More

    ಅಗತ್ಯವಿದ್ದರೆ ಕೋವಿಡ್ ಚಿಕಿತ್ಸೆಗೆ ಇನ್ನೂ 20 ಸಾವಿರ ಬೆಡ್: ಡಿಸಿಎಂ ಅಶ್ವತ್ಥನಾರಾಯಣ

    ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ಚಿಕಿತ್ಸೆಗಾಗಿ ಈಗಾಗಲೇ 70 ಸಾವಿರ ಹಾಸಿಗೆಗಳನ್ನು ಮೀಸಲಿಟ್ಟಿದೆ. ಸರ್ಕಾರದ ಆಸ್ಪತ್ರೆಗಳಲ್ಲಿ 35 ಸಾವಿರ ಮತ್ತು ಖಾಸಗಿ ಆಸ್ಪತ್ರೆಗಳ ಮೂಲಕ 35 ಸಾವಿರ ಬೆಡ್ ಒದಗಿಸಲಾಗಿದೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
    ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 50 ಸಾವಿರ ಬೆಡ್‍ಗಳು ಆಮ್ಲಜನಕ ಪೂರೈಸುವ ಸಾಮರ್ಥ್ಯ ಹೊಂದಿವೆ. 950 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆಯೂ ನಡೆಯುತ್ತಿದೆ. 1,200 ಮೆ. ಟನ್ ಆಮ್ಲಜನಕ ಸರಬರಾಜಿಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸೂಚಿಸಿದ್ದು, ಅಗತ್ಯವಿದ್ದರೆ ಹಾಸಿಗೆ ಸಾಮರ್ಥ್ಯವನ್ನು 10 ರಿಂದ 20 ಸಾವಿರದಷ್ಟು ಹೆಚ್ಚಿಸಲಾಗುವುದು ಎಂದು ಹೇಳಿದರು.

    ಕೋವಿಡ್ ರೋಗಿಗಳ ಸಂಖ್ಯಾ ಹೆಚ್ಚಳಕ್ಕೆ ಅನುಗುಣವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರ ಸಂಘಟನಾ ಪ್ರಯತ್ನದಿಂದ ಸೌಕರ್ಯ ಹೆಚ್ಚಿಸುತ್ತಿದೆ ಎಂದರು. ಬಿಜೆಪಿಯ ಎಲ್ಲ ಕಾರ್ಯಕರ್ತರು ಕೋವಿಡ್ ನಿಯಂತ್ರಣಕ್ಕೆ ಬೂತ್ ಮಟ್ಟದಲ್ಲಿ ಸರ್ವ ರೀತಿಯ ನೆರವು ನೀಡುತ್ತಿದ್ದಾರೆ. ಮಾಸ್ಕ್, ಸ್ಯಾನಿಟೈಸರ್, ವೈದ್ಯಕೀಯ ಸೇವೆ ಕಲ್ಪಿಸುತ್ತಿದ್ದಾರೆ. ಇದಕ್ಕಾಗಿ ಪಕ್ಷವು 250 ಕೇಂದ್ರಗಳನ್ನು ಆರಂಭಿಸಿದೆ ಎಂದು ತಿಳಿಸಿದರು.

    ರಾಜ್ಯಕ್ಕೆ ಏಪ್ರಿಲ್ 21ರಿಂದ ಮೇ 9ವರೆಗೆ 3.02 ಲಕ್ಷ ಡೋಸ್ ರೆಮ್​ಡೆಸಿವಿರ್ ಇಂಜೆಕ್ಷನ್ ಮಂಜೂರಾಗಿತ್ತು. ಆ ಪೈಕಿ ಇನ್ನೂ 70 ಸಾವಿರ ಇಂಜೆಕ್ಷನ್ ಡೋಸ್ ಬಳಕೆಗೆ ಬಾಕಿ ಇದೆ. ಎಲ್ಲ ಜಿಲ್ಲೆಗಳಿಗೂ ಅದನ್ನು ಒದಗಿಸಲಾಗುವುದು. ಮುಂದಿನ ಒಂದು ವಾರಕ್ಕೆ 2.68 ಲಕ್ಷ ಇಂಜೆಕ್ಷನ್ ಡೋಸ್ ಮಂಜೂರಾಗಿದೆ. ದಿನಕ್ಕೆ 37 ಸಾವಿರ ಡೋಸ್ ಲಭಿಸಲಿದೆ ಎಂದು ವಿವರಿಸಿದರು.

    ಇದನ್ನೂ ಓದಿ: ಭಾರತಕ್ಕೆ ಕರೊನಾ ಮೂರನೇ ಅಲೆ ಪ್ರವೇಶ ಯಾವತ್ತು ಗೊತ್ತಾ?; ಇಲ್ಲಿದೆ ನೋಡಿ ಮಾಹಿತಿ…

    ಆರ್​ಟಿಪಿಸಿಆರ್​ ಟೆಸ್ಟ್​ಗಾಗಿ ಒಂದು ಪ್ರಯೋಗಾಲಯ ಇದ್ದುದನ್ನು ಸರಕಾರಿ ಮಟ್ಟದಲ್ಲೇ 91ಕ್ಕೆ ಏರಿಸಲಾಗಿದೆ. ಖಾಸಗಿಯಲ್ಲಿ 150 ಲ್ಯಾಬ್ ಇದೆ. ಸರ್ಕಾರಿ ಲ್ಯಾಬ್‍ಗಳಲ್ಲಿ 1.05 ಲಕ್ಷ ಪರೀಕ್ಷೆಗೆ ಸಾಮರ್ಥ್ಯ ಇದೆ. ಖಾಸಗಿಯಲ್ಲೂ ದಿನಕ್ಕೆ 77 ಸಾವಿರದಷ್ಟು ಪರೀಕ್ಷೆ ಮಾಡಲು ಅವಕಾಶವಿದೆ. ಅಲ್ಲದೆ ಅಗತ್ಯವಿರುವಲ್ಲಿ 7 ಶೇಕಡಾ ಟೆಸ್ಟ್ ನಡೆಯುತ್ತಿದೆ. 24 ಗಂಟೆಯೊಳಗಡೆ ವರದಿ ಕೊಡಲಾಗುತ್ತಿದೆ. ವಿಳಂಬಿತ ಪ್ರತಿ ಟೆಸ್ಟ್​ಗೆ 100ರಿಂದ 150 ರೂ. ದಂಡ ಹಾಕಲಾಗುತ್ತಿದೆ ಎಂದು ಹೇಳಿದರು.

    ಆಸ್ಪತ್ರೆಗೆ ಸೇರುವ ಅಗತ್ಯ ಇಲ್ಲದವರನ್ನು ದಾಖಲಿಸುತ್ತಿರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಇರುವ ಬೆಡ್‍ಗಳನ್ನು 100 ಶೇಕಡಾ ಸಮರ್ಪಕ ಬಳಕೆಗೆ ಮುಂದಾಗಲಿದ್ದೇವೆ ಎಂದರು. ಬೆಂಗಳೂರಿನಲ್ಲಿ 2 ಸಾವಿರ ಕೋವಿಡ್ ಕೇರ್ ಸೆಂಟರ್ ಬೆಡ್‍ಗಳಿವೆ. ಖಾಸಗಿ ಹೋಟೆಲ್‍ಗಳಲ್ಲಿ ಸ್ಟೆಪ್ ಡೌನ್ ಸೌಲಭ್ಯದಡಿ ಖಾಸಗಿ ಆಸ್ಪತ್ರೆ ಮೂಲಕ ಒಂದು ಸಾವಿರ ಬೆಡ್‍ಗಳಿವೆ. ಇತರ ಜಿಲ್ಲೆಗಳಲ್ಲೂ ಕೋವಿಡ್ ಕೇರ್ ಸೆಂಟರ್ ಇದ್ದು ಸೋಂಕಿತರನ್ನು ವರ್ಗಾಯಿಸಲಾಗುತ್ತಿದೆ. ಸಹಾಯವಾಣಿ ಕರೆ ಬಳಿಕ ಸೋಂಕಿತರನ್ನು ದಾಖಲಾತಿ ಮಾಡುತ್ತಿದ್ದೇವೆ. ಆಕ್ಸಿಜನ್ ಬೆಡ್‍ಗೆ ಸಂಬಂಧಿಸಿ ಖಾಸಗಿ ಆಸ್ಪತ್ರೆಗೆ ಹಣಕಾಸಿನ ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದರು.

    ಇದನ್ನೂ ಓದಿ: ಕೆಎಎಸ್ ಅಧಿಕಾರಿ ಚೇಂಬರ್‌ನ ವಾಷ್ ರೂಮ್​ನಲ್ಲಿ ದಂಪತಿಯ ಶವ ಪತ್ತೆ; ಭೀಕರವಾಗಿ ಕೊಲೆ ಮಾಡಿದ ಹಂತಕರು…

    ಬೋಯಿಂಗ್ ಕಂಪನಿಯವರು 500 ಬೆಡ್, ಡಿಫೆನ್ಸ್​ನವರು 300 ಬೆಡ್‍ಗಳನ್ನು ನಗರದಲ್ಲಿ ಒದಗಿಸಲಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಪ್ರಯತ್ನ ಮಾಡಿದ್ದಾರೆ. ಎಚ್‍ಎಎಲ್ ಸೇರಿ ಹಲವು ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂದೆ ಬಂದಿವೆ. ಆಸ್ಪತ್ರೆಗಳ ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲಾಗುವುದು. 3 ಕೋಟಿ ವ್ಯಾಕ್ಸಿನ್‍ಗೆ ಸರ್ಕಾರ ಬೇಡಿಕೆ ಮುಂದಿಟ್ಟಿದೆ. ಸಮರ್ಪಕ ಪೂರೈಕೆ ಆರಂಭವಾದ ಕೂಡಲೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದರು. ಜಿಂದಾಲ್ ಕಂಪನಿಗೆ ಸಂಪುಟ ಉಪ ಸಮಿತಿ ವರದಿ ಪಡೆದು ಹೆಚ್ಚುವರಿ ಭೂಮಿಯನ್ನು ಸೇಲ್ ಡೀಡ್ ಮಾಡಿಕೊಡಲಾಗಿದೆ. ಈ ಕುರಿತು ಸಂಶಯ ಇರುವ ಶಾಸಕರಿಗೆ ಮಾಹಿತಿ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಲಾಕ್‍ಡೌನ್ ಯಶಸ್ವಿಗಾಗಿ ಕೆಲವು ಪೂರಕ ಸೌಲಭ್ಯ ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಜತೆ ಚರ್ಚೆ ಮಾಡಿ ಮುಖ್ಯಮಂತ್ರಿಗಳು ಈ ಲಾಕ್‍ಡೌನ್ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಸಂಪೂರ್ಣವಾಗಿ ಬೆಂಬಲ ನೀಡಲಿದೆ ಎಂದರು.

    ಇದನ್ನೂ ಓದಿ: ಧೂಮಪಾನಿಗಳು-ಸಸ್ಯಾಹಾರಿಗಳಲ್ಲಿ ಕೋವಿಡ್ ಸೋಂಕು ಸಾಧ್ಯತೆ ಕಡಿಮೆ; ಸಿಎಸ್​ಐಆರ್ ಸಮೀಕ್ಷೆಯಲ್ಲಿ ಬಹಿರಂಗ

    ಲಾಕ್‍ಡೌನ್ ಯಶಸ್ವಿ ದೃಷ್ಟಿಯಿಂದ ನಾಳೆ ಸಂಜೆ 7 ರಿಂದ 37 ಸಂಘಟನಾ ಜಿಲ್ಲೆಗಳಲ್ಲಿ ಬಿಜೆಪಿ ಆನ್‍ಲೈನ್ ಸಭೆಗಳನ್ನು ಸಂಘಟಿಸಲಿದೆ. ಹೋಂ ಐಸೋಲೇಷನ್‍ಗೆ ಆದ್ಯತೆ ನೀಡುವಂತೆ ಮನವರಿಕೆ ಮಾಡಲಾಗುವುದು. ಶಿಸ್ತುಬದ್ಧವಾಗಿ ವ್ಯಾಕ್ಸಿನೇಶನ್ ನೀಡಲು ನೆರವಾಗುವ ಬಗ್ಗೆ ನಾಳೆಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

    ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಫುಲ್ ಬ್ಯುಸಿ, ನೋ ವರ್ಕ್ ಎಂಬಂತಿದ್ದಾರೆ. ಟೀಕಿಸುವುದೊಂದೇ ವಿರೋಧ ಪಕ್ಷದ ಕೆಲಸವಾಗಿದೆ. ಅವರು ಬಹಳ ಬ್ಯುಸಿ ಇದ್ದಾರೆ. ಆದರೆ ಕೆಲಸ ಇಲ್ಲ. ಅದಕ್ಕಾಗಿಯೇ ಟೀಕೆ ಮುಂದುವರಿಸಿದ್ದಾರೆ ಎಂದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಭಾಗವಹಿಸಿದ್ದರು.

    ಭಾರತದಲ್ಲಿ ದಾಖಲೆ ಬರೆದ ಕರೊನಾ ಸಾವು! ಒಂದೇ ದಿನ 4 ಸಾವಿರಕ್ಕೂ ಅಧಿಕ ಮಂದಿ ಮೃತ

    ಯಾಕ್ರೀ ಕೀ ಕಿತ್ತುಕೊಳ್ತೀರಿ.. ನೀವೇನು ಬೈಕ್​ಗೆ ಬಂಡವಾಳ ಹಾಕಿದ್ದೀರಾ? ಪೊಲೀಸರಿಗೆ ಅವಾಜ್​ ಹಾಕಿದ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts