ಭಾರತದಲ್ಲಿ ದಾಖಲೆ ಬರೆದ ಕರೊನಾ ಸಾವು! ಒಂದೇ ದಿನ 4 ಸಾವಿರಕ್ಕೂ ಅಧಿಕ ಮಂದಿ ಮೃತ

ನವದೆಹಲಿ: ಭಾರತದಲ್ಲಿ ಕರೊನಾ ಸೋಂಕಿನ ಸಂಖ್ಯೆ ದಿನನಿತ್ಯ ಏರಿಕೆ ಕಾಣುತ್ತಿದೆ. ಪ್ರತಿದಿನ ನೂತನ ದಾಖಲೆಯನ್ನು ಬರೆಯುತ್ತಿರುವ ಸೋಂಕು ಶುಕ್ರವಾರದಂದು ದಾಖಲೆಯೊಂದನ್ನು ನಿರ್ಮಿಸಿದೆ. ಇದೇ ಮೊದಲನೇ ಬಾರಿಗೆ ದೇಶದಲ್ಲಿ ಕೇವಲ 24 ಗಂಟೆಗಳಲ್ಲಿ 4 ಸಾವಿರಕ್ಕೂ ಅಧಿಕ ಮಂದಿ ಕರೊನಾಗೆ ಬಲಿಯಾಗಿದ್ದಾರೆ. ಶುಕ್ರವಾರ ದೇಶಾದ್ಯಂತ 4,187 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಒಂದೇ ದಿನದಲ್ಲಿ 4.01 ಲಕ್ಷ ಪ್ರಕರಣ ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 37,23,446ಕ್ಕೆ ಏರಿಕೆಯಾಗಿದೆ. ಈವರೆಗೆ ಸತ್ತವರ ಸಂಖ್ಯೆ 2.38 ಲಕ್ಷ ದಾಟಿದೆ. ಇದೊಂದೇ ವಾರದಲ್ಲಿ … Continue reading ಭಾರತದಲ್ಲಿ ದಾಖಲೆ ಬರೆದ ಕರೊನಾ ಸಾವು! ಒಂದೇ ದಿನ 4 ಸಾವಿರಕ್ಕೂ ಅಧಿಕ ಮಂದಿ ಮೃತ