ಸ್ವಾರ್ಥದ ಬದುಕು ಅತಿರೇಕವಾದರೆ ಮನುಷ್ಯತ್ವ ದೂರ

22ATHANIGRAMIN1
Published on

ಅಥಣಿ ಗ್ರಾಮೀಣ: ಶರಣರ ನುಡಿಗಳು, ವಚನ ಪುರಾಣಗಳ ಮಾತು ಕಷ್ಟ ಕಾಲದಲ್ಲಿ ನೆನಪಿಸಿಕೊಂಡರೆ ಬದುಕಿನ ಸಮಸ್ಯೆಗೆ ದಾರಿತೋರುತ್ತದೆ ಎಂದು ಮೈಗೂರಿನ ಗುರುಬಸಯ್ಯ ಮಹಾರಾಜರು ಹೇಳಿದರು.

ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಸಂಗಮೇಶ್ವರ ಮಹಾರಾಜರ ಮಠದಲ್ಲಿ ಶುಕ್ರವಾರ ಶ್ರಾವಣ ಮಾಸ ನಿಮಿತ್ತ ೧ ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಪ್ರವಚನ ಸಮಾರೋಪ ಹಾಗೂ ವಿಮಲಬ್ರಹ್ಮ ನಿರೂಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಣ, ಅಧಿಕಾರ, ಬಂಗಾರ, ಆಸ್ತಿ ಗಳಿಕೆಯಿಂದ ಪ್ರಾಪಂಚಿಕ ಆಸೆ ಹೆಚ್ಚಾಗುತ್ತದೆ ಹಾಗೂ ಪರಸ್ಪರ ಅಸೂಯೆ, ಸ್ವಾರ್ಥ ಅತಿರೇಕವಾಗಿ ಮನುಷ್ಯತ್ವ ದೂರವಾಗುತ್ತದೆ. ಆಗ ಆಗಬಾರದ ಘಟನೆಗಳು ನಡೆದಾಗ ಪಶ್ಚಾತಾಪಪಟ್ಟರೂ ಪ್ರಯೋಜನವಿರಲ್ಲ. ಇಂತಹ ಘಟನೆ ನಿಭಾಯಿಸಲು ಪ್ರವಚನ ಸಹಕಾರಿ ಎಂದರು.

ಸಂಗಪ್ಪ ಮಹಾರಾಜರು ಮಾತನಾಡಿ, ನಾನು, ನನ್ನದು ಎಂಬ ಹುಚ್ಚುತನದಲ್ಲಿ ಮನುಷ್ಯ ಕರುಳಬಳ್ಳಿಯ ನೆರೆಹೊರೆಯವರನ್ನು ನೋಡುವುದಿಲ್ಲ. ಇದು ಮಾನವ ಪ್ರಪಂಚದ ವಿಪರ್ಯಾಸವೇ ಸರಿ ಎಂದರು.

ದುಂಡಪ್ಪ ಮಹಾರಾಜರು ದಾಸಭೋದ ವಾಚಿಸಿದರು. ಸಂಗಮೇಶ್ವರ ಮಹಾರಾಜರ ಗದ್ದುಗೆಗೆ ಮಹಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಲ್ಲಪ್ಪ ಮಹಾರಾಜರು, ಮಾರುತಿ ಮಹಾರಾಜರು, ಚನ್ನಬಸಪ್ಪ ಮಹಾರಾಜರು, ಅಣ್ಣಪ್ಪ ಬಸರಿಖೋಡಿ, ಪ್ರಕಾಶ ಮಹಾರಾಜರು, ಬಸಪ್ಪ ಕೆಂಪಣ್ಣವರ, ಮುತ್ತಪ್ಪ ಅಥಣಿ, ಬಸಪ್ಪ ಪಾಟೀಲ, ಬಸಪ್ಪ ಟೋಪಗಿ, ಸಂಗಪ್ಪ ಜನಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net