More

    Rinky Chakma Cancer Death: ಇವೆಲ್ಲಾ ಸ್ತನ ಕ್ಯಾನ್ಸರ್ ಆರಂಭಿಕ ಲಕ್ಷಣಗಳು, ನಿರ್ಲಕ್ಷ್ಯ ಮಾಡಲೇಬೇಡಿ

    ಬೆಂಗಳೂರು: ಮಾಜಿ ಮಿಸ್‌ ಇಂಡಿಯಾ ಸ್ಪರ್ಧಿ ರಿಂಕಿ ಚಕ್ಮಾ ಸ್ತನ ಕ್ಯಾನ್ಸರ್‌ನಿಂದಾಗಿ 28 ನೇ ವಯಸ್ಸಿನಲ್ಲಿ ನಿಧನರಾದರು. ರಿಂಕಿ ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಫೆಬ್ರವರಿ 22, 2024 ರಂದು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದ ರಿಂಕಿ ವೆಂಟಿಲೇಟರ್‌ ಬೆಂಬಲದಲ್ಲಿದ್ದರು. ಆಕೆಗೆ 2022 ರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು.

    ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಪುರುಷರಿಗಿಂತ ಹೆಚ್ಚು. ಸಾಮಾನ್ಯವಾಗಿ ಮಹಿಳೆಯರು 50 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್​​​ಗೆ ಗುರಿಯಾಗುತ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ, ಸ್ತನ ಕ್ಯಾನ್ಸರ್ ಪ್ರಕರಣಗಳು ಚಿಕ್ಕ ವಯಸ್ಸಿನಲ್ಲೇ ಮಹಿಳೆಯರಲ್ಲಿ ಕಂಡುಬರುತ್ತವೆ. ರಿಂಕಿ ಚಕ್ಮಾ ಕೂಡ ಕೇವಲ 26 ನೇ ವಯಸ್ಸಿನಲ್ಲಿ ಈ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದಾರೆ.

    ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಲಕ್ಷಣಗಳು
    ಸ್ತನ ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ. ಅನೇಕ ಸ್ತನ ಕ್ಯಾನ್ಸರ್ ರೋಗಲಕ್ಷಣಗಳು ವ್ಯಾಪಕವಾಗಿ ಬದಲಾಗುತ್ತವೆ. ಸ್ತನ ಕ್ಯಾನ್ಸರ್​​ನ ಕೆಲವು ಆರಂಭಿಕ ಲಕ್ಷಣಗಳ ಬಗ್ಗೆ ತಿಳಿಯೋಣ…

    * ಸ್ತನದ ಗಾತ್ರ ಮತ್ತು ಆಕಾರದಲ್ಲಿ ಬದಲಾವಣೆ.
    * ಎದೆಯ ಸುತ್ತ ಬಟಾಣಿಯಂತಹ ಸಣ್ಣ ಗಡ್ಡೆಯ ಭಾವನೆ.
    * ಮುಟ್ಟಿನ ಸಮಯದಲ್ಲಿ ಅಂಡರ್ ಆರ್ಮ್ ಅಥವಾ ಸ್ತನದ ಸುತ್ತ ಉಂಡೆಗಳು ಕಾಣಿಸಿಕೊಳ್ಳುತ್ತವೆ.
    * ಸ್ತನ ಅಥವಾ ಮೊಲೆತೊಟ್ಟುಗಳ ಚರ್ಮದಲ್ಲಿ ಬದಲಾವಣೆಗಳು.
    * ಚರ್ಮದ ಅಡಿಯಲ್ಲಿ ಗಟ್ಟಿಯಾದ ಅಮೃತಶಿಲೆಯಂತಹ ಹಾಗೆ ಹೊಂದಿರುವುದು.
    * ಮೊಲೆತೊಟ್ಟುಗಳಿಂದ ಸ್ವಲ್ಪ ರಕ್ತಸ್ರಾವ ಅಥವಾ ದ್ರವ ವಿಸರ್ಜನೆ.

    ಸ್ತನ ಕ್ಯಾನ್ಸರ್‌ಗೆ ಕಾರಣಗಳು
    ಸ್ತನ ಕ್ಯಾನ್ಸರ್‌ನ ಹಿಂದೆ ಹಲವು ಕಾರಣಗಳಿರಬಹುದು. ಆನುವಂಶಿಕತೆಯ ಹೊರತಾಗಿ, ಇದು ಜೀವನಶೈಲಿಗೆ ಸಂಬಂಧಿಸಿರಬಹುದು. ಸ್ತನ ಕ್ಯಾನ್ಸರ್​​​​ನ ಹಿಂದೆ ಹಲವು ಅಂಶಗಳಿವೆ ಎಂದು ಸಂಶೋಧನೆ ಕಂಡುಹಿಡಿದಿದೆ.

    ವಯಸ್ಸು
    55 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಮತ್ತು ಪುರುಷರು ಸ್ತನ ಕ್ಯಾನ್ಸರ್ ಬರುವ ಅಪಾಯವನ್ನು ಹೊಂದಿರುತ್ತಾರೆ.

    ಜೆನೆಟಿಕ್ಸ್
    ಆನುವಂಶಿಕ ಕಾರಣಗಳಿಂದಾಗಿ, 15 ಪ್ರತಿಶತ ಜನರು ಸ್ತನ ಕ್ಯಾನ್ಸರ್ ಬರುವ ಅಪಾಯವನ್ನು ಹೊಂದಿರುತ್ತಾರೆ.

    ಧೂಮಪಾನ
    ತಂಬಾಕು ಸೇವನೆಯು ವಿವಿಧ ರೀತಿಯ ಕ್ಯಾನ್ಸರ್‌ಗೆ ಕಾರಣವಾಗಿದೆ. ಇದರಲ್ಲಿ ಸ್ತನ ಕ್ಯಾನ್ಸರ್ ಕೂಡ ಸೇರಿದೆ.

    ಸ್ಥೂಲಕಾಯತೆ
    ಅತಿಯಾಗಿ ತೂಕ ಹೆಚ್ಚಾಗುವುದು ಕ್ಯಾನ್ಸರ್ ಅನ್ನು ಸಹ ಆಹ್ವಾನಿಸಬಹುದು.

    ಜಪಾನಿಯರ ಈ ಸಲಹೆಗಳನ್ನು ಅನುಸರಿಸಿದರೆ 100 ವರ್ಷಗಳ ಕಾಲ ಸುಂದರವಾಗಿ ಬದುಕಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts