ಸಿಂಧೂ ನದಿಗೆ ಭಾರತ ಅಣೆಕಟ್ಟು ಕಟ್ಟಿದ್ರೆ.. ಪಾಕಿಸ್ತಾನ ಧ್ವಂಸ ಮಾಡುತ್ತೆ: ಪಾಕ್ ಸಚಿವ ಖವಾವಾ ಆಸಿಫ್​ ಬೆದರಿಕೆ | Indus River

dk - 2025-05-03T160807.464
Published on

Indus River : ಜಮ್ಮು-ಕಾಶ್ಮೀರದ ಪಹಲ್ಗಾಮ್​ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ಭಾರತ ಸರ್ಕಾರ ಕಠಿಣ ಕ್ರಮಗಳನ್ನು ನಿರ್ಧರಿಸಿದ್ದು, ಎರಡು ದೇಶಗಳ ನಡುವೆ ಯುದ್ಧ ಕಾರ್ಮೋಡ ಮೂಡಿದೆ. ಇದರ ನಡುವೆ ಭಾರತದ ವಿರುದ್ಧ ಪಾಕ್ ಸಚಿವರು ನಾಲಿಗೆ ಹರಿಬಿಡುತ್ತಿದ್ದಾರೆ.

ಒಂದು ವೇಳೆ ಭಾರತ ಸರ್ಕಾರ ಸಿಂಧೂ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿಸಿದರೆ ಅದನ್ನು ಪಾಕಿಸ್ತಾನ ಧ್ವಂಸ ಮಾಡುತ್ತದೆ ಎಂದು ಪಾಕ್ ರಕ್ಷಣಾ ಸಚಿವ ಖವಾವಾ ಆಸಿಫ್​ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ.

ಸಿಂಧೂ ನದಿ ಒಪ್ಪಂದದಡಿ ಪಾಕಿಸ್ತಾನಕ್ಕೆ ಬರಬೇಕಾದ ನೀರನ್ನು ತಿರುಗಿಸಲು ನದಿಗೆ ಅಡ್ಡಲಾಗಿ ಕಟ್ಟುವ ಅಣೆಕಟ್ಟುಗಳ ಮೇಲೆ ದಾಳಿ ಮಾಡಲಾಗುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾನೆ ಎಂದು ವರದಿಯಾಗಿದೆ.

ಪಾಕ್​ ಸಚಿವ ಹೇಳಿದ್ದೇನು..?

"ಭಾರತ ಸಿಂಧೂ ನದಿಯ ನೀರನ್ನು ಬೇರೆಡೆಗೆ ತಿರುಗಿಸಿದರೆ, ಅದು ಪಾಕಿಸ್ತಾನದ ವಿರುದ್ಧದ ಅಕ್ರಮಣವಾಗುತ್ತದೆ." ನದಿಯಲ್ಲಿ ಅವರು ಏನೇ ನಿರ್ಮಾಣ ಕೈಗೊಂಡರೂ, ಪಾಕಿಸ್ತಾನ ಅದನ್ನು ನಾಶಪಡಿಸುತ್ತದೆ" ಎಂದು ಹೇಳಿದ್ದಾರೆ.

ಭಯೋತ್ಪಾದನೆ ದಾಳಿ ಬಳಿಕ ಸಿಂಧು ನದಿ ನೀರು ಒಪ್ಪಂದವನ್ನು ಸ್ಥಗಿತ ಸೇರಿದಂತೆ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ಎಲ್ಲಾ ವಿಶೇಷ ವೀಸಾಗಳನ್ನು ರದ್ದುಗೊಳಿಸುವುದು. ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಬಂದ್​ ಮತ್ತು ಅಮೃತಸರದ ಅಟ್ಟಾರಿ-ವಾಘಾ ಗಡಿಯನ್ನು ಮುಚ್ಚುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಸರ್ಕಾರ ಹಲವಾರು ಕ್ರಮಗಳನ್ನು ಭಾರತ ಸರ್ಕಾರ ಈಗಾಲೇ ತೆಗೆದುಕೊಂಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net