More

    ಭಾರತದಲ್ಲಿ ದಾಖಲೆ ಬರೆದ ಕರೊನಾ ಸಾವು! ಒಂದೇ ದಿನ 4 ಸಾವಿರಕ್ಕೂ ಅಧಿಕ ಮಂದಿ ಮೃತ

    ನವದೆಹಲಿ: ಭಾರತದಲ್ಲಿ ಕರೊನಾ ಸೋಂಕಿನ ಸಂಖ್ಯೆ ದಿನನಿತ್ಯ ಏರಿಕೆ ಕಾಣುತ್ತಿದೆ. ಪ್ರತಿದಿನ ನೂತನ ದಾಖಲೆಯನ್ನು ಬರೆಯುತ್ತಿರುವ ಸೋಂಕು ಶುಕ್ರವಾರದಂದು ದಾಖಲೆಯೊಂದನ್ನು ನಿರ್ಮಿಸಿದೆ. ಇದೇ ಮೊದಲನೇ ಬಾರಿಗೆ ದೇಶದಲ್ಲಿ ಕೇವಲ 24 ಗಂಟೆಗಳಲ್ಲಿ 4 ಸಾವಿರಕ್ಕೂ ಅಧಿಕ ಮಂದಿ ಕರೊನಾಗೆ ಬಲಿಯಾಗಿದ್ದಾರೆ.

    ಶುಕ್ರವಾರ ದೇಶಾದ್ಯಂತ 4,187 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಒಂದೇ ದಿನದಲ್ಲಿ 4.01 ಲಕ್ಷ ಪ್ರಕರಣ ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 37,23,446ಕ್ಕೆ ಏರಿಕೆಯಾಗಿದೆ. ಈವರೆಗೆ ಸತ್ತವರ ಸಂಖ್ಯೆ 2.38 ಲಕ್ಷ ದಾಟಿದೆ. ಇದೊಂದೇ ವಾರದಲ್ಲಿ ನಾಲ್ಕು ದಿನ 4 ಲಕ್ಷಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ.

    ಜನವರಿ ವೇಳೆಗೆ ಕಡಿಮೆಯಾಗಿದ್ದ ಸೋಂಕು ಮಾರ್ಚ್​ನಲ್ಲಿ ಮತ್ತೆ ಏರುಮುಖ ಕಂಡಿತ್ತು. ಮಾರ್ಚ್​ನಲ್ಲಿ ದಿನಕ್ಕೆ ಸರಾಸರಿ 20 ಸಾವಿರ ಪ್ರಕರಣ ದೃಢವಾಗುತ್ತಿತ್ತು. ಅದಾದ ಮೇಲೆ ಏಪ್ರಿಲ್​ನಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿದ್ದು, ಒಂದೇ ತಿಂಗಳಲ್ಲಿ 66 ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ಮೇ ತಿಂಗಳಿನಲ್ಲಿ ಆ ದಾಖಲೆ ಮುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸರಿಯಾದ ಕ್ರಮ ಅನುಷ್ಠಾನವಾದರೆ ಕರೊನಾದ ಮೂರನೇ ಅಲೆಯನ್ನು ತಡೆಯಬಹುದು ಎಂದು ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದೆ. (ಏಜೆನ್ಸೀಸ್​)

    ಕೋವಿಡ್‌ ಬಿಕ್ಕಟ್ಟು ನಿಭಾಯಿಸಲು ಸರ್ಕಾರಕ್ಕೆ ಎಚ್‌ಡಿ ಕುಮಾರಸ್ವಾಮಿ ಹತ್ತು ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts