್‌ಚಿಕ್ಕಮಾರನಹಳ್ಳಿ ನಿರ್ದೇಶನದ ಅಭಿಜ್ಞಾನ ಶಾಕುಂತಲ ನಾಟಕ ಪ್ರದರ್ಶನಕ್ಕೆ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಾಗೇಶ್‌ಬೆಟ್ಟಕೋಟೆ ಚಾಲನೆ ನೀಡಿದರು.

ಮಾಹಿತಿ ಆಯೋಗದ ಮಾಜಿ ಆಯುಕ್ತ ಕೃಷ್ಣಮೂರ್ತಿ, ಬಿ.ಪ್ರಕಾಶ್‌ಮೂರ್ತಿ ರಚಿತ ನಾಟಕ ಕೃತಿ ಬಿಡುಗಡೆ ಮಾಡಿದರು. ಗಾಯಕ ಕಂಬದ ರಂಗಯ್ಯ ಅವರು ಭಾವಗೀತೆ ಹಾಡಿದರು. ನೃತ್ಯ ಕಲಾಕುಟೀರದ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ಮಾಡಿದರು.

ಆನ್‌ಲೈನ್‌ನಲ್ಲಿ ಏಕಾಪಾತ್ರಾಭಿನಯ ಸ್ಪರ್ಧೆ ವಿಜೇತರಿಗೆ ಬೆಂ.ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ನೀಮಾ ಜ್ಞಾನದೇವ್ ಹಾಗೂ ರಾಧಿಕಾರಂಜನಿ ನಗದುಬಹುಮಾನದ ವಿತರಿಸಿದರು.

ರಂಗಶಿಕ್ಷಣ ಕೇಂದ್ರದ ಹಳೆಯ ವಿದ್ಯಾರ್ಥಿ ಗಾಯಕ ಸಿ.ಎಚ್.ಸಿದ್ದಯ್ಯ, ರಂಗ ನಿರ್ದೇಶಕ ದಿನೇಶ್‌ಚಿಕ್ಕಮಾರನಹಳ್ಳಿ, ಕಲಾವಿದ ಕಿಟ್ಟಿಬೂದಿಹಾಳ್, ಪದದೇವರಾಜು, ನಾಟಕ ರಚನಾಕಾರ ಬಿ.ಪ್ರಕಾಶ್‌ಮೂರ್ತಿ ಹಾಗೂ ಇತರರನ್ನು ಗೌರವಿಸಲಾಯಿತು.

ರಂಗಶಿಕ್ಷಣ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಸಿದ್ದರಾಜು, ಖಜಾಂಚಿ ಎಂ.ಪುಷ್ಪಲತಾ, ನಿರ್ದೇಶಕರಾದ ಮುನಿಯಪ್ಪ, ಎನ್.ಜಿ.ವೆಂಕಟೇಶ್, ಎನ್.ಎಚ್.ರಾಮಕೃಷ್ಣ, ಕಾರ್ಯಕ್ರಮ ಸಂಘಟಕರಾದ ಡಾ.ಜಿ.ಗಂಗರಾಜು, ಬೂದಿಹಾಲ್ ಕಿಟ್ಟಿ, ಯಲ್ಲಪ್ಪ, ವಕೀಲಕನಕರಾಜು, ಪ್ರಕಾಶ್‌ಮೂರ್ತಿ, ಮಾರುತಿ, ಬಿ.ಆರ್.ಪ್ರದೀಪ್, ಸಾಹಿತಿ ಶಿವಲಿಂಗಯ್ಯ, ಮುಖಂಡ ಕೆ.ಕೃಷ್ಣಪ್ಪ, ಕಲಾವಿದ ಪ್ರಕಾಶ್, ಪುಟ್ಟರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net